Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- News
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಬಿಎಂಡಬ್ಲ್ಯು ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ಕಾರು ಬಿಡುಗಡೆ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ಪೆಟ್ರೋಲ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ 2021ರ ಬಿಎಂಡಬ್ಲ್ಯು ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ಪೆಟ್ರೋಲ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.56.50 ಲಕ್ಷಗಳಾಗಿದೆ.

ಇನ್ನು ಬಿಡುಗಡೆಗೊಂಡ ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ಪೆಟ್ರೋಲ್ ಮಾದರಿಯನ್ನು ಸ್ಥಳೀಯವಾಗಿ ಚೆನ್ನೈ ಸ್ಥಾವರದಲ್ಲಿ ಜೋಡಿಸಲಾಗುತ್ತದೆ. ಇನ್ನು ಈ ಹೊಸ ಕಾರಿನಲ್ಲಿ ರೂ, 1.5 ಲಕ್ಷ ಮೌಲ್ಯದ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಫೆಬ್ರವರಿ 28ರ ಮಧ್ಯರಾತ್ರಿ ಎಸ್‌ಯುವಿ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಈ ಪ್ರಯೋಜನಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಇದರ ಸರ್ವಿಸ್ ಪ್ಯಾಕೇಜ್ ಮತ್ತು ಅಕ್ಸೆಸರೀಸ್ ಗಳನ್ನು ಒಳಗೊಂಡಿವೆ.

2021ರ ಬಿಎಂಡಬ್ಲ್ಯು ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ಪೆಟ್ರೋಲ್ ಮಾದರಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5200 ಆರ್‌ಪಿಎಂನಲ್ಲಿ 248 ಬಿಹೆಚ್‌ಪಿ ಪವರ್ ಮತ್ತು 1450 - 4800 ಆರ್‌ಪಿಎಂನಲ್ಲಿ 350 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.ಇದರೊಂದಿಗೆ ಸ್ಟೀಯರಿಂಗ್ ವೀಲ್ನಲ್ಲಿ ಹೋಲ್ಡ್ ಫಂಕ್ಷನ್ ಮತ್ತು ಪ್ಯಾಡಲ್ ಶಿಫ್ಟರ್ ಗಳನ್ನು ನೀಡುತ್ತದೆ. ಹೊಸ ಬಿಎಂಡಬ್ಲ್ಯು ಎಕ್ಸ್3 ಎಕ್ಸ್‌ಡ್ರೈವ್ 30ಐ ಸ್ಪೋರ್ಟ್‌ಎಕ್ಸ್ ತನ್ನ ವಿಭಾಗದ ತ್ವರಿತ ಮಾದರಿಗಳಲ್ಲಿ ಒಂದಾಗಿದೆ, ಕೇವಲ 6.3 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಈ ಐಷಾರಾಮಿ ಕಾರಿನಲ್ಲಿ ಅಡಾಪ್ಟಿವ್ ಸಸ್ಪೆಂಷನ್ ಗಳು, ಎಲೆಕ್ಟಿಕ್ ಆಗಿ ಕಂಟ್ರೋಲ್ ಮಾಡುವ ಆಟೋಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್ ಲಾಕ್‌ಗಳು (ಎಡಿಬಿ-ಎಕ್ಸ್), ವಿಸ್ತೃತ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಸ್‌ಎ), ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿವೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಇನ್ನು ಈ ಕಾರಿನ ಸುಧಾರಿತ ಸುರಕ್ಷತಾ ಫೀಚರ್ ಗಳಿಗೆ ಸಂಬಂಧಿಸಿದಂತೆ, ಇದು ಕಾರ್ಟೆನಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಸೇರಿದಂತೆ ಅಟೆನ್ಟಿನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್ಸಿ), ಆಟೋ ಹೋಲ್ಡ್ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಮತ್ತು ಕ್ರ್ಯಾಶ್ ಸೆನ್ಸಾರ್ ಅನ್ನು ಪಡೆಯುತ್ತದೆ. ನಂತರ ಕ್ಯಾಬಿನ್‌ನಲ್ಲಿ ಆರು-ಏರ್‌ಬ್ಯಾಗ್‌ಗಳು ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳಿವೆ.

ಈ ಹೊಸ ಕಾರಿನ ಕ್ಯಾಬಿನ್ ಬಗ್ಗೆ ಹೇಳುವುದಾದರೆ, ನೀವು ಬಿಎಂಡಬ್ಲ್ಯು ಕನೆಕ್ಟೆಡ್ ಡ್ರೈವ್ ಫೀಚರ್ ಗಳ ಜೊತೆಗೆ ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ಲಸ್ ಜೊತೆಗೆ 8.8 ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ 3ಡಿ ನ್ಯಾವಿಗೇಷನ್, ಬಿಎಂಡಬ್ಲ್ಯು ವರ್ಚುವಲ್ ಅಸಿಸ್ಟೆಂಟ್ ಮತ್ತು ರಿಯರ್ ವ್ಯೂ ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಅಸಿಸ್ಟೆಂಟ್ ಅನ್ನು ಸಹ ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇದರೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 5.1-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಅನಲಾಗ್ ಡಯಲ್‌ಗಳು, ಡ್ರೈವ್ ಮೋಡ್‌ಗಳನ್ನು (ಇಕೊ ಪ್ರೊ, ಕಂಫರ್ಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್) ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್3 ನಲ್ಲಿನ ಇತರ ವಿಭಾಗದ ಗುಣಮಟ್ಟದ ವೈಶಿಷ್ಟ್ಯಗಳು ಹಿಂಭಾಗದ ವಿಂಡೋ ಸನ್‌ಬ್ಲೈಂಡ್, ದೊಡ್ಡ ಪನೋರಮಿಕ್ ಸನ್‌ರೂಫ್, ಟ್ರ್ಯಾವೆಲ್ ಟೈಲ್‌ಗೇಟ್ ಮತ್ತು ಅಂಬೆಯೆಂಟ್ ಲೈಟ್ ಅನ್ನು ಹೊಂದಿದೆ. ಈ ಕಾರು 550 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ನೀಡುತ್ತದೆ.