ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಸಫಾರಿ ಕಾರಿನ ನ್ಯೂ ಜನರೇಷನ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಆವೃತ್ತಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

2021ರ ಸಫಾರಿ ಆವೃತ್ತಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಸ್ಟ್ಯಾಂಡರ್ಡ್ ಮಾದರಿಯ ವಿತರಣೆಗೆ ಕಳೆದ ತಿಂಗಳ ಆರಂಭದಲ್ಲೇ ಚಾಲನೆ ನೀಡಿರುವ ಟಾಟಾ ಕಂಪನಿಯು ಇದೀಗ ಅಡ್ವೆಂಚರ್ ಮಾದರಿಯ ವಿತರಣೆಯನ್ನು ಆರಂಭಿಸಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಸ್ಟ್ಯಾಂಡರ್ಡ್ ಎಕ್ಸ್‌ಜೆಡ್ ಪ್ಲಸ್ ಆಧರಿಸಿ ಅಭಿವೃದ್ದಿಗೊಂಡಿರುವ ಎಕ್ಸ್‌ಜೆಡ್ ಪ್ಲಸ್ ಪೆರಸೊನಾ ಅಡ್ವೆಂಚರ್ ಮಾದರಿಯು ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯ ಹೊಂದಿದ್ದು, ಅಡ್ವೆಂಚರ್ ಮಾದರಿಯಾಗಿ ಗುರುತಿಸಿಕೊಳ್ಳಲು ಮೈಸ್ಟಿಕ್ ಬ್ಲ್ಯೂ ಬಣ್ಣದ ಆಯ್ಕೆಯೊಂದಿಗೆ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಸಫಾರಿ ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷದಿಂದ ರೂ. 21.25 ಲಕ್ಷ ಬೆಲೆ ಹೊಂದಿದ್ದಲ್ಲಿ ಅಡ್ವೆಂಚರ್ ಪೆರಸೊನಾ ಮಾದರಿಯು ರೂ. 20.20 ಲಕ್ಷದಿಂದ ರೂ. 21.45 ಲಕ್ಷ ಬೆಲೆ ಹೊಂದಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಜೊತೆಗೆ ಚಾರ್ಕೊಲ್ ಗ್ರೇ ಬಣ್ಣದ ಆಯ್ಕೆ ಹೊಂದಿರುವ ಸ್ಕೀಡ್ ಪ್ಲೇಟ್, 18-ಇಂಚಿನ ಅಯಾಲ್ ವೀಲ್ಹ್, ರೂಫ್ ರೈಲ್ಸ್, ಫ್ರಂಟ್ ಗ್ರಿಲ್‌ನಲ್ಲಿ ಕಪ್ಪು ಬಣ್ಣವನ್ನು ನೀಡಲಾಗಿದ್ದು, ಹೊರಭಾಗದ ಬಣ್ಣದ ಆಯ್ಕೆ ಮತ್ತು ಬ್ಲ್ಯಾಕ್ ಔಟ್ ಅಂಶಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲೇ ಒಳಭಾಗದ ವಿನ್ಯಾಸಗಳನ್ನು ಮುಂದುವರಿಸಲಾಗಿದೆ.

ಒಳಭಾಗದಲ್ಲಿ ಬ್ರೌನ್ ಲೆದರ್ ಆಸನಗಳು ಮತ್ತು ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್ ಹೊರತುಪಡಿಸಿ ಇನ್ನುಳಿದ ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಮಾದರಿಯ ಎಕ್ಸ್‌ಜೆಡ್ ಪ್ಲಸ್ ಆಧರಿಸಿರುವ ಅಡ್ವೆಂಚರ್ ಸಫಾರಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದ್ದು, ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಹೊಸ ಕಾರಿನ ಬೆಸ್ ಮಾದರಿಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಮಧ್ಯಮ ಆವೃತ್ತಿಗಳಲ್ಲಿ ಆರಂಭಿಕ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ನೀಡಲಾಗಿದೆ.

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್ ಸೌಲಭ್ಯಗಳಿವೆ. ಹಾಗೆಯೇ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಫಾರಿ ಅಡ್ವೆಂಚರ್ ಪೆರಸೊನಾ ಎಡಿಷನ್ ವಿತರಣೆಗೆ ಚಾಲನೆ ನೀಡಿದ ಟಾಟಾ

ಎಂಜಿನ್ ಮತ್ತು ಪರ್ಫಾಮೆನ್ಸ್

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

Image Courtesy: Naveen Sayani/Facebook

Most Read Articles

Kannada
English summary
Tata Started The Deliveries Of Safari Adventure Persona Edition. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X