ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ತನ್ನ ಎರಡನೇ ತಲೆಮಾರಿನ ಎನ್ಎಕ್ಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿಯು ಹೊಸ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಹೊಸ ಎನ್‌ಎಕ್ಸ್ ಎಸ್‍ಯುವಿಯ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ ‘ಸ್ಪಿಂಡಲ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಳೆಯ ಮಾದರಿಯಲ್ಲಿದ್ದ ಸ್ಪ್ಲಿಟ್ ಯೂನಿಟ್‌ಗಳನ್ನು ಬದಲಾಯಿದೆ. ಹಿಂಭಾಗದಲ್ಲಿ ಎಲ್-ಆಕಾರದ ಟೈಲ್ ಲ್ಯಾಂಪ್‌ಗಳಿಗೆ ಒಂದು ಹೊಸ ಎಲ್‌ಇಡಿ ಸ್ಟ್ರಿಪ್‌ನೊಂದಿಗೆ ಮಧ್ಯದಲ್ಲಿ ಸೇರ್ಪಡೆಗೊಳ್ಳುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಇದರ ಮುಂಭಾಗದಲ್ಲಿ ಫಾಗ್ ಲ್ಯಾಂಪ್ ಗಳೊಂದಿಗೆ ಸಿ-ಆಕಾರದ ಏರ್ ಟೆಕ್ ಅನ್ನು ಹೊಂದಿದ್ದು, ಇದು ಎಸ್‍ಯುವಿಗೆ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ನೀಡಿದೆ. ಅದರ ಒಟ್ಟಾರೆ ಲುಕ್ ಮತ್ತು ಸಿಲೂಯೆಟ್ ಅದರ ಹಿಂದಿನಂತೆಯೇ ಇರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಹೊಸ ಎನ್‌ಎಕ್ಸ್ ಅನ್ನು ಅದರ ಹಿಂದಿನದಕ್ಕಿಂತ ಭಿನ್ನವಾಗಿ ಹೊಂದಿಸುವ ಉದ್ದವಾದ ಹುಡ್, ಹೊಸ ಲೈನ್ಸ್ ಗಳು ಮತ್ತು ಅಗ್ರೇಸಿವ್ ಕ್ರೀಸ್‌ಗಳನ್ನು ಹೊಂದಿದ್ದು, ಇದು ಎಸ್‍ಯುವಿಯನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಈ ಎಸ್‍ಯುವಿಯ ಹಿಂಭಾಗದಲ್ಲಿ ಲೈಟ್ ಬಾರ್‌ನೊಂದಿಗೆ ಎಲ್ಇಡಿ ಟೈಲ್-ಲೈಟ್‌ಗಳು ನಿಜವಾಗಿಯೂ ಎನ್‌ಎಕ್ಸ್ ಅನ್ನು ಆಧುನೀಕರಿಸುತ್ತವೆ. ಹಿಂಭಾಗದಲ್ಲಿರುವ ಮತ್ತೊಂದು ಬದಲಾವಣೆಯೆಂದರೆ, ಟೈಲ್ ಗೇಟ್‌ನಲ್ಲಿರುವ ಲೆಕ್ಸಸ್ ಬ್ಯಾಡ್ಜ್ ಅನ್ನು ನೀಡಿದ್ದಾರೆ. ಹಿಂದಿನ ಮಾದರಿಯಲ್ಲಿದ್ದ ‘ಎಲ್' ಬ್ಯಾಡ್ಜ್ ಅನ್ನು ಬದಲಾಯಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಹೊರಭಾಗದಂತೆಯೇ, ಹೊಸ ಎನ್‌ಎಕ್ಸ್‌ನ ಒಳಬಾಗದಲ್ಲಿಯು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ನವೀಕರಿಸಲಾಗಿದೆ, ಇದು ಎಲ್‌ಎಫ್-ಕಾನ್ಸೆಪ್ಟ್ ಆಧಾರಿತವಾಗಿದೆ. ಈ ಎಸ್‍ಯುವಿಯ ಡ್ಯಾಶ್ ಬೋರ್ಡ್ ನಲ್ಲಿ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಇದು ಲೆಕ್ಸಸ್‌ನ ಇತ್ತೀಚಿನ ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ. ಎನ್‌ಎಕ್ಸ್‌ನೊಂದಿಗೆ ನೀಡಲಾಗುವ ಇತರ ವೈಶಿಷ್ಟ್ಯಗಳಲ್ಲಿ 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್, ಎಲೆಕ್ಟ್ರಿಕ್ ಫ್ರಂಟ್ ಸೀಟ್‌ಗಳು ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಹೊಸ ಲೆಕ್ಸಸ್ ಎನ್‌ಎಕ್ಸ್ ಎಸ್‍ಯುವಿಯಲ್ಲಿ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಿದ್ದು, ಇದರಲ್ಲಿ 2.4-ಲೀಟರ್, ಟರ್ಬೊ-ಪೆಟ್ರೋಲ್ ಯುನಿಟ್ 279 ಬಿಹೆಚ್‌ಪಿ ಪವರ್ ಮತ್ತು 430 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಇನ್ನು ಇದರಲ್ಲಿ 2.5-ಲೀಟರ್ ಯುನಿಟ್ 205 ಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಪ್ಲಗ್-ಇನ್ ಹೈಬ್ರಿಡ್ (PHEV) ಆವೃತ್ತಿಯಾಗಿದೆ. ಜೊತೆಗೆ ಅದೇ 242 ಬಿಎಚ್‌ಪಿ ಎಂಜಿನ್ ಎನ್ಎಕ್ಸ್ 350 ಹೆಚ್, ಪ್ಲಗ್-ಇನ್ ಹೈಬ್ (ಪಿಹೆಚ್ಇ).) ಆವೃತ್ತಿಯನ್ನು ಸಹ ತಯಾರಕರು ಒದಗಿಸುತ್ತಾರೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ

ಎನ್‌ಎಕ್ಸ್ 450 ಹೆಚ್ ಪ್ಲಸ್ ಎಚ್‌ಇವಿ ಪವರ್‌ಟ್ರೇನ್‌ನ ಹೆಚ್ಚು ಪವರ್ ಫುಲ್ ಆವೃತ್ತಿಯನ್ನು ಹೊಂದಿದ್ದು, ಅದು 306 ಬಿಹೆಚ್‌ಪಿ ಉತ್ಪಾದಿಸುತ್ತದೆ. ಪಿಎಚ್‌ಇವಿಗಳು ಎಲ್ಕ್ಟ್ರಿಕ್ ಅಲ್ಲಿ ಮಾತ್ರ 58 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಆಯ್ದ ರೂಪಾಂತರಗಳು ಹೊಸ, ಎಲೆಕ್ಟ್ರಾನಿಕ್ ಕಂಟ್ರೋಲ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಲಭ್ಯವಿರುತ್ತವೆ.

Most Read Articles

Kannada
English summary
All-new Lexus nx suv Revealed. Read In Kannada.
Story first published: Saturday, June 12, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X