ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ವಿಶ್ವದ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ರೋಲ್ಸ್ ರಾಯ್ಸ್ ವಿಶ್ವದ ಅತಿ ದುಬಾರಿ ಬೆಲೆಯ ಕಾರನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಸೂಪರ್ ಐಷಾರಾಮಿ ಕಾರಿಗೆ ಬೋಟ್ ಟೇಲ್ ಎಂದು ಹೆಸರಿಟ್ಟಿದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನ ವಿನ್ಯಾಸವು ರೇಸಿಂಗ್ ಬೋಟ್‌ ಅನ್ನು ಹೋಲುವುದರಿಂದ ಹಾಗೂ ಕಾರಿನ ಹಿಂಭಾಗದ ಡೆಕ್ ಪಿಕ್ನಿಕ್ ಟೇಬಲ್'ನಂತೆ ಬದಲಾಗುವುದರಿಂದ ಈ ದುಬಾರಿ ಬೆಲೆಯ ಕಾರಿಗೆ ಬೋಟ್ ಟೇಲ್' ಎಂದು ಹೆಸರಿಡಲಾಗಿದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಬೋಟ್ ಟೇಲ್ ಕಾರಿನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 28 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ.200 ಕೋಟಿಗಳಾಗಿದೆ. ರೋಲ್ಸ್ ರಾಯ್ಸ್ ಬೋಟ್ ಟೇಲ್ ಕಾರ್ ಅನ್ನು ಕಂಪನಿಯ ಅತ್ಯಂತ ಐಷಾರಾಮಿ ಕಾರು ಎಂದು ಪರಿಗಣಿಸಲಾಗಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನಲ್ಲಿ ಕಂಡುಬರುವ ಫೀಚರ್'ಗಳನ್ನು ರೋಲ್ಸ್ ರಾಯ್ಸ್ ಕಂಪನಿಯ ಬೇರೆ ಯಾವುದೇ ಕಾರಿನಲ್ಲಿ ನೀಡಿಲ್ಲ. ಅದಕ್ಕಾಗಿಯೇ ಈ ಕಾರ್ ಅನ್ನು ಕಂಪನಿಯ ಅತ್ಯಂತ ವಿಶಿಷ್ಟ ಕಾರು ಎಂದು ಕರೆಯಲಾಗುತ್ತದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನ ಅತ್ಯಂತ ಆಕರ್ಷಕ ಲಕ್ಷಣವೆಂದರೆ ಈ ಕಾರಿನ ಹಿಂಭಾಗದ ಡೆಕ್‌ನಲ್ಲಿ ಕಂಡುಬರುವ ಕಾಕ್ಟೈಲ್ ಸ್ಟೋರ್. ಅದರೊಳಗೆ ಅನೇಕ ರೀತಿಯ ಪಾನೀಯಗಳನ್ನು ಸಂಗ್ರಹಿಸಬಹುದು. ಇದರೊಂದಿಗೆ ಕನ್ವರ್ಟಿಬಲ್ ಟೇಬಲ್‌ ಹಾಗೂ ಚೇರ್'ಗಳನ್ನು ಸಹ ನೀಡಲಾಗಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಇವುಗಳ ಮೂಲಕ ಪಿಕ್'ನಿಕ್ ಅಥವಾ ಟ್ರಿಪ್'ಗಳು ಸುಲಭವಾಗುತ್ತವೆ. ಈ ಕಾರನ್ನು ರೋಮ್ಯಾಂಟಿಕ್ ವಿಹಾರಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ. ಮಾಧ್ಯಮವರದಿಗಳ ಪ್ರಕಾರ, 2017ರಲ್ಲಿ ಬಿಡುಗಡೆಯಾದ ಸ್ವೆಪ್ಟೈಲ್ ರೋಲ್ಸ್ ರಾಯ್ಸ್ ಕಂಪನಿಯ ಅತಿ ದುಬಾರಿ ಬೆಲೆಯ ಕಾರ್ ಆಗಿದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನ ಬೆಲೆ 12.8 ಮಿಲಿಯನ್ ಪೌಂಡ್‌ಗಳಾಗಿದೆ. ಬೋಟ್ ಟೇಲ್‌ನ ಕಾರಿನ ವಿನ್ಯಾಸವು ಸ್ವೀಪ್‌ಟೇಲ್‌ ಕಾರಿನಿಂದಲೇ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗಿದೆ. ಯುರೋಪಿನ ಕೆಲವು ಶ್ರೀಮಂತ ಉದ್ಯಮಿಗಳಿಗಾಗಿ ರೋಲ್ಸ್ ರಾಯ್ಸ್ ಕಂಪನಿಯು ಈ ಕಾರುಗಳನ್ನು ತಯಾರಿಸಿದೆ ಎಂದು ವರದಿಗಳಾಗಿವೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್‌ ಕಂಪನಿಯ ಎಲ್ಲಾ ಕಾರುಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಕಾರು ಬೇಕು ಎಂದು ಈ ಉದ್ಯಮಿಗಳು ಕಂಪನಿಗೆ ತಿಳಿಸಿದ್ದರು. ಉದ್ಯಮಿಗಳ ಈ ಬೇಡಿಕೆಯ ಮೇರೆಗೆ ಕಂಪನಿಯ ಎಂಜಿನಿಯರ್‌ಗಳು ನಾಲ್ಕು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಕಾರನ್ನು ಸಿದ್ಧಪಡಿಸಿದ್ದಾರೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯು ಕೇವಲ 3 ಯುನಿಟ್ ಬೋಟ್ ಟೇಲ್ ಕಾರುಗಳನ್ನು ತಯಾರಿಸುತ್ತದೆ. ಬೋಟ್ ಟೇಲ್ ಕಾರು ಖರೀದಿಸುವ ಗ್ರಾಹಕರು ಆ ಕಾರಿನಲ್ಲಿ ತಮ್ಮಿಷ್ಟದ ಬದಲಾವಣೆಗಳನ್ನು ಮಾಡಬಹುದು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಕಾರಿನಲ್ಲಿ ಯಾರ ಹೆಸರನ್ನು ಬೇಕಾದರೂ ಬರೆಯಲು ಅಥವಾ ಅವರಿಗೆ ಇಷ್ಟವಾದ ಥಿಮ್ ಅನ್ನು ಕಾರಿನಲ್ಲಿ ಅಳವಡಿಸಲು ಅನುಮತಿ ನೀಡಲಾಗುತ್ತದೆ. ರೋಲ್ಸ್ ರಾಯ್ಸ್ ಬೋಟ್ ಟೇಲ್ 4 ಸೀಟುಗಳನ್ನು ಹೊಂದಿರುವ ಸೆಡಾನ್ ಕಾರ್ ಆಗಿದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನ ಬೂಟ್ ಸ್ಪೇಸ್'ನಲ್ಲಿ ಡ್ರಿಂಕ್ಸ್ ಕ್ಯಾಬಿನ್ ನೀಡಲಾಗಿದ್ದು, ಅದರೊಳಗೆ ಶಾಂಪೇನ್ ಹಾಗೂ ಇತರ ಪಾನೀಯಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಬಹುದು. ಈ ಕಾರಿನ ಬೂಟ್‌ ಡೋರ್ ಬಟರ್‌ಫ್ಲೈ ರೆಕ್ಕೆಗಳಂತೆ ಮೇಲಕ್ಕೆ ತೆರೆದು ಕೊಳ್ಳುತ್ತದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರು ಕಾರ್ಬನ್ ಫೈಬರ್ ಹೊದಿಕೆ ಹೊಂದಿರುವ ಕನ್ವರ್ಟಿಬಲ್ ಓಪನ್ ಟಾಪ್ ರೂಫ್‌ ಹೊಂದಿದೆ. ರೋಲ್ಸ್ ರಾಯ್ಸ್ ಬೋಟ್ ಟೇಲ್ ಕಾರಿನಲ್ಲಿ ವಿ 12 6.75 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ರೂ.200 ಕೋಟಿ ಬೆಲೆಯ ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯ ಕುಲ್ಲಿನಾನ್, ಫ್ಯಾಂಟಮ್ ಹಾಗೂ ಬ್ಲ್ಯಾಕ್‌ಬ್ರಿಡ್ಜ್‌ ಕಾರುಗಳಲ್ಲೂ ಇದೇ ಎಂಜಿನ್ ಬಳಸಲಾಗುತ್ತದೆ. ಈ ಎಂಜಿನ್ 563 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Most Read Articles

Kannada
English summary
Rolls Royce launches new car priced Rs 200 crore. Read in Kannada.
Story first published: Saturday, May 29, 2021, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X