ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹದಿನಾಲ್ಕನೇ ಆವೃತ್ತಿಯು ಮುಂದಿನ ತಿಂಗಳು ಏಪ್ರಿಲ್ 9ರಿಂದ ಆರಂಭವಾಗುತ್ತಿದ್ದು, ಬಿಸಿಸಿಐ ಜೊತೆಗೆ ಸತತ ನಾಲ್ಕನೇ ವರ್ಷವೂ ಪಾಲುದಾರಿಕೆ ಪ್ರಕಟಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ನ್ಯೂ ಸಫಾರಿ ಎಸ್‌ಯುವಿ ಮಾದರಿಯನ್ನು ಪ್ರದರ್ಶನಗೊಳಿಸಲಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

2018ರಿಂದಲೇ ಬಿಸಿಸಿಐ ಜೊತೆಗೆ ಅಧಿಕೃತ ಪಾಲುದಾರಿಕೆ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಮೂರು ವರ್ಷಗಳ ಪಾಲುದಾರಿಕೆ ವಹಿಸಿಕೊಂಡಿತ್ತು. ಇದೀಗ ನಾಲ್ಕನೇ ವರ್ಷಕ್ಕೂ ಪಾಲುದಾರಿಕೆ ಮುಂದುವರಿಸಲಾಗಿದ್ದು, ತನ್ನ ಹೊಸ ತಲೆಮಾರಿನ ಸಫಾರಿ ಎಸ್‌ಯುವಿ ಮಾದರಿಯನ್ನು ಪ್ರತಿ ಟೂರ್ನಿಯಲ್ಲೂ ಪ್ರದರ್ಶನಗೊಳಿಸಲಿದೆ. ಜೊತೆಗೆ ಐಪಿಎಲ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರಿಗೆ ಸಫಾರಿ ಕಾರುಗಳನ್ನು ಘೋಷಣೆ ಮಾಡಲಿರುವ ಟಾಟಾ ಕಂಪನಿಯು ವೀಕ್ಷಕರಿಗೂ ಕಾರು ಗೆಲ್ಲುವ ಅವಕಾಶಗಳನ್ನು ನೀಡುತ್ತಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿಗಳು ಏಪ್ರಿಲ್ 9ರಿಂದ ಆರಂಭಗೊಳ್ಳಲಿದ್ದು, ಮೇ 30ರ ವರೆಗೂ ನಡೆಯಲಿದೆ. ಏ.9ರಂದು ಚೆನ್ನೈನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಸಹ ಆಯೋಜಿಸಲಾಗಿದ್ದು, ಐಪಿಎಲ್‌ನ ಅಧಿಕೃತ ಪಾಲುದಾರ ಕಾರ್ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಎರಡನೇ ಅವಧಿಗಾಗಿ ಮತ್ತೆ ಮೂರು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಇನ್ನು ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ತಿಂಗಳಿನಲ್ಲಿಯೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನ್ಯೂ ಜನರೇಷನ್ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಸಫಾರಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ. ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಒಮೆಗಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳುವ ಮೂಲಕ ಹೊಸ ಸಫಾರಿ ಕಾರು ಐಷಾರಾಮಿ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಹೊಸ ಕಾರಿನ ಬೆಸ್ ಮಾದರಿಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯಗಳಿವೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಮಧ್ಯಮ ಆವೃತ್ತಿಗಳಲ್ಲಿ ಆರಂಭಿಕ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ನೀಡಲಾಗಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್ ಸೌಲಭ್ಯಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಹಾಗೆಯೇ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಟಾಪ್ ಎಂಡ್‍ಗಳಲ್ಲಿ 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ, 9 ಜೆಬಿಎಲ್ ಸ್ಪೀಕರ್ಸ್ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಪನೊರಮಿಕ್ ಸನ್‌ರೂಫ್ ಸೌಲಭ್ಯ ಸೇರಿದಂತೆ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಿವೊ ಐಪಿಎಲ್ 2021: ಅಧಿಕೃತ ಪಾಲುದಾರಿಕೆ ಪ್ರಕಟಿಸಿದ ಟಾಟಾ ಸಫಾರಿ!

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

Most Read Articles

Kannada
English summary
Tata SAFARI is the Official Partner for VIVO IPL 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X