ದುಬಾರಿ ಬೆಲೆಯ ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಲ್ಎಸ್500 ಸೆಡಾನ್ ಕಾರು ಮಾದರಿಯಲ್ಲಿ ಮತ್ತೊಂದು ಹೊಸ ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಲೆಕ್ಸಸ್ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿರುವ ಎಲ್ಎಸ್500 ನಿಶಿಜಿನ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.2.22 ಕೋಟಿ ಬೆಲೆ ಹೊಂದಿದೆ. ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಹೊಂದಿದ್ದರೂ ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಆಧುನಿಕ ಜಪಾನ್ ಆಟೋ ತಂತ್ರಜ್ಞಾನವನ್ನು ಹೊಂದಿರುವ ಲೆಕ್ಸಸ್ ಎಲ್ಎಸ್500 ನಿಶಿಜಿನ್ ಆವೃತ್ತಿಯಲ್ಲಿ 'ಜಿನ್-ಐ-ಲಸ್ಟರ್' ಹೊಚ್ಚ ಹೊಸ ಬಾಹ್ಯ ಬಣ್ಣದ ಆಯ್ಕೆ ನೀಡಿರುವುದು ಕಾರಿನ ಬಲಿಷ್ಠತೆಗೆ ಪೂರಕವಾಗಿದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

'ಜಿನ್-ಐ-ಲಸ್ಟರ್' ಬಣ್ಣದ ಆಯ್ಕೆಯು ಕನ್ನಡಿಯೆಂತೆ ಹೊಳಪು ಹೊಂದಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಅಕ್ರಮಕಾರಿಯಾದ ಬಂಪರ್ ಸೌಲಭ್ಯವು ಕಾರಿನ ಹೊರನೋಟಕ್ಕೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಎಲ್ಎಸ್500 ನಿಶಿಜಿನ್ ಆವೃತ್ತಿಯ ಒಳಾಂಗಣ ವಿನ್ಯಾಸವು ಸಾಕಷ್ಟು ಹೊಸತನದೊಂದಿಗೆ ಅಭಿವೃದ್ದಿಗೊಂಡಿದ್ದು, ಲೆಕ್ಸಸ್ ಕಂಪನಿಯು ಸಾಂಪ್ರಾದಾಯಿಕ ಜಪಾನಿನ ಕರಕುಶ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಹೊಸ ಕಾರಿನಲ್ಲಿ ಅಳವಡಿಸಿದೆ. ಎಲ್ಎಸ್500 ನಿಶಿಜಿನ್ ಕಾರಿನ ಒಳಭಾಗದ ಆಧುನಿಕ ವಿನ್ಯಾಸವನ್ನು 'ನಿಶಿಜಿನ್ ಮತ್ತು ಹಕು' ಎಂದು ಕರೆದಿರುವ ಲೆಕ್ಸಸ್ ಕಂಪನಿಯು ಕಾರಿನ ಪ್ರಯಾಣದೊಂದಿಗೆ ಒಂದು ಸುಂದರವಾದ ಅನುಭೂತಿ ನೀಡಲಿದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಎಲ್ಎಸ್500 ನಿಶಿಜಿನ್ ಕಾರಿನ ಪ್ರಯಾಣವನ್ನು 'ಸಮುದ್ರದ ಅಲೆಗಳ ಮೇಲಿನ ಬೆಳದಿಂಗಳ ಹಾದಿ' ಎಂಬ ವರ್ಣನೆ ಮಾಡಿರುವ ಕಂಪನಿಯು ಅರಾಮದಾಯಕ ಮತ್ತು ಸುರಕ್ಷಿತ ಕಾರು ಪ್ರಯಾಣಕ್ಕಾಗಿ ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಜೊತೆಗೆ ಹೊಸ ಕಾರಿನ ಒಳವಿನ್ಯಾಸದ ನೋಟವನ್ನು ಹೆಚ್ಚಿಸಲು ಅಲ್ಲಲ್ಲಿ ಬೆಳ್ಳಿಯ ಎಳೆಗಳನ್ನು ಸೇರ್ಪಡೆ ಮಾಡಿರುವುದು ಕಾರಿನ ಐಷಾರಾಮಿ ವೈಶಿಷ್ಟ್ಯತೆ ಮತ್ತಷ್ಟು ಮೆರಗು ನೀಡಿದ್ದು, ಸ್ಟೀರಿಂಗ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿರುವ ಸ್ವಿಚ್‌ಗಳು ಮತ್ತು ಮ್ಯಾನುವಲ್ ನಿಯಂತ್ರಣ ಘಟಕಗಳನ್ನು ಸಹ ನವೀಕರಿಸಿದೆ.

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಎಲ್ಎಸ್500 ನಿಶಿಜಿನ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 3.5-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 354-ಬಿಎಚ್‌ಪಿ, 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಲೆಕ್ಸಸ್ ಎಲ್ಎಸ್500 ನಿಶಿಜಿನ್ ವೆರಿಯೆಂಟ್ ಬಿಡುಗಡೆ

ಹೊಸ ಕಾರು ಮಾದರಿಯ ಮೂಲಕ ಲೆಕ್ಸಸ್ ಕಂಪನಿಯು ಆಡಿ ಎ8 ಎಲ್, ಬಿಎಂಡಬ್ಲ್ಯು 7 ಸೀರಿಸ್ ಮತ್ತು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಫ್ಲ್ಯಾಗ್‌ಶೀಪ್ ಸೆಡಾನ್ ಮಾದರಿಯ ಮೂಲಕ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗುತ್ತಿದೆ ಎಂದು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ವೇಣುಗೋಪಾಲ್ ಹೊಸ ಕಾರಿನ ಮಾಹಿತಿ ಹಂಚಿಕೊಂಡಿದ್ದಾರೆ.

Most Read Articles

Kannada
English summary
New Lexus LS500 Nishijin Launched In India. Read in Kannada.
Story first published: Monday, January 18, 2021, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X