ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

2019 ರ ಜನವರಿಯಲ್ಲಿ ವಾಹನಗಳನ್ನು ಮಾರ್ಪಡಿಸುವುದು ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಕಾರುಗಳಲ್ಲಿ ಮಾಡುವ ಎಲ್ಲಾ ಮಾರ್ಪಾಡುಗಳು ಕಾನೂನುಬಾಹಿರವಲ್ಲ. ಕಾನೂನುಬದ್ಧವಾಗಿ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಟಯರ್ ಅಪ್ ಡೇಟ್

ಟಯರ್‌ಗಳನ್ನು ಕಾನೂನುಬದ್ಧವಾಗಿ ಅಪ್ ಡೇಟ್ ಮಾಡಬಹುದು. ಆದರೆ ಹೊಸ ಟಯರ್ ಗಳು ತಯಾರಕ ಕಂಪನಿಗಳ ಅವಶ್ಯಕತೆಗಳಿಗೆ ಒಳಪಟ್ಟಿರಬೇಕು. ಹೊಸ ಟಯರ್‌ಗಳು ಅದೇ ವೇಗದ ರೇಟಿಂಗ್ (ಎ) ಅಥವಾ ಸ್ಟಾಕ್ ಟಯರ್‌ಗಳಿಗಿಂತ ಹೆಚ್ಚಿನದನ್ನು ಹೊಂದಿರ ಬೇಕಾಗುತ್ತದೆ. ಹೊಸ ಟಯರ್ ಗಳು ಹೆಚ್ಚು ಅಗಲವನ್ನು ಹೊಂದಿದ್ದರೆ, ಕಾರಿನ ಸೈಡ್ವಾಲ್ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ರಿ ಪೇಂಟ್

ಕಾರು ಮಾಲೀಕರು ತಮ್ಮ ಇಷ್ಟದ ಬಣ್ಣವನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಬಣ್ಣದ ಮಾರ್ಪಾಡುಗಳಿಗೆ ಆರ್‌ಟಿಒ ಅನುಮೋದನೆ ಪಡೆಯಬೇಕು. ಇದರ ಬಗ್ಗೆ ಕಾರಿನ ನೋಂದಣಿ ಪ್ರಮಾಣಪತ್ರದಲ್ಲಿ ಕಾರಿನ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ತಿಳಿಸಬೇಕು. ಆದರೆ ಆರ್ಮಿ ಗ್ರೀನ್ ಬಣ್ಣದಲ್ಲಿ ಕಾರುಗಳನ್ನು ಪೇಂಟ್ ಮಾಡುವಂತಿಲ್ಲ. ಈ ಬಣ್ಣವನ್ನು ಮಿಲಿಟರಿ ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಸಸ್ಪೆಂಷನ್ ಅಪ್‌ಗ್ರೇಡ್

ಕಾರು ಮಾಲೀಕರು ತಮ್ಮ ಕಾರಿಗೆ ಅತ್ಯುತ್ತಮವಾದ ಸಸ್ಪೆಂಷನ್ ಪಡೆಯಬಹುದು. ಇದರಿಂದ ಕಾರು ಪ್ರಯಾಣದ ಅನುಭವ ಹೆಚ್ಚುತ್ತದೆ. ಆ್ಯಂಟಿ ರೋಲ್ ಬಾರ್ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಿರುವುಗಳಲ್ಲಿ ಕಾರು ತಿರುಗಿಸುವಾಗ ಬಾಡಿ ರೋಲ್‌ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಇದರಿಂದ ಆರಾಮದಾಯಕ ಸವಾರಿಯನ್ನು ಪಡೆಯಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ವಿಶೇಷ ಚೇತನರಿಗಾಗಿ ಮಾರ್ಪಾಡುಗಳು

ಕಾರುಗಳಲ್ಲಿ ವಿಶೇಷ ಚೇತನರಿಗೆ ನೆರವಾಗುವ ಮಾರ್ಪಾಡುಗಳನ್ನು ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ವಿಶೇಷ ಚೇತನರಿಗಾಗಿ ಕಾರುಗಳಲ್ಲಿರುವ ಒಆರ್‌ವಿ‌ಎಂ, ವ್ಹೀಲ್‌ಚೇರ್ ಲಿಫ್ಟ್‌, ಆಟೋಮ್ಯಾಟಿಕ್ ಅಥವಾ ಕೈಯಿಂದ ಚಾಲಿತವಾಗುವ ಕ್ಲಚ್, ಆಕ್ಸಲರೇಟರ್, ಬ್ರೇಕ್‌ ಸೇರಿದಂತೆ ಕೆಲವು ಭಾಗಗಳನ್ನು ಮಾರ್ಪಾಡು ಮಾಡಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಕಾರುಗಳನ್ನು ಇನ್ನೂ ಹಲವು ರೀತಿಯಲ್ಲಿ ಮಾರ್ಪಡಿಸಬಹುದು. ಮಾರುತಿ ಸುಜುಕಿ ಆಲ್ಟೊ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್‌ನಂತಹ ಯಾವುದೇ ಕಾರನ್ನು ವಿಶೇಷ ಚೇತನರಿಗೆ ಸರಿಹೊಂದುವಂತೆ ಮಾರ್ಪಡಿಸಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಬಾಡಿ ವ್ರಾಪ್

ಬಾಡಿ ವ್ರಾಪ್ ಕಾರಿನ ಪೇಂಟ್‌ವರ್ಕ್‌ಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಬದಲಿಗೆ ವಿನೈಲ್ ಹೊದಿಕೆಯು ಕಾರಿನ ಫ್ಯಾಕ್ಟರಿ ಬಣ್ಣವನ್ನು ರಕ್ಷಿಸುತ್ತದೆ. ಈ ಮಾರ್ಪಾಡು ಮಾಡಲು ಕಾರು ಚಾಲಕರಿಗೆ ರೂ. 10 ಸಾವಿರಗಳಿಂದ ರೂ. 1 ಲಕ್ಷಗಳವರೆಗೆ ವೆಚ್ಚವಾಗಬಹುದು. ಇವುಗಳನ್ನು ಸರಿಯಾಗಿ ಅಳವಡಿಸಿದರೆ 5 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಕಾರಿನಲ್ಲಿ ವಿನೈಲ್ ಅನ್ನು ಹೊದಿಸುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸುತ್ತುವ ಮೊದಲು ಅಥವಾ ನಂತರ ಆರ್‌ಟಿ‌ಓ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕು. ಈ ರೀತಿ ಕಾನೂನು ಬದ್ಧವಾಗಿ ಕಾರ್ ಅನ್ನು ಮಾಡಿಫೈ ಮಾಡಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಕೆಲವರು ಕಾನೂನು ಪ್ರಕಾರ ಮಾತ್ರ ವಾಹನಗಳನ್ನು ಮಾರ್ಪಡಿಸಿದರೆ, ಇನ್ನೂ ಕೆಲವರು ನಿಯಮ ಉಲ್ಲಂಘಿಸಿ ವಾಹನಗಳನ್ನು ಮಾರ್ಪಾಡು ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಮಾರ್ಪಾಡು ಮಾಡುವ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡುವ ಸಾಧ್ಯತೆಗಳಿರುತ್ತವೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ. ಈ ಕಾರಣಕ್ಕೆ ವಾಹನಗಳನ್ನು ಮಾಡಿಫೈ ಮಾಡುವ ಮುನ್ನ ಹೆಚ್ಚು ಜಾಗರೂಕತೆ ವಹಿಸಬೇಕು. ಭಾರತದಲ್ಲಿ ದ್ವಿಚಕ್ರ ವಾಹನಗಳು ಅದರಲ್ಲೂ ವಿಶೇಷವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹೆಚ್ಚು ಮಾಡಿಫೈ ಮಾಡಲಾಗುತ್ತದೆ. ಬಹುತೇಕ ಜನರು ಈ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಅಳವಡಿಸುವ ಅಭ್ಯಾಸ ಹೊಂದಿದ್ದಾರೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಇದು ತಪ್ಪು ಎಂದು ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಪೊಲೀಸರು ಹಲವು ಬಾರಿ ವಶಕ್ಕೆ ಪಡೆದು ಅವುಗಳನ್ನು ನಾಶಪಡಿಸಿದ್ದಾರೆ. ಆದರೂ ದ್ವಿಚಕ್ರ ವಾಹನ ಮಾಲೀಕರಲ್ಲಿ ಇನ್ನೂ ಈ ಬಗ್ಗೆ ಜಾಗೃತಿ ಮೂಡದಿರುವುದು ವಿಷಾದನೀಯ. ಮೊದಲೇ ಹೇಳಿದಂತೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಮಾಡಿಫೈಗೊಂಡಿರುವ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ.

ಭಾರತದಲ್ಲಿ ಕಾನೂನುಬದ್ಧವಾಗಿರುವ ವಾಹನ ಮಾರ್ಪಾಡುಗಳಿವು

ಮಾಡಿಫೈ ಮಾಡಲಾದ ವಾಹನಗಳನ್ನು ಜನರು ರೇಸಿಂಗ್ ಟ್ರ್ಯಾಕ್ ಅಥವಾ ಫಾರಂಹೌಸ್‌ನಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು. ಒಂದು ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಕಂಡು ಬಂದರೆ ಸಾರಿಗೆ ಇಲಾಖೆ ಅಥವಾ ಸಂಚಾರಿ ಪೊಲೀಸರು ಆ ವಾಹನಗಳನ್ನು ವಶಕ್ಕೆ ಪಡೆಯಬಹುದು. ಇದು ಮಾತ್ರವಲ್ಲದೆ ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳಾದ ಬುಲ್‌ಬಾರ್‌ಗಳ ಅಳವಡಿಕೆ ಹಾಗೂ ಇತರ ಬದಲಾವಣೆಗಳನ್ನು ಸಹ ವಾಹನದಲ್ಲಿ ನಿಷೇಧಿಸಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಹಿಂದೆ ಇಂತಹ ಮಾಡಿಫೈಗೊಂಡ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು ಎಂಬುದು ಗಮನಾರ್ಹ.

ಇತ್ತೀಚಿಗೆ ಅಸ್ಸಾಂನ ವ್ಯಕ್ತಿಯೊಬ್ಬರುತಮ್ಮ ದ್ವಿಚಕ್ರ ವಾಹನವನ್ನು ನಾಲ್ಕು ಜನ ಪ್ರಯಾಣಿಸುವಂತೆ ಪರಿವರ್ತಿಸಿದ್ದಾರೆ. ತಮ್ಮ ನಾಲ್ಕು ಜನರ ಕುಟುಂಬಕ್ಕಾಗಿ ಈ ಸ್ಕೂಟರ್ ಅನ್ನು ಅವರು ಈ ರೀತಿ ವಿನ್ಯಾಸಗೊಳಿಸಿದ್ದಾರೆ. ಈ ಸ್ಕೂಟರ್ ನೋಡಲು ತುಂಬಾ ವಿಶೇಷವಾಗಿರುವುದರ ಜೊತೆಗೆ ವಿಶಿಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಮಾಡಿಫೈಗೊಂಡ ಸ್ಕೂಟರ್ ನಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಅವರು ಎರಡು ಸ್ಕೂಟರ್ ಗಳನ್ನು ಒಟ್ಟಿಗೆ ಸೇರಿಸಿ ಈ ರೀತಿ ಮಾಡಿಫೈ ಮಾಡಿದ್ದಾರೆ.

Most Read Articles

Kannada
English summary
Some car modifications which are legal in india details
Story first published: Saturday, November 27, 2021, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X