ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಮಸೆರಾಟಿ ಕಂಪನಿಯು ತನ್ನ ಹೊಸ ಘಿಬ್ಲಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಸೆರಾಟಿ ಘಿಬ್ಲಿ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15 ಕೋಟಿಯಾಗಿದೆ.

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಹೊಸ ಮಸೆರಾಟಿ ಘಿಬ್ಲಿ ಕಾರು 6 ಟ್ರಿಮ್‌ಗಳಲ್ಲಿ ಮೂರು ರೂಪಾಂತರಗಳನ್ನು ಒಳಗೊಂಡಿದೆ. ಇದು ಹೊಸ ಹೈಬ್ರಿಡ್ ಆವೃತ್ತಿ ಮತ್ತು ಹೆಚ್ಚು ಪವರ್ ಫುಲ್ ಟ್ರೋಫಿಯೊ ರೂಪಾಂತರವನ್ನು ಒಳಗೊಂಡಿದೆ. 2021ರ ಮಸೆರಾಟಿ ಘಿಬ್ಲಿ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್, ಹೊಸ ಏರ್ ಇನ್ ಟೆಕ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಮರುವಿನ್ಯಾಸಗೊಳಿಸಲಾದ ಎಲ್ಇಡಿ ಅಡಾಪ್ಟಿವ್ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಹೆಡ್‌ಲ್ಯಾಂಪ್‌ಗಳಲ್ಲಿನ 15 ಎಲ್‌ಇಡಿಗಳು ಸಂಪ್ರದಾಯ ಹೆಡ್‌ಲ್ಯಾಂಪ್‌ಗಳಿಗೆ ಹೋಲಿಸಿದರೆ 200 ಪ್ರತಿಶತದಷ್ಟು ಹೆಚ್ಚಿನ ಕಿರಣಗಳಿಂದ ಕೂಡಿದೆ. ಹಿಂಭಾಗದಲ್ಲಿ ಹೊಸ ಕ್ಲಸ್ಟರ್ ಲ್ಯಾಂಪ್‌ಗಳನ್ನು ಪಡೆಯುತ್ತದೆ ಮತ್ತು ಹೊಸ 21 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಹೊಸ ಮಸೆರಾಟಿ ಘಿಬ್ಲಿ ಕಾರಿನಲ್ಲಿ ಹೈಬ್ರಿಡ್ 2.0, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 48 ವಿ ಹೈಬ್ರಿಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ 330 ಬಿಹೆಚ್‍ಪಿ ಪವರ್ ಮತ್ತು 450 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಈ ಮಸೆರಾಟಿ ಘಿಬ್ಲಿ ಹೈಬ್ರಿಡ್ ಮಾದರಿಯು ಕೇವಲ 5.5 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಬ್ರೇಕ್ ಕ್ಯಾಲಿಪರ್‌ಗಳಲ್ಲಿ ನೀಲಿ ಬಣ್ಣದ ಅಂಶಗಳನ್ನುಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಇನ್ನು 2021ರ ಘಿಬ್ಲಿ ಟ್ರೋಫಿಯೊ ರೂಪಾಂತರದಲ್ಲಿ ಪವರ್ ಫೂಲ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 580 ಬಿಹೆಚ್‍ಫಿ ಪವರ್ ಮತ್ತು 730 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

ಘಿಬ್ಲಿ ಟ್ರೋಫಿಯೊ ಕೇವಲ 4.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಸೆರಾಟಿ ಘಿಬ್ಲಿ ಕಾರಿನಲ್ಲಿ ಹಲವಾರು ಸುಸುರಕ್ಷತಾ ಪೀಚರ್ ಗಳನ್ನು ನೀಡಲಾಗಿದೆ. ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್‌ ಅನ್ನು ಪಡೆದುಕೊಂಡಿದೆ. ವೆಲ್ 2 ಎಡಿಎಎಸ್ - ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ ಅನ್ನು ಪಡೆಯುತ್ತದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

2021ರ ಘಿಬ್ಲಿ ಕಾರಿನ ಒಳಭಾಗದಲ್ಲಿ ಅತ್ಯಾಧುನಿಕ ಎಚ್‌ಡಿ ಟಚ್‌ಸ್ಕ್ರೀನ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಗೋಲ್ಡನ್ ಬಣ್ಣಗಳಲ್ಲಿ ಹೊಸ ಗ್ರಾಫಿಕ್ ಇಂಟರ್ಫೇಸ್ನೊಂದಿಗೆ ಮಲ್ಟಿ ಟಚ್ ಕಾರ್ಯಗಳೊಂದಿಗೆ ಹೆಚ್ಚಿನ ರೆಸಲ್ಯೂಶನ್ ಪ್ರದರ್ಶನವನ್ನು ಹೊಂದಿದೆ.

ಭಾರತದಲ್ಲಿ ಹೊಸ ಮಸೆರಾಟಿ ಘಿಬ್ಲಿ ಕಾರು ಬಿಡುಗಡೆ

2021ರ ಘಿಬ್ಲಿ ಕಾರಿನಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯ ಎರಡೂ ಬದಿಗಳಲ್ಲಿ ದೊಡ್ಡದಾದ ರೆವ್ ಕೌಂಟರ್ ಮತ್ತು ಸ್ಪೀಡೋಮೀಟರ್ ಸಹ ಇದೆ. ಇನ್ನು ಈ ಕಾರಿನಲ್ಲಿ ರಿಸ್ಸಿಮೊ ಮತ್ತು ನೆರಿಸ್ಸಿಮೊ ಕಾರ್ಬನ್ ಪ್ಯಾಕೇಜುಗಳನ್ನು ಹೊಂದಿವೆ.

Most Read Articles

Kannada
English summary
2021 Maserati Ghibli India Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X