ಲಾಕ್‌ಡೌನ್ ಎಫೆಕ್ಟ್: ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಕೋವಿಡ್ ಪರಿಣಾಮ ತೀವ್ರ ನಷ್ಟ ಅನುಭವಿಸುತ್ತಿರುವ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಬಿಡುಗಡೆ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿಯನ್ನು ಸದ್ಯಕ್ಕೆ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಸ್ತರಿಸುತ್ತಿರುವುದು ಆರ್ಥಿಕ ಚಟುವಟಿಕೆಗಳ ಭಾರೀ ಹೊಡೆತ ಬೀಳುತ್ತಿದ್ದು, ಹೊಸ ವಾಹನ ಮಾರಾಟದಲ್ಲೂ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ವಾಹನ ಮಾದರಿಗಳ ಮಾರಾಟವನ್ನು ಸುಧಾರಿಸುವತ್ತ ಗಮನಹರಿಸಿರುವ ಆಟೋ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯ ಯೋಜನೆಯಿಂದಾಗಬಹುದಾದ ನಷ್ಟದ ಬಗ್ಗೆ ಎಚ್ಚರವಹಿಸುತ್ತಿವೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಕೂಡ ಇದೇ ತಿಂಗಳು 6ರಂದು ಬಿಡುಗಡೆಯಾಗಬೇಕಿದ್ದ ಅಲ್ಕಾಜರ್ ಕಾರು ಮಾದರಿಯ ಬಿಡುಗಡೆಯನ್ನು ಮುಂದಿನ ತಿಂಗಳು ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿತ್ತು. ಆದರೆ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ವಿಸ್ತರಿಸಿದ ಪರಿಣಾಮ ಇನ್ನು ಕೆಲ ತಿಂಗಳ ಕಾಲ ಅಲ್ಕಾಜರ್ ಬಿಡುಗಡೆ ಮಾಡದರಿರಲು ನಿರ್ಧರಿಸಲಾಗಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಹೊಸ ಕಾರು ಬಿಡುಗಡೆಯನ್ನು ಕೋವಿಡ್ ಪರಿಣಾಮ ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದ್ದರೂ ಕಾರ್ಯಕ್ಷಮತೆಯ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಂದುವರಿಸಿದ್ದು, ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ಹೊಸ ಅಲ್ಕಾಜರ್ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಅಲ್ಕಾಜರ್ ಕಾರು ಕ್ರೆಟಾ ಕಾರಿಗಿಂತಲೂ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟಗೊಳ್ಳಲಿದ್ದು, ವಿಸ್ತರಿತ ಕ್ಯಾಬಿನ್‌ ಮೂಲಕ ಮೂರು ಸಾಲಿನ ಆಸನಗಳೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾದ ಜೋಡಣೆ ಹೊಂದಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಹೈ ಎಂಡ್ ಮಾದರಿಯಾಗಿ 6 ಸೀಟರ್ ಆವೃತ್ತಿಯು ಮಾರಾಟಗೊಳ್ಳಲಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ನೊಂದಿಗೆ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದೆ. ಅಲ್ಕಾಜರ್ ಕಾರಿನ 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದ್ದು, ಹಿಂಬದಿಯ ಸವಾರರಿಗೂ ಆರಾಮದಾಯಕ ಪ್ರಯಾಣಕ್ಕಾಗಿ ಹೆಡ್‌ರೆಸ್ಟ್, ಸೈಡ್ ಬಾಟಲ್ ಹೋಲ್ಡರ್ ಸೌಲಭ್ಯಗಳನ್ನು ನೀಡಲಾಗಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಅಲ್ಕಾಜರ್ ಕಾರು ಕ್ರೆಟಾ 5 ಸೀಟರ್ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಇತ್ತೀಚೆಗೆ ಪ್ರಮುಖ ಕಾರು ಕಂಪನಿಗಳು 5 ಸೀಟರ್ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಪರಿಚಯಿಸುತ್ತಿರುವ ಅಲ್ಕಾಜರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಅಲ್ಕಾಜರ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೈ ಎಂಡ್ ಮಾದರಿಗಳಲ್ಲಿ 2.0-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಎಂಜಿನ್ ಜೋಡಣೆ ಮಾಡಲಾಗಿದ್ದು, 2.0-ಲೀಟರ್ ಎಂಜಿನ್ ಮಾದರಿಯನ್ನು ಟ್ಯುಸಾನ್ ಮತ್ತು ಎಲಾಂಟ್ರಾ ಮಾದರಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

1.5-ಲೀಟರ್ ಪೆಟ್ರೋಲ್ ಮಾದರಿಯನ್ನು ಕ್ರೆಟಾ ಮಾದರಿಯಿಂದ ಪಡೆದುಕೊಳ್ಳಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 2.0-ಲೀಟರ್ ಮಾದರಿಯು 159-ಬಿಎಚ್‌ಪಿ, 192-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಎಂಜಿನ್ ಮಾದರಿಯು 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅಲ್ಕಾಜರ್ ಬಿಡುಗಡೆ ಯೋಜನೆಯನ್ನು ಮತ್ತೆ ಮುಂದೂಡಿದ ಹ್ಯುಂಡೈ

ಹೊಸ ಅಲ್ಕಾಜರ್ ಕಾರು ಕ್ರೆಟಾ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಆಯ್ಕೆಯೊಂದಿಗೆ ಫುಲ್ ಸೈಜ್ ಕಾರು ಖರೀದಿದಾರರನ್ನು ಸೆಳೆಯಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ.19 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
New Hyundai Alcazar Launch Postponed Due To Coronavirus Lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X