ಪ್ರತಿ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡುವ ಪ್ರವೈಗ್ ಕಾರಿನ ವಿಶೇಷತೆಗಳೇನು?

ಪ್ರವೈಗ್ ಡೈನಾಮಿಕ್(Pravaig Dynamics) ಕಂಪನಿಯು ತನ್ನ ಹೊಸ ಎಕ್ಸ್ಟಿಷನ್ ಎಂಕೆ1(Extinction MK1) ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಕಂಪನಿಯು ಶೀಘ್ರದಲ್ಲಿಯೇ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವುದಾಗಿ ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡುವ ಪ್ರವೈಗ್ ಕಾರಿನ ವಿಶೇಷತೆಗಳೇನು?

ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳುತ್ತಿರುವ ಪ್ರವೈಗ್ ಹೊಸ ಕಾರು ಸದ್ಯ ಕಾನ್ಸೆಪ್ಟ್ ಮಾದರಿಯಲ್ಲಿ ಮಾತ್ರ ಅನಾವರಣಗೊಂಡಿದ್ದು, ಶೀಘ್ರದಲ್ಲೇ ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ ಅನಾವರಣಗೊಳ್ಳಲಿದೆ. ಕಾನ್ಸೆಪ್ಟ್ ಮಾದರಿಯೊಂದಿಗೆ ಕೇವಲ ಮೈಲೇಜ್ ರೇಂಜ್ ಮಾಹಿತಿ ಮಾತ್ರ ಹಂಚಿಕೊಂಡಿರುವ ಪ್ರವೈಗ್ ಕಂಪನಿಯು ಹೊಸ ಕಾರಿನ ಒಳಾಂಗಣ ಹೊಸ ಮಾದರಿಯ ವಿನ್ಯಾಸದೊಂದಿಗೆ ಅನಾವರಣಗೊಳಿಸಲು ಸಿದ್ದವಾಗಿದೆ.

ಪ್ರವೈಗ್ ಡೈನಾಮಿಕ್ ನಿರ್ಮಾಣದ ಎಕ್ಸ್ಟಿಷನ್ ಎಂಕೆ2 ಮಾದರಿಯು ದೂರದಿಂದ ಟೆಸ್ಲಾ ಕಾರು ಮಾದರಿಯಂತೆ ಕಂಡರೂ ತನ್ನದೆ ಆದ ವಿಭಿನ್ನ ತಾಂತ್ರಿಕ ಅಂಶಗಳೊಂದಿಗೆ ಭಾರತೀಯ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರು ಭಾರತದಲ್ಲಿ 2022ರ ಮಧ್ಯಂತರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದೆ.

ಪ್ರತಿ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡುವ ಪ್ರವೈಗ್ ಕಾರಿನ ವಿಶೇಷತೆಗಳೇನು?

ಹೊಸ ಎಲೆಕ್ಟ್ರಿಕ್ ಕಾರು ಮಾರಾಟ ಆರಂಭಿಸಿದ ನಂತರ ಪ್ರವೈಗ್ ಡೈನಾಮಿಕ್ ಕಂಪನಿಯು ಮೊದಲ ವರ್ಷದಲ್ಲಿ 2,500 ಯುನಿಟ್‌ಗಳನ್ನು ಉತ್ಪಾದನೆ ಮಾಡಿ ವಿತರಿಸುವ ಯೋಜನೆ ಹೊಂದಿದ್ದು, 2023ರ ವೇಳೆಗೆ ವಾರ್ಷಿಕವಾಗಿ 1 ಲಕ್ಷ ಕಾರುಗಳನ್ನು ಅಭಿವೃದ್ದಿಪಡಿಸಲು ನಿರ್ಧರಿಸಿದೆ. ಹಾಗೆಯೇ 2025ರ ವೇಳೆಗೆ 5 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನಾ ಗುರಿತಲುಪಲು ಯೋಜನೆ ರೂಪಿಸಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗೂ ಭಾರತದಿಂದಲೇ ರಫ್ತುಗೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡುವ ಪ್ರವೈಗ್ ಕಾರಿನ ವಿಶೇಷತೆಗಳೇನು?

ಹೊಸ ಕಾರು ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದನೆ ಮಾಡಲಾದ ಬಿಡಿಭಾಗಗಳಿಂದ ನಿರ್ಮಾಣಗೊಂಡಿದ್ದು, ಹೊಸ ಕಾರಿನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಸಂಪನ್ಮೂಲವು ಕೂಡಾ ಸ್ಥಳೀಯ ಕಂಪನಿಗಳ ಜೊತೆಗೂಡಿ ಅಭಿವೃದ್ದಿಗೊಳಿಸಿದೆ. ಎಕ್ಸ್ಟಿಷನ್ ಎಂಕೆ2 ಹೈ ಎಂಡ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 504ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸಾಮಾನ್ಯ ಕಾರುಗಳಂತೆ ಎಕ್ಸ್ಟಿಷನ್ ಎಂಕೆ1 ಎಲೆಕ್ಟ್ರಿಕ್ ಕಾರು ಕೂಡಾ ಫರ್ಪಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಪ್ರತಿ ಚಾರ್ಜ್‌ಗೆ 504 ಕಿ.ಮೀ ಮೈಲೇಜ್ ನೀಡುವ ಪ್ರವೈಗ್ ಕಾರಿನ ವಿಶೇಷತೆಗಳೇನು?

ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, 96kWh ಲೀ-ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 30 ನಿಮಿಷಗಳಲ್ಲಿ ಗರಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ವಿವಿಧ ಡ್ರೈವ್ ಮೊಡ್‌ಗಳನ್ನು ನೀಡಲಾಗಿದ್ದು, 201.5-ಬಿಎಚ್‌ಪಿ ಉತ್ಪಾದನೆಯೊಂದಿಗೆ ಗಂಟೆಗೆ ಗರಿಷ್ಠ 196 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

Most Read Articles

Kannada
English summary
Made in india pravaig extinction mk1 kannada review video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X