ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಕಳೆದ ವಾರವಷ್ಟೇ ಎಕ್ಸ್‌ಯುವಿ ಸರಣಿಯಲ್ಲಿ ಹೊಸದಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಕೇಂದ್ರ ಸಾರಿಗೆ ಇಲಾಖೆ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌‌ಯುವಿ700 ಮಾದರಿಯ ಜೊತೆಗೆ ಎಕ್ಸ್‌ಯುವಿ900 ಸೇರಿದಂತೆ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಎಕ್ಸ್‌ಯುವಿ ಸರಣಿಯಲ್ಲಿ ಈಗಾಗಲೇ ಎಕ್ಸ್‌ಯುವಿ300 ಮತ್ತು ಎಕ್ಸ್‌ಯುವಿ500 ಕಾರುಗಳ ಮಾರಾಟ ಹೊಂದಿರುವ ಮಹೀಂದ್ರಾ ಕಂಪನಿಯು ಹೊಸ ಕಾರುಗಳ ಮೂಲಕ ಎಂಟ್ರಿ ಲೆವಲ್ ಎಸ್‌ಯುವಿ ಮಾದರಿಯೊಂದಿಗೆ ಫುಲ್ ಸೈಜ್ ಎಸ್‌ಯುವಿ ಮಾದರಿಯ ಮಾರಾಟದಲ್ಲಿ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ. ಎಕ್ಸ್‌ಯುವಿ100 ಮಾದರಿಯು ಕೆಯುವಿ100 ಮಾದರಿಯಲ್ಲಿ ಹೊಸ ವಿನ್ಯಾಸದಲ್ಲಿ ಮಾರಾಟವಾಗಲಿದ್ದರೆ ಹೈ ಎಂಡ್ ಮಾದರಿಯಾದ ಎಕ್ಸ್‌ಯುವಿ900 ಮಾದರಿಯ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಇನ್ನು ಎಕ್ಸ್‌ಯುವಿ500 ಮಾದರಿಯು ಸದ್ಯ 7 ಸೀಟರ್ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಎಕ್ಸ್‌ಯುವಿ700 ಬಿಡುಗಡೆಯ ನಂತರ 5 ಸೀಟರ್ ಮಾದರಿಯಾಗಿ ಮತ್ತು ಎಕ್ಸ್‌ಯುವಿ700 ಮಾದರಿಯು ಸೀಟರ್ ಮಾದರಿಯಾಗಿ ಮಾರಾಟಗೊಳ್ಳಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಫುಲ್ ಸೈಜ್ ಎಸ್‌ಯುವಿಯಾಗಿರುವ ಎಕ್ಸ್‌ಯುವಿ900 ಆಧರಿಸಿ ಕಂಪನಿಯು ಕೂಪೆ ಎಸ್‌ಯುವಿ ಮಾದರಿಯನ್ನು ರಸ್ತೆಗಿಳಿಸಲಿದ್ದು, 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಏರೊ ಕಾನ್ಸೆಪ್ಟ್ ಮಾದರಿಯನ್ನೇ ಎಕ್ಸ್‌ಯುವಿ900 ಕೂಪೆ ಮಾದರಿಯಾಗಿ ಮಾರಾಟ ಮಾಡುವ ಸಾಧ್ಯತೆಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಎಂಜಿನ್ ಮತ್ತು ಫೀಚರ್ಸ್‌ಗಳನ್ನು ಎಕ್ಸ್‌ಯುವಿ900 ಎಸ್‌ಯುವಿ ಮಾದರಿಯೊಂದಿಗೆ ಹಂಚಿಕೊಳ್ಳಲಿರುವ ಹೊಸ ಕೂಪೆ ಕಾರು 2023ಕ್ಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಕುರಿತಾಗಿ ಯಾವುದೇ ಅಧಿಕೃತ ತಾಂತ್ರಿಕ ಅಂಶಗಳ ಮಾಹಿತಿಗಳು ಲಭ್ಯವಿಲ್ಲ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಸದ್ಯ ಹೊಸ ಕೂಪೆ ಎಸ್‌ಯುವಿ ಬಿಡುಗಡೆಗೊಳಿಸುವ ಕುರಿತಾದ ಮಾಹಿತಿ ಮಾತ್ರ ಲಭ್ಯವಾಗಿದ್ದು, ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯ ಐದು ಹೊಸ ಕಾರುಗಳನ್ನು ಹಂತ ಹಂತವಾಗಿ ಮುಂದಿನ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಭಾರತದಲ್ಲಿ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಎಸ್‌ಯುವಿ

ಕೂಪೆ ಎಸ್‌ಯುವಿ ಮಾದರಿಗಳು ಸದ್ಯ ಐಷಾರಾಮಿ ಕಾರು ಮಾದರಿಯಾಗಿಯೇ ಗುರುತಿಸಿಕೊಂಡಿದ್ದು, ಮಹೀಂದ್ರಾ ಎಕ್ಸ್‌ಯುವಿ900 ಕೂಪೆ ಕೂಡಾ ಐಷಾರಾಮಿ ಕಾರುಗಳ ಮಾದರಿಯಲ್ಲೇ ಬಲಿಷ್ಠವಾದ ಎಂಜಿನ್ ಆಯ್ಕೆ ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Mahindra XUV900 Will Be The First Coupe SUV From The Brand. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X