ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಐಷಾರಾಮಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಲೆಕ್ಸಸ್ ತನ್ನ ಎಲ್ಎಕ್ಸ್ 600 ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಿದೆ. ಇದು ಹೊಸ ರೂಪವನ್ನು ಪಡೆದುಕೊಂಡ ಮೂರನೇ ತಲೆಮಾರಿನ ಲೆಕ್ಸಸ್ ಎಲ್ಎಕ್ಸ್ 600(Lexus LX 600) ಎಸ್‍ಯುವಿ ಮಾದರಿಯಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಟೊಯೊಟಾ ಲ್ಯಾಂಡ್ ಕ್ರೂಸರ್‌ಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಅನ್ನು ಹೊಸ ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿಯು ಹಂಚಿಕೊಳ್ಳುತ್ತದೆ. ಹಿಂದಿನ ತಲೆಮಾರಿನವರಿಗಿಂತಲೂ 200 ಕೆಜಿಗಿಂತಲೂ ಕಡಿಮೆ ತೂಕವನ್ನು ಹೊಂದಿದೆ, ಸ್ಟೈಲಿಂಗ್ ಒಂದು ಲೆಕ್ಸಸ್‌ನ ವಿಶಿಷ್ಟವಾದ ಸೈಡ್ ಪ್ರೊಫೈಲ್‌ನೊಂದಿಗೆ ಎಲ್‌ಎಕ್ಸ್ 600 ಅದರ ಸಾಂಪ್ರದಾಯಿಕ ಟೊಯೊಟಾ ಸಮಾನ ಲ್ಯಾಂಡ್ ಕ್ರೂಸರ್ ಎಸ್‌ಯುವಿಗೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಲೆಕ್ಸಸ್ ನಾಲ್ಕನೇ ಗ್ಲಾಸ್ ಮತ್ತು ವಿಭಿನ್ನ ಹಿಂಭಾಗದ ಪಿಲ್ಲರ್ ಅನ್ನು ಹೊಂದಿದೆ. ಆದರೆ ಉಳಿದವು ಪ್ರಾಯೋಗಿಕವಾಗಿ ಒಂದೇ ಆಗಿರುತ್ತವೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಹೊಸ ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿಯ ಮುಂಭಾಗದಲ್ಲಿರುವ ಸಾಲ್ಡ್ ಆಕ್ಸಲ್ ಗ್ರಿಲ್ ಮತ್ತು ಅಗಲವಾದ ಎಲ್‌ಇಡಿ ಟೈಲ್‌ಲೈಟ್ ಹೊಸ ಲ್ಯಾಂಡ್ ಕ್ರೂಸರ್‌ಗೆ ಹೋಲಿಸಿದರೆ ಕೆಲವು ಪ್ರಮುಖ ವಿನ್ಯಾಸ ಬದಲಾವಣೆಗಳಾಗಿವೆ. ಇನ್ನು ಕ್ಯಾಬಿನ್ ಒಳಗೆ ಕೆಲವು ಬದಲಾವಣೆಗಳಿವೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಈ ಹೊಸ ಲೆಕ್ಸಸ್ ಎಲ್ಎಕ್ಸ್ 600 ಈಗ ಲೆಕ್ಸಸ್ ಡ್ಯುಯಲ್ ಟಚ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದ್ದು, ಆಫ್-ರೋಡ್ ಸಿಸ್ಟಂ, ಆಡಿಯೋ ಮತ್ತು ನ್ಯಾವಿಗೇಷನ್ ನಿಯಂತ್ರಣಗಳನ್ನು ತೋರಿಸಲು 12.3 ಇಂಚಿನ ಸ್ಕ್ರೀನ್ ಹೊಂದಿದೆ. ಕೆಳಭಾಗದಲ್ಲಿ ಮತ್ತೊಂದು ಮಾನಿಟರ್ ಇದ್ದು ಅದು ಕ್ಲೈಮೇಂಟ್ ತ್ವರಿತ ಪ್ರವೇಶವನ್ನು ಒದಗಿಸುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಇನ್ನು ಆಫ್-ರೋಡ್ ಡೇಟಾವನ್ನು ಪ್ರದರ್ಶಿಸುವ ಮೂಲಕ ಮಲ್ಟಿ-ಟೆರೈನ್ ಸೆಲೆಕ್ಟ್ಗೆ ಬೆಂಬಲವಾಗಿ ಕಾರ್ಯನಿರ್ವಹಿಸಬಹುದು. ಈ ಅಲ್ಟ್ರಾ ಐಷಾರಾಮಿ ದರ್ಜೆಯನ್ನು ನಾಲ್ಕು ಸ್ವತಂತ್ರ ಹಿಂದಿನ ಸೀಟ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸೀಟುಗಳು ಹೆಚ್ಚು ಲೆಗ್‌ರೂಮ್‌ಗಾಗಿ ಮಡಚಬಹುದಾದಷ್ಟು ಆರಾಮದಾಯಕವಾಗಿದೆ. ಈ ಎಲ್ಎಕ್ಸ್ ಅಲ್ಟ್ರಾ ಐಷಾರಾಮಿ ಪ್ರಯೋಜನಗಳನ್ನು ಹೊಂದಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಇದರಲ್ಲಿ ಎದ್ದು ಕಾಣುವುದು, ರೀಡಿಂಗ್ ಲೈಟ್ಸ್, ಹಿಂದಿನ ಮನರಂಜನಾ ವ್ಯವಸ್ಥೆ ಮತ್ತು ರೂಫ್ ವೆಂಟ್ಸ್ ಗಳನ್ನು ಹೊಂದಿವೆ.ಎಲ್ಎಕ್ಸ್ 600 ಎಫ್ ಸ್ಪೋರ್ಟ್ ಟ್ರಿಮ್ ವಿಶೇಷವಾದ 22 ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಪಡೆಯುತ್ತದೆ. ಇದು ಹಿಂದಿನ ಮಾದರಿಗೆ ದೊಡ್ಡದಾಗಿದೆ, ಇದು ಪ್ರಮುಖ ರೂಪ ವ್ಯತ್ಯಾಸ ಮಾತ್ರವಲ್ಲ, ಹಿಂಭಾಗದ ಆಕ್ಸಲ್‌ನಲ್ಲಿ ಉತ್ತಮ ಟ್ಯಾಕ್ಷನ್ ಗಾಗಿ ಸೀಮಿತ ಸ್ಲಿಪ್ ಅನ್ನು ನೀಡಲಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿಯಲ್ಲಿ ಲೀಟರ್ ಟ್ವಿನ್-ಟರ್ಬೊ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಹಿಂದಿನ ಮಾದರಿಯಲ್ಲಿ ಇದ್ದ 5.7-ಲೀಟರ್ ವಿ 8 ಎಂಜಿನ್ ಅನ್ನು ಬದಲಾಯಿಸಲಾಗಿದೆ. ಹೊಸ ಎಂಜಿನ್ ಅನ್ನು ಲ್ಯಾಂಡ್ ಹೊಸ ಲ್ಯಾಂಡ್ ಕ್ರೂಸರ್ ಎಸ್‌ಯುವಿಗೂ ನೀಡಲಾಗಿದೆ. ಹೊಸ ಎಂಜಿನ್ 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಇದು ಹಿಂದಿನ ತಲೆಮಾರಿನ ಮಾದರಿಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ.. ಅಲ್ಲದೇ ಕಡಿಮೆ ತೂಕವನ್ನು ಹೊಂದಿದೆ. ಅದರ ಹಿಂದಿನದಕ್ಕಿಂತ ಸುಮಾರು 26 ಬಿಹೆಚ್‍ಪಿ ಪವರ್ ಮತ್ತು 107 ಎನ್ಎಂ ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಬದಲಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಲೆಕ್ಸಸ್ ತನ್ನ ಎರಡನೇ ತಲೆಮಾರಿನ ಎನ್ಎಕ್ಸ್ ಎಸ್‍ಯುವಿಯನ್ನು ಇತ್ತೀಚೆಗೆ ಪರಿಚಯಿಸಿತು. ಈ 2022ರ ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿಯು ಹೊಸ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಎನ್‌ಎಕ್ಸ್ ಎಸ್‍ಯುವಿಯ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಲೆಕ್ಸಸ್ ಎನ್ಎಕ್ಸ್ ಎಸ್‍ಯುವಿ 'ಸ್ಪಿಂಡಲ್ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಹಳೆಯ ಮಾದರಿಯಲ್ಲಿದ್ದ ಸ್ಪ್ಲಿಟ್ ಯೂನಿಟ್‌ಗಳನ್ನು ಬದಲಾಯಿದೆ. ಹಿಂಭಾಗದಲ್ಲಿ ಎಲ್-ಆಕಾರದ ಟೈಲ್ ಲ್ಯಾಂಪ್‌ಗಳಿಗೆ ಒಂದು ಹೊಸ ಎಲ್‌ಇಡಿ ಸ್ಟ್ರಿಪ್‌ನೊಂದಿಗೆ ಮಧ್ಯದಲ್ಲಿ ಸೇರ್ಪಡೆಗೊಳ್ಳುತ್ತದೆ.ಇದರ ಮುಂಭಾಗದಲ್ಲಿ ಫಾಗ್ ಲ್ಯಾಂಪ್ ಗಳೊಂದಿಗೆ ಸಿ-ಆಕಾರದ ಏರ್ ಟೆಕ್ ಅನ್ನು ಹೊಂದಿದ್ದು, ಇದು ಎಸ್‍ಯುವಿಗೆ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ನೀಡಿದೆ. ಅದರ ಒಟ್ಟಾರೆ ಲುಕ್ ಮತ್ತು ಸಿಲೂಯೆಟ್ ಅದರ ಹಿಂದಿನಂತೆಯೇ ಇರುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಹೊಸ ಎನ್‌ಎಕ್ಸ್ ಅನ್ನು ಅದರ ಹಿಂದಿನದಕ್ಕಿಂತ ಭಿನ್ನವಾಗಿ ಹೊಂದಿಸುವ ಉದ್ದವಾದ ಹುಡ್, ಹೊಸ ಲೈನ್ಸ್ ಗಳು ಮತ್ತು ಅಗ್ರೇಸಿವ್ ಕ್ರೀಸ್‌ಗಳನ್ನು ಹೊಂದಿದ್ದು, ಇದು ಎಸ್‍ಯುವಿಯನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ.ಈ ಎಸ್‍ಯುವಿಯ ಹಿಂಭಾಗದಲ್ಲಿ ಲೈಟ್ ಬಾರ್‌ನೊಂದಿಗೆ ಎಲ್ಇಡಿ ಟೈಲ್-ಲೈಟ್‌ಗಳು ನಿಜವಾಗಿಯೂ ಎನ್‌ಎಕ್ಸ್ ಅನ್ನು ಆಧುನೀಕರಿಸುತ್ತವೆ. ಹಿಂಭಾಗದಲ್ಲಿರುವ ಮತ್ತೊಂದು ಬದಲಾವಣೆಯೆಂದರೆ, ಟೈಲ್ ಗೇಟ್‌ನಲ್ಲಿರುವ ಲೆಕ್ಸಸ್ ಬ್ಯಾಡ್ಜ್ ಅನ್ನು ನೀಡಿದ್ದಾರೆ. ಹೊರಭಾಗದಂತೆಯೇ, ಹೊಸ ಎನ್‌ಎಕ್ಸ್‌ನ ಒಳಬಾಗದಲ್ಲಿಯು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ನವೀಕರಿಸಲಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ Lexus LX 600 ಎಸ್‍ಯುವಿ

ಇನ್ನು ಟೊಯೊಟಾದ ಲ್ಯಾಂಡ್ ಕ್ರೂಸರ್ ಭಾರತೀಯ ಮಾರುಕಟ್ಟೆಗೆ ಮರಳುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ,ಲೆಕ್ಸಸ್ ಎಲ್ಎಕ್ಸ್ 600 ಎಸ್‍ಯುವಿಯನ್ನು ಭಾರತದಲ್ಲಿ ಪರಿಚಯಿಸಲಾಗುತ್ತದೆ. ಈ ಹೊಸ ಲೆಕ್ಸಸ್ ಎಲ್ಎಕ್ಸ್ 600 ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ,

Most Read Articles

Kannada
English summary
Third gen lexus lx 600 luxury suv debuts with major upgrades details
Story first published: Thursday, October 14, 2021, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X