ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಇವಿ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದರೂ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸಲಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಇವಿ ವಾಹನ ಉದ್ಯಮದಲ್ಲಿ ನುರಿತ ತಂಡದೊಂದಿಗೆ ಸ್ಥಾಪನೆಗೊಂಡಿರುವ ಹೊಸ ಸ್ಟಾರ್ಟ್ಅಪ್ ಕಂಪನಿ ರಿವೋಸ್(REVOS) ಕೂಡಾ ಸಕ್ರಿಯಗೊಳಿಸಲಾದ ಬೋಲ್ಟ್ ಲಾಟ್ ಟಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಆರಂಭಿಸಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ರಿವೋಸ್ ಕಂಪನಿಯು ಭಾರತದ 500 ನಗರಗಳಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಬೊಲ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಯೋಜಿಸಿದ್ದು, ಬೋಲ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಕೆದಾರರು ಕನಿಷ್ಠ ರೂ. 1 ರೂಪಾಯಿ ಪಾವತಿ ಅಳಡಿಸಿಕೊಳ್ಳಬಹುದಾಗಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಕಾಯಿನ್ ಬೂತ್ ಮಾದರಿಯಲ್ಲಿ ಗ್ರೀನ್ ಬೂತ್‌ ಸೌಲಭ್ಯವನ್ನು ಪರಿಚಯಿಸುತ್ತಿರುವ ರಿವೋಸ್ ಕಂಪನಿಯು ಡಿಸೆಂಬರ್ ನಂತರ ಆರಂಭಿಕ ರೂ. 1 ದರ ಹೆಚ್ಚಿಸಲಿದ್ದು, ಕಂಪನಿಯು ಹೊಸ ಸಕ್ರಿಯ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಹಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಬೋಲ್ಟ್ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಕೇವಲ ಕಂಪನಿಯು ಮಾತ್ರವಲ್ಲ ಸಾರ್ವಜನಿಕರಿಗೂ ತೆರೆಯಲು ಅನುಮತಿಸುತ್ತಿದ್ದು, ಸಾರ್ವಜನಿಕರು ತಮ್ಮ ಅನುಕೂಲಕತೆಗೆ ಅನುಗುಣವಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸಿಕೊಳ್ಳಬಹುದಾಗಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಕೇವಲ ಅರ್ಧ ಗಂಟೆಗಳ ಪತ್ರ ವ್ಯವಹಾರಗಳ ಮೂಲಕ ಬೋಲ್ಟ್ ನಿಲ್ದಾಣವನ್ನು ತೆರೆಯಲು ಅವಕಾಶ ನೀಡುವ ರಿವೋಸ್ ಕಂಪನಿಯು ಹೊಸ ಚಾರ್ಜಿಂಗ್ ನಿಲ್ದಾಣದಲ್ಲಿ ಸ್ವಂತ ಬಳಕೆಯ ವಾಹನಗಳ ಜೊತೆಗೆ ಖಾಸಗಿ ವಾಹನಗಳಿಗೂ ಚಾರ್ಜಿಂಗ್ ಸೌಲಭ್ಯ ಒದಗಿಸಲು ಅವಕಾಶ ನೀಡುತ್ತದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಬೋಲ್ಟ್ ಚಾರ್ಜಿಂಗ್ ನಿಲ್ದಾಣವನ್ನು ಅಳವಡಿಸಿಕೊಳ್ಳ ಬಯಸುವವರು ರಿವೋಸ್ ಆ್ಯಪ್ ಮೂಲಕ ಚಾರ್ಜಿಂಗ್ ಸೌಲಭ್ಯವನ್ನು ಸ್ವಂತಕ್ಕೆ ಅಥವಾ ಖಾಸಗಿ ವಾಹನ ಮಾಲೀಕರಿಗೂ ಚಾರ್ಜಿಂಗ್ ಸೌಲಭ್ಯ ಒದಗಿಸುವ ಮೂಲಕ ಆದಾಯ ಗಳಿಕೆಗೆ ಅವಕಾಶ ನೀಡುತ್ತದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ರಿವೋಸ್ ಕಂಪನಿಯು ಇವಿ ನಿಲ್ದಾಣವನ್ನು ಅಳವಡಿಸಿದ ನಂತರ ಪ್ರತ್ಯೇಕ ಆ್ಯಪ್ ಮೂಲಕ ಆಯಾ ಇವಿ ನಿಲ್ದಾಣಗಳ ನಿರ್ವಹಣೆ ಮಾಡಲು ಅನುಮತಿಸಲಿದ್ದು, ಇವಿ ನಿಲ್ದಾಣದ ಮಾಲೀಕರು ಕೇವಲ ವಾಹನಗಳಿಗೆ ಇಲ್ಲವೆ ತಮ್ಮ ವಾಹನಗಳ ಜೊತೆಗೆ ಸಾರ್ವಜನಿಕ ವಾಹನಗಳಿಗೆ ಚಾರ್ಜಿಂಗ್ ಸೇವೆಗಳನ್ನು ನೀಡಬಹುದಾಗಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ರಿವೋಸ್ ಬೋಲ್ಟ್ ಬಳಕೆದಾರರು ಪ್ರತ್ಯೇಕವಾದ ಆ್ಯಪ್ ಮೂಲಕ ಹತ್ತಿರದ ಇವಿ ನಿಲ್ದಾಣಗಳನ್ನು ಗುರುತಿಸಿ ಬಳಕೆ ಮಾಡಬಹುದಾಗಿದ್ದು, ಮಾಲೀಕರು ಬೋಲ್ಟ್ ಇವಿ ನಿಲ್ದಾಣಗಳನ್ನು 'ಸಾರ್ವಜನಿಕ' ಮತ್ತು 'ಖಾಸಗಿ' ಮೋಡ್‌ಗಳ ನಡುವೆ ಬದಲಾಯಿಸಬಹುದು.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

'ಸಾರ್ವಜನಿಕ' ಮತ್ತು 'ಖಾಸಗಿ' ಮೋಡ್‌ಗಳ ನಡುವೆ ಬದಲಾಯಿಸುದರಿಂದ ಬೋಲ್ಟ್ ನಿಲ್ದಾಣದಲ್ಲಿ ಮಾಲೀಕರು ಖಾಸಗಿ ಮೋಡ್ ಅನ್ನು ಮತ್ತು ಇವಿ ಚಾರ್ಜಿಂಗ್ ನಿಲ್ದಾಣದಿಂದ ಹಣ ಗಳಕೆ ಬಯಸುವ ಗ್ರಾಹಕರು ಸಾರ್ವಜನಿಕ ಮೋಡ್ ಮೂಲಕ ಇತರೆ ಇವಿ ವಾಹನಗಳಿಗೂ ಚಾರ್ಜಿಂಗ್ ನಿಲ್ದಾಣದ ಸೇವೆ ಒದಗಿಸಬಹುದು.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

'ಸಾರ್ವಜನಿಕ' ಮತ್ತು 'ಖಾಸಗಿ' ಮೋಡ್‌ಗಳನ್ನು ಬೋಲ್ಟ್ ಆ್ಯಪ್ ಮೂಲಕವೇ ಮಾಲೀಕರು ಬದಲಾವಣೆ ಮಾಡಬಹುದಾಗಿದ್ದು, ಕಂಪನಿಯು ಮುಂದಿನ 2 ವರ್ಷಗಳಲ್ಲಿ 1 ಮಿಲಿಯನ್ ಚಾರ್ಜಿಂಗ್ ಪಾಯಿಂಟ್ ತೆರೆಯುವ ಸಿದ್ದತೆಯಲ್ಲಿದೆ.

ಅತ್ಯಂತ ಸುಲಭ ಮತ್ತು ಕೈಗೆಟುಕುವ ದರದ ಇವಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿದ REVOS

ಸದ್ಯ ಬೆಂಗಳೂರು ಮತ್ತು ಸಿಂಗಪುರ್‌ನಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ ರಿವೋಸ್ ಕಂಪನಿಯು ಯೂನಿಯನ್ ಸ್ಕ್ವೇರ್ ವೆಂಚರ್ಸ್ ಮತ್ತು ಪ್ರೈಮ್ ವೆಂಚರ್ ಪಾಲುದಾರರಿಂದ 4.5 ಮಿಲಿಯನ್ ಯುಎಸ್ ಡಾಲರ್‌ಗಳನ್ನು ನಿಧಿಯಲ್ಲಿ ಸಂಗ್ರಹಿಸಿದ್ದು, ಭವಿಷ್ಯದ ಇವಿ ವಾಹನಗಳಿಗೆ ಅತಿ ಅವಶ್ಯವಾಗಿ ಬೇಕಿರುವ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳಕ್ಕೆ ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದೆ.

Most Read Articles

Kannada
English summary
Revos introducing india s largest peer to peer electric vehicle charging network
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X