ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಕಾರು ಮಾದರಿಯೆಂಬ ಹೆಗ್ಗಳಿಕೆ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಕಳೆದ ಕೆಲ ತಿಂಗಳಿನಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಸದ್ಯ ಕೋವಿಡ್ ಪರಿಣಾಮ ಕಾರು ಮಾರಾಟವು ತಗ್ಗಿದ್ದರೂ ಕೂಡಾ ಯುಗಾದಿ ಸಂಭ್ರಮಕ್ಕೂ ಹಲವು ಹೊಸ ವಾಹನ ಮಾರಾಟವು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಲ್ಲಿತ್ತು. ಕಳೆದ ಜನವರಿ, ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲಿ ವಿವಿಧ ಕಾರು ಉತ್ಪಾದನ ಕಂಪನಿಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಈ ವೇಳೆ ಮಹೀಂದ್ರಾ ಎಕ್ಸ್‌ಯುವಿ300 ಮಾದರಿಯು ಕೂಡಾ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

2020-21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬುಕಿಂಗ್ ಪ್ರಮಾಣವು ಶೇಕಡಾ 90ರಷ್ಟು ಹೆಚ್ಚಾಗಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 6 ಸಾವಿರ ಯುನಿಟ್‌‌ಗೆ ಬುಕ್ಕಿಂಗ್ ದಾಖಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಹೆಚ್ಚು ಸುರಕ್ಷಾ ಫೀಚರ್ಸ್ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಇನ್ನು ಗ್ರಾಹಕರ ಬೇಡಿಕೆಯೆಂತೆ ಮಹೀಂದ್ರಾ ಕಂಪನಿಯು ವಿವಿಧ ಸೆಗ್ಮೆಂಟ್‌ನಲ್ಲಿ ಸದ್ಯ ಕೆಯುವಿ100 ನೆಕ್ಸ್ಟ್, ಎಕ್ಸ್‌ಯುವಿ300, ಬೊಲೆರೊ, ಮರಾಜೋ, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ಕಾರುಗಳನ್ನು ಮಾರಾಟ ಮಾಡುತ್ತಿದ್ದು, ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿರುವ ಎಕ್ಸ್‌ಯುವಿ300 ಮಾದರಿಯ ಬೆಲೆಯಲ್ಲೂ ದರ ಹೆಚ್ಚಿಸಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಹೊಸ ದರ ಪಟ್ಟಿಯಲ್ಲಿ ಬೆಲೆ ಹೆಚ್ಚಳದ ನಂತರ ಎಕ್ಸ್‌ಯುವಿ300 ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.94 ಲಕ್ಷ ಬೆಲೆ ಪಡೆದುಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರುವ ಎಕ್ಸ್‌ಯುವಿ300 ಮಾದರಿಯ ಬೆಲೆಯಲ್ಲಿ ಪೆಟ್ರೋಲ್ ಆವೃತ್ತಿಯು ರೂ. 1 ಸಾವಿರದಿಂದ ರೂ. 36 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಲ್ಲಿ ಡೀಸೆಲ್ ಮಾದರಿಯು ರೂ. 27 ಸಾವಿರದಿಂದ ರೂ. 39 ಸಾವಿರದಷ್ಟು ದುಬಾರಿಯಾಗಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಎಕ್ಸ್‌ಯುವಿ300 ಮಾದರಿಯ ಪೆಟ್ರೋಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12.13 ಲಕ್ಷ ಬೆಲೆ ಪಡೆದುಕೊಂಡಿದ್ದು, ಡೀಸೆಲ್ ಕಾರು ಮಾದರಿಯು ಆರಂಭಿಕವಾಗಿ ರೂ. 12.94 ಲಕ್ಷ ಬೆಲೆ ಪಡೆದುಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಬೆಲೆ ಹೆಚ್ಚಳ ನಂತರ ಮಹೀಂದ್ರಾ ಕಂಪನಿಯು ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಹೆಚ್ಚಿಸುವ ಬದಲು ಮಧ್ಯಮ ಕ್ರಮಾಂಕದ ಕೆಲ ಮಾದರಿಗಳಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತ ಮಾಡಿದ್ದು, ಬಿಸಿ ವೈಶಿಷ್ಯತೆಯ ರಿಯರ್ ವ್ಯೂ ಮಿರರ್ ಮತ್ತು ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯಗಳನ್ನು ತೆಗೆದುಹಾಕಿ ಸಾಮಾನ್ಯ ಮಾದರಿಯ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗೆ ಭರ್ಜರಿ ಬೇಡಿಕೆ

ಎಕ್ಸ್‌ಯುವಿ 300 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, 1.2-ಲೀಟರ್ ಪೆಟ್ರೋಲ್ ಮಾದರಿಯು 108 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 114 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರಯಾಣಿಕ ಸುರಕ್ಷತೆಯಲ್ಲೂ ಎಕ್ಸ್‌ಯುವಿ300 ಕಾರು ಮುಂಚೂಣಿಯಲ್ಲಿದೆ.

Most Read Articles

Kannada
English summary
Mahindra XUV300 Bookings Increase By 90 Percent. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X