ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಆಗಾಗ್ಗೆ ಬಸ್ಸಿನಲ್ಲಿ, ರೈಲಿನಲ್ಲಿ, ಆಂಬ್ಯುಲೆನ್ಸ್'ನಲ್ಲಿ, ಆಟೋ ರಿಕ್ಷಾದಲ್ಲಿ ಹೆರಿಗೆಯಾಗುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಈಗ ಇದೇ ರೀತಿಯ ಘಟನೆಯೊಂದು ಅಮೆರಿಕಾದಿಂದ ವರದಿಯಾಗಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಪೆನ್ಸಿಲ್ವೇನಿಯಾದ ಮಹಿಳೆಯೊಬ್ಬರು ಟೆಸ್ಲಾ (Tesla) ಕಾರಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುತ್ತಿತ್ತು.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಅಮೆರಿಕಾದ ಪತ್ರಿಕೆಯೊಂದರ ವರದಿಗಳ ಪ್ರಕಾರ ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದೆ. 33 ವರ್ಷದ ಐರನ್ ಶೆರ್ರಿ ಎಂಬುವವರು ತಮ್ಮ ಪತಿ 34 ವರ್ಷದ ಕೀಟಿಂಗ್ ಶೆರ್ರಿ ಹಾಗೂ 3 ವರ್ಷದ ಮಗ ರಾಫಾ ರವರೊಂದಿಗೆ ಟೆಸ್ಲಾ ಕಾರಿನಲ್ಲಿ ತಮ್ಮ ಮಗನ ಶಾಲೆಗೆ ಹೋಗುತ್ತಿದ್ದರು. ಗರ್ಭಿಣಿಯಾಗಿದ್ದ ಐರನ್ ಶೆರ್ರಿ ಪ್ರಯಾಣದ ವೇಳೆ ಮಧ್ಯ ದಾರಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಮೇವ್ ಲಿಲಿ ಎಂದು ಹೆಸರಿಡಲಾಗಿರುವ ಈ ಮಗುವನ್ನು ವಿಶ್ವದ ಮೊದಲ ಟೆಸ್ಲಾ ಬೇಬಿ ಎಂದು ಪರಿಗಣಿಸಲಾಗಿದೆ. ಮಾಹಿತಿಗಳ ಪ್ರಕಾರ ಈ ದಂಪತಿ ತಮ್ಮ 3 ವರ್ಷದ ಮಗನ ಶಾಲೆಗೆ ಹೋಗುತ್ತಿದ್ದರು. ಗರ್ಭಿಣಿಯಾಗಿದ್ದ ಐರನ್ ಶೆರ್ರಿರವರಿಗೆ ಮನೆಯಿಂದ ಹೊರ ಹೋಗುವಾಗ ಸ್ವಲ್ಪ ಸೊಂಟ ನೋವು ಕಾಣಿಸಿಕೊಂಡಿದೆ. ಆಕೆಯ ಪತಿ ಕೀಟಿಂಗ್ ಶೆರ್ರಿ ಆಕೆಯನ್ನು ಕಾರಿಗೆ ಹತ್ತಿಸಿದ್ದಾರೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಇವರಿಬ್ಬರು ತಮ್ಮ ಟೆಸ್ಲಾ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರೆ, ಅವರ ಮಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ. ಅವರು ಚಲಿಸುತ್ತಿದ್ದ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು. ಐರನ್ ಶೆರ್ರಿರವರಿಗೆ ಹೆರಿಗೆ ನೋವು ಜಾಸ್ತಿಯಾದ ಕಾರಣ ಆಕೆಯ ಪತಿ ಕಾರ್ ಅನ್ನು ಆಟೋ ಪೈಲಟ್ ಮೋಡ್‌ಗೆ ಹಾಕಿ, ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಆಸ್ಪತ್ರೆ ತಲುಪಲು ಇನ್ನೂ 20 ನಿಮಿಷಗಳು ಬೇಕು ಎಂದು ಕಾರಿನ ಡ್ಯಾಶ್‌ಬೋರ್ಡ್ ತೋರಿಸಿದೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಐರನ್ ಶೆರ್ರಿರವರು ಸಹ ಆಸ್ಪತ್ರೆಗೆ ತಲುಪುವವರೆಗೂ ನೋವನ್ನು ಸಹಿಸಿಕೊಳ್ಳಬೇಕು ಎಂದು ಕೊಂಡರು. ಆದರೆ ನೋವು ಸಹಿಸಲಾರದೆ ಚಲಿಸುತ್ತಿದ್ದ ಕಾರಿನೊಳಗೆ ಮಗುವಿಗೆ ಜನ್ಮ ನೀಡಿದ್ದಾರೆ. ಮುಂದೇನು ಮಾಡಬೇಕೆಂದು ತೋಚದ ಕೀಟಿಂಗ್ ಶೆರ್ರಿ, ತನಗೆ ಗೊತ್ತಿರುವ ವೈದ್ಯರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ವೈದ್ಯರ ಸಲಹೆಯ ಅನುಸಾರ ಆಕೆಯನ್ನು ಹಿಂದಿನ ಸೀಟಿನಲ್ಲಿ ಮಲಗಿಸಿ ಆಕೆಯ ಹಾಗೂ ಮಗುವಿನ ನಡುವಿನ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಾರೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ನವಜಾತ ಶಿಶು ಮೇವ್ ಲಿಲಿ ಹಾಗೂ ಐರನ್ ಶೆರ್ರಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವಾಸ್ತವವಾಗಿ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿಯ ಸಹಾಯವಿಲ್ಲದೆ ಹೆರಿಗೆ ಕಷ್ಟ. ಅದರಲ್ಲೂ ಕಾರಿನಂತಹ ಚಿಕ್ಕ ಜಾಗಗಳಲ್ಲಿ ಇನ್ನೂ ಕಷ್ಟ. ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಯಾವುದಾದರೂ ಒಂದು ಬಟನ್‌ ಅನ್ನು ತಪ್ಪಾಗಿ ಪ್ರೆಸ್ ಮಾಡಿದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಆದರೆ ಅದೃಷ್ಟವಶಾತ್ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಈ ಘಟನೆಯನ್ನು ಅವರು ಸಾಯುವವರೆಗೂ ಮರೆಯಲು ಸಾಧ್ಯವಿಲ್ಲ. ಈ ಟೆಸ್ಲಾ ಕಾರ್ ಅನ್ನು ದೀರ್ಘಕಾಲದವರೆಗೆ ಇಡಲು ಬಯಸುವುದಾಗಿ ದಂಪತಿಗಳು ನಂತರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಇನ್ನು ಅಮೆರಿಕಾ ಮೂಲದ ಟೆಸ್ಲಾ ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶ್ವದ ಯಾವುದೇ ಕಂಪನಿಯು ಟೆಸ್ಲಾ ಕಂಪನಿಯ ರೀತಿಯಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಇತ್ತೀಚಿಗೆ ಟೆಸ್ಲಾ ಕಂಪನಿಯು ತನ್ನ ಆಸ್ತಿ ಮೌಲ್ಯದ ವಿವರಗಳನ್ನು ಬಿಡುಗಡೆ ಮಾಡಿದೆ. ಅಂದ ಹಾಗೆ ಟೆಸ್ಲಾ ಕಂಪನಿಯ ಕಾರುಗಳು ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಟೆಸ್ಲಾ ಕಂಪನಿಯು ವಿಶ್ವಾದಾದ್ಯಂತ 1 ಟ್ರಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದೆ. ಅಮೆರಿಕಾದ ಜನಪ್ರಿಯ ಬಾಡಿಗೆ ಕಾರು ಕಂಪನಿಯಾದ ಹರ್ಟ್ಜ್, ಟೆಸ್ಲಾ ಕಂಪನಿಯಿಂದ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಇದಾದ ನಂತರ ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ಗಳನ್ನು ಮೀರಿದೆ. ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರುಗಳನ್ನು ವೈಯಕ್ತಿಕ ಬಳಕೆದಾರರು ಹಾಗೂ ಹರ್ಟ್ಜ್‌ನಂತಹ ಬಾಡಿಗೆ ಕಾರು ಕಂಪನಿಗಳು ಹೆಚ್ಚು ಖರೀದಿಸುತ್ತಿದ್ದಾರೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಇದರಿಂದ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಟೆಸ್ಲಾ ಕಂಪನಿಯು ಸದಾ ಕಾಲ ಕ್ರಿಯಾಶೀಲರಾಗಿರುವುದರಿಂದ ಹರ್ಟ್ಜ್‌ನಂತಹ ಹೊಸ ಕಂಪನಿಗಳೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿದೆ. ಟೆಸ್ಲಾ ಹಾಗೂ ಹರ್ಟ್ಜ್ ನಡುವಿನ ಒಪ್ಪಂದವು 4 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆ ಅಮೆರಿಕಾದಲ್ಲಿ 40,000 ಡಾಲರ್ ಗಳಾಗಿದೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಈ ಮೂಲಕ ಟೆಸ್ಲಾ ಹಾಗೂ ಹರ್ಟ್ಜ್ ನಡುವೆ 4 ಬಿಲಿಯನ್ ಡಾಲರ್ ಒಪ್ಪಂದವೇರ್ಪಟ್ಟಿದ್ದು, ಟೆಸ್ಲಾ ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ದಾಟಿದೆ. ಈ ಸುದ್ದಿ ಟೆಸ್ಲಾ ಕಂಪನಿಯ ಷೇರುಗಳನ್ನು ಖರೀದಿಸಿದವರಿಗೆ ಸಿಹಿ ನೀಡಿದೆ. ಇದರಿಂದ ಟೆಸ್ಲಾ ಕಂಪನಿಯ ಷೇರು ಬೆಲೆ 1,024.86 ಡಾಲರ್ ಗಳಿಗೆ ಏರಿಕೆಯಾಗಿದೆ. ಅಂದರೆ ಮೊದಲಿಗಿಂತ 13% ನಷ್ಟು ಏರಿಕೆಯಾಗಿದೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 255.8 ಬಿಲಿಯನ್ ಡಾಲರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಎಲಾನ್ ಮಸ್ಕ್ ರವರ ಆಸ್ತಿ ಮೌಲ್ಯವು 11.4% ನಷ್ಟು ಹೆಚ್ಚಾಗಿದೆ. ಅಂದ ಹಾಗೆ ಟೆಸ್ಲಾ ಕಂಪನಿಯು ಈ ವರ್ಷದ ಜನವರಿಯಲ್ಲಿ ತನ್ನ ಕಚೇರಿಯನ್ನು ನಮ್ಮ ಬೆಂಗಳೂರಿನಲ್ಲಿ ನೋಂದಾಯಿಸಿತ್ತು.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಭಾರತೀಯ ಗ್ರಾಹಕರು ಟೆಸ್ಲಾ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ. ಟೆಸ್ಲಾ ಕಂಪನಿಯ ಮಾಡೆಲ್ 3 ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲಾಗಿದೆ.

ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಜನಿಸಿದ ವಿಶ್ವದ ಮೊದಲ ಮಗುವಿದು

ಇತ್ತೀಚೆಗೆ ಎಲಾನ್ ಮಸ್ಕ್'ರವರು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಭಾರತದಲ್ಲಿ ಟೆಸ್ಲಾ ಕಂಪನಿಯ ಕಾರುಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಟೆಸ್ಲಾ ಕಂಪನಿಯ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ.

Most Read Articles

Kannada
English summary
Us woman gives birth to baby in autopilot tesla car details
Story first published: Sunday, December 26, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X