ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಲ್ಯಾಂಡ್ ರೋವರ್ ಕಂಪನಿಯು ಅಂತಿಮವಾಗಿ ತನ್ನ ಡಿಫೆಂಡರ್ ವಿ8 ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವಾರಣಗೊಳಿಸಿದೆ. ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿಯು ಎರಡೂ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ 90 ಎಂಬ ಮೂರೂ ಡೋರಿನ ಮತ್ತು 110 ಎಂಬ ಐದು ಡೋರಿನ ಎರಡೂ ಆವೃತ್ತಿಗಳನ್ನು ಒಳಗೊಂಡಿದೆ. ಇನ್ನು ಈ ಹೊಸ ಲ್ಯಾಂಡ್ ರೋವರ್ ಎಸ್‍ಯುವಿಯಲ್ಲಿ ಸೂಪರ್ಚಾರ್ಜ್ಡ್ 5.0-ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 525 ಬಿಹೆಚ್‍ಪಿ ಪವರ್ ಮತ್ತು 625 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ತಯಾರಕರ ಪ್ರಕಾರ, ಡಿಫೆಂಡರ್ ವಿ8 ಎಸ್‍ಯುವಿಯು ಕೇವಲ 4.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಎಸ್‍ಯುವಿಯು 240 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಹೊಸ ಡಿಫೆಂಡರ್ ವಿ8 ಎಸ್‍ಯುವಿಯ ಬಾಡಿ ರೋಲ್ ಅನ್ನು ಕಡಿಮೆ ಮಾಡಲು ಲ್ಯಾಂಡ್ ರೋವರ್ ಇದರ ಸಸ್ಪೆಂಕ್ಷನ್ ಸೆಟಪ್ ಟ್ಯೂನ್ ಮಾಡಿದೆ ಮತ್ತು ದೊಡ್ಡ ಆಂಟಿ-ರೋಲ್ ಬಾರ್‌ಗಳನ್ನು ಸೇರಿಸಿದೆ. ಎಲೆಕ್ಟ್ರಾನಿಕ್ ಆಕ್ಟಿವ್ ರಿಯರ್ ಡಿಫರೆನ್ಷಿಯಲ್ ಈಗ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿದೆ. ಇನ್ನು ಕಾರ್ನರ್ ಸ್ಟ್ಯಾಬಿಲಿಟಿ ಕೂಡ ಸುಧಾರಣೆ ಮಾಡಲಾಗಿದೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಈ ಹೊಸ ಹೊಸ ಡಿಫೆಂಡರ್ ವಿ8 ಎಸ್‍ಯುವಿ ಟೆರೈನ್ ರೆಸ್ಪಾನ್ಸ್ ಸಿಸ್ಟಮ್ ಈಗ ಹೊಸ ಡೈನಾಮಿಕ್ ಡ್ರೈವಿಂಗ್ ಸೆಟ್ಟಿಂಗ್ ಅನ್ನು ಪಡೆಯುತ್ತದೆ, ಇದು ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣಗೊಳಿಸುತ್ತದೆ ಮತ್ತು ಸಸ್ಪೆಂಕ್ಷನ್ ಸೆಟಪ್ ಅನ್ನು ಗಟ್ಟಿಗೊಳಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಈ ಡಿಫೆಂಡರ್‌ಗೆ ಪ್ರತ್ಯೇಕವಾದ ಇತರ ವೈಶಿಷ್ಟ್ಯಗಳು ಕ್ವಾಡ್ ಎಕ್ಸಾಸ್ಟ್ ಗಳು, ಸ್ಯಾಟಿನ್ ಗ್ರೇ ಫಿನಿಶ್‌ನೊಂದಿಗೆ 22 ಇಂಚಿನ ಬೃಹತ್ ಅಲಾಯ್ ವ್ಹೀಲ್ ಗಳು, ಕ್ಸೆನಾನ್ ಬ್ಲೂ ಫಿನಿಶ್ ಹೊಂದಿರುವ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಬಾಡಿಯಲ್ಲಿ ವಿ8' ಬ್ಯಾಡ್ಜ್‌ಗಳು.ಒಳಗೊಂಡಿವೆ.

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಕಾರ್ಪಾಥಿಯನ್ ಗ್ರೇ, ಯುಲಾಂಗ್ ವೈಟ್ ಮತ್ತು ಸ್ಯಾಂಟೊರಿನಿ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ ಲಭ್ಯವಿರುತ್ತದೆ. ಇನ್ನು ಈ ಎಸ್‍ಯುವಿಯ ಮೈಕೊ ಸ್ಯೂಡೆಕ್ಲೋತ್ ಮತ್ತು ರೋಬಸ್ಟೆಕ್ ಅಂಶಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

ಇನ್ನು ಈ ಹೊಸ ಡಿಫೆಂಡರ್ ವಿ8 ಎಸ್‍ಯುವಿಯಲ್ಲಿ ಫೋರ್-ಸ್ಪೋಕ್ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನ್ ಹೊಂದಿದ್ದು, ಇದು ಅಲ್ಕಾಂಟರಾ ಲೆದರ್ ಅನ್ನು ಸುತ್ತುವರಿದಿದೆ. ಇನ್ನು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಈಗ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ,

ಅನಾವರಣವಾಯ್ತು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಎಸ್‍ಯುವಿ

10.0-ಇಂಚಿನ ಪಿವಿ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದ್ದು, ಇದನ್ನು 11.4-ಇಂಚಿನ ಯುನಿಟ್ ಆಗಿ ಅಪ್‌ಗ್ರೇಡ್ ಮಾಡಬಹುದು. ಹೊಸ ಡಿಫೆಂಡರ್ ವಿ8 ಎಸ್‍ಯುವಿಯ ಬ್ಲ್ಯಾಕ್ ಔಟ್ ರೂಫ್ ಅನ್ನು ಹೊಂದಿದೆ. ಇನ್ನು ಈ ಪವರ್ ಫುಲ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Land Rover Defender V8 Officially Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X