Just In
- 28 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ದರದ ಕ್ವಿಡ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ರೆನಾಲ್ಟ್
ರೆನಾಲ್ಟ್ ಇಂಡಿಯಾ ಕಂಪನಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಒಂದು ದಶಕದಿಂದಲೂ ಮಾರಾಟವಾಗುತ್ತಿದೆ. ರೆನಾಲ್ಟ್ ಕಂಪನಿಯ ಕಾರುಗಳ ಸರಣಿಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ.

ರೆನಾಲ್ಟ್ ಕ್ವಿಡ್ ಪ್ರಾರಂಭವಾದಾಗಿನಿಂದಲೂ ಸಣ್ಣ ಕಾರು ಖರೀದಿದಾರರ ಮೆಚ್ಚಿನ ಆಯ್ಕೆಯಲ್ಲಿ ಇದು ಕೂಡ ಒಂದಾಗಿದೆ. ಕ್ವಿಡ್ ಖರೀದಿದಾರರಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣವೆಂದರೆ ಇದರ ಲುಕ್ ಮತ್ತು ಪ್ರಾರಂಭವಾದ ಸಮಯದಲ್ಲಿ ತನ್ನ ವಿಭಾಗದಲ್ಲಿ ಟಚ್‌ಸ್ಕ್ರೀನ್ ನೀಡುವ ಏಕೈಕ ಮಾದರಿಯಾಗಿತ್ತು. ಕ್ವಿಡ್ ಕಾರಿನ ಮುಂಭಾಗದ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತದಲ್ಲಿ ಜನಪ್ರಿಯವಾಗಲು ಸಹಾಯ ಮಾಡಿತು.

ಕಳೆದ ವರ್ಷ ರೆನಾಲ್ಟ್ ಕ್ವಿಡ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಫೇಸ್‌ಲಿಫ್ಟೆಡ್ ಕ್ವಿಡ್ ಹ್ಯಾಚ್‌ಬ್ಯಾಕ್‌ಗಾಗಿ ರೆನಾಲ್ಟ್ ಇಂಡಿಯಾ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಟಿವಿಸಿಯನ್ನು ರೆನಾಲ್ಟ್ ಇಂಡಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ರೆನಾಲ್ಟ್ ಕ್ವಿಡ್‌ನ ಹೊರ ಮತ್ತು ಒಳಭಾಗವನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟೆಡ್ ಆವೃತ್ತಿಯು ಕೆಲವು ಬದಲಾವಣೆಗಳನ್ನು ಕಂಡಿದೆ.

ಹೊಸ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದ ಗ್ರಿಲ್ ಅನ್ನು ಪರಿಷ್ಕರಿಸಲಾಯಿತು ಮತ್ತು ವಿಭಾಗದಲ್ಲಿನ ಇತರ ಅನೇಕ ಪ್ರೀಮಿಯಂ ಕಾರುಗಳಂತೆ. ರೆನಾಲ್ಟ್ ಕ್ವಿಡ್ ಎಲ್ಇಡಿ ಡಿಆರ್ಎಲ್ ಗಳನ್ನು ಪಡೆದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಈ ಕಾರಿನ ಎಲ್ಇಡಿ ಡಿಆರ್ಎಲ್ ಗಳ ಪಕ್ಕದಲ್ಲಿಯೇ ಟರ್ನ್ ಇಂಡಿಕೇಟರ್ ಗಳನ್ನು ಇರಿಸಲಾಗುತ್ತದೆ. ಹೆಡ್‌ಲ್ಯಾಂಪ್‌ಗಳನ್ನು ಈಗ ಬಂಪರ್‌ನ ಕೆಳಗಿನ ಭಾಗದಲ್ಲಿ ಇರಿಸಲಾಗಿದೆ. ಇದು ಈಗ ಹೆಡ್‌ಲ್ಯಾಂಪ್‌ಗಳಲ್ಲಿ ಹ್ಯಾಲೊಜೆನ್ ಲೈಟ್ ಗಳೊಂದಿಗೆ ಬರುತ್ತದೆ.

ರೆನಾಲ್ಟ್ ಕ್ವಿಡ್ ಒಳಭಾಗದಲ್ಲಿ ಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಎಸಿ ವೆಂಟ್ ಮತ್ತು ಮುಂತಾದವುಗಳೊಂದಿಗೆ ನವೀಕರಿಸಿದ ಕ್ಯಾಬಿನ್ ಅನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಈಗ ರೆನಾಲ್ಟ್ ಟ್ರೈಬರ್ ಎಂಪಿವಿಯನ್ನು ಹೋಲುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ರೆನಾಲ್ಟ್ ಕ್ವಿಡ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 800-ಸಿಸಿ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.