ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಕೈಗೆಟುಕುವ ಬೆಲೆಯ 10 ಲಕ್ಷದೊಳಗಿನ ಕಾರುಗಳು

ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷ (2022) ಭಾರತ ಹಾಗೂ ವಿದೇಶಿ ವಾಹನ ತಯಾರಿಕ ಕಂಪನಿಗಳು ಹಲವು ಕಾರುಗಳನ್ನು ಪರಿಚಯಿಸಿವೆ. ಅವುಗಳ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2022ರಲ್ಲಿ ಕೈಗೆಟುಕುವ ಬೆಲೆಯ 10 ಲಕ್ಷದೊಳಗಿನ ಯಾವ ಕಾರುಗಳು ಮಾರುಕಟ್ಟೆಗೆ ಬಂದವು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್:
ಈ ವರ್ಷ ಮಾರುಕಟ್ಟೆಗೆ ಬಂದ ಮಾರುತಿ ಸುಜುಕಿ ಬಲೆನೊ, ಹಿಂದಿನ ಆವೃತ್ತಿಗಿಂತ ಹಲವು ನವೀಕರಣಗಳನ್ನು ಪಡೆದುಕೊಂಡಿದೆ. ಹೊಸ ಬಲೆನೊ ಕ್ಯಾಬಿನ್ ಅನ್ನು ಮರುವಿನ್ಯಾಸಗೊಳಿಸಲಾಗಿದ್ದು, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್-ಕಾರ್ ಟೆಕ್, ಆರ್ಕಮಿಸ್ ಸೌಂಡ್ ಸಿಸ್ಟಮ್, ರಿವರ್ಸಿಂಗ್ ಕ್ಯಾಮೆರಾ, ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಕ್ರೂಸ್ ಕಂಟ್ರೋಲ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ರೂ 6.49 ಲಕ್ಷದಿಂದ ರೂ 9.71 ಲಕ್ಷ (ಎಕ್ಸ್ ಶೋ ರೂಂ).

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಕೈಗೆಟುಕುವ ಬೆಲೆಯ 10 ಲಕ್ಷದೊಳಗಿನ ಕಾರುಗಳು

ಟೊಯೊಟಾ ಗ್ಲಾನ್ಜಾ ಫೇಸ್‌ಲಿಫ್ಟ್:
ಬಲೆನೊ-ಆಧಾರಿತ ಟೊಯೊಟಾ ಗ್ಲ್ಯಾನ್ಜಾವನ್ನು ಕೂಡ ಶೀಘ್ರದಲ್ಲೇ ನವೀಕರಿಸಲಾಗುತ್ತಿದೆ. ಇದು ಬಲೆನೊದಂತೆಯೇ 1.2-ಲೀಟರ್ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದ್ದು, ಇದು 90 PS ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು 5-ಸ್ಪೀಡ್ MT ಅಥವಾ ಐಚ್ಛಿಕ AMTಯೊಂದಿಗೆ ಖರೀದಿಗೆ ಲಭ್ಯವಿದ್ದು, ಟೊಯೊಟಾ ಗ್ಲಾನ್ಜಾ ಪ್ರಸ್ತುತ ರೂ.6.59 ಲಕ್ಷದಿಂದ ರೂ.9.99 ಲಕ್ಷದವರೆಗೆ (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ.

ಹುಂಡೈ ವೆನ್ಯೂ ಫೇಸ್‌ಲಿಫ್ಟ್:
ಹ್ಯುಂಡೈ ವೆನ್ಯೂ 2022ರಲ್ಲಿ ಮಿಡ್-ಲೈಫ್ ಮೇಕ್‌ಓವರ್ ಅನ್ನು ಪಡೆದುಕೊಂಡಿತು. ಇದು ದೊಡ್ಡ ಪ್ಯಾರಾಮೆಟ್ರಿಕ್ ಜ್ಯುವೆಲ್ ಗ್ರಿಲ್‌ನೊಂದಿಗೆ ಹೊಸ ಸುತ್ತುವ ಟೈಲ್ ಲೈಟ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಹಿಂಭಾಗವನ್ನು ಒಟ್ಟಿಗೆ ಜೋಡಿಸಲಾಗಿದೆ. ವೆನ್ಯೂ ಫೇಸ್‌ಲಿಫ್ಟ್ ಆರಂಭಿಕ ಬೆಲೆ ರೂ.7.53 ಲಕ್ಷದಿಂದ (ಎಕ್ಸ್-ಶೋರೂಂ) ಆರಂಭವಾಗುತ್ತದೆ.1.2-ಲೀಟರ್ NA ಪೆಟ್ರೋಲ್ ಎಂಜಿನ್‌, 1.0-ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಬ್ರೆಝಾ:
ಮಾರುತಿ ಸುಜುಕಿ ಬ್ರೆಝಾ 2022ರಲ್ಲಿ ಹಲವು ನವೀಕರಣವನ್ನು ಪಡೆದುಕೊಂಡಿತು. ಎಲೆಕ್ಟ್ರಿಕ್ ಸನ್‌ರೂಫ್, ದೊಡ್ಡ ಇನ್ಫೋಟೈನ್‌ಮೆಂಟ್ ಪರದೆಯಂತಹ ವೈಶಿಷ್ಟ್ಯಗಳನ್ನು ಹೊಂದಿತು. ಇದು 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ MTಗೆ ಜೋಡಿಸಲಾಗಿದೆ. ಆದರೆ, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಈಗ ಹೊಸ 6-ಸ್ಪೀಡ್ ATಯೊಂದಿಗೆ ಲಭ್ಯವಿದೆ. ಮುಂಭಾಗದ ಸ್ಟೈಲಿಂಗ್ ಸೇರಿದಂತೆ ಹಲವು ನವೀಕರಣಗಳೊಂದಿಗೆ ಬ್ರೆಝಾ ಅದರ ಹಿಂದಿನ ಆವೃತ್ತಿಗಿಂತ ಅತ್ಯುತ್ತಮವಾಗಿ ಕಾಣುತ್ತದೆ. ಹೊಸ ಬ್ರೆಝಾ ಬೆಲೆ ರೂ.7.99 ಲಕ್ಷದಿಂದ ರೂ 13.96 ಲಕ್ಷ (ಎಕ್ಸ್ ಶೋ ರೂಂ) ಇದೆ.

ಸಿಟ್ರೊಯೆನ್ C3:
ಸಿ3ಯನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸಿಟ್ರೊಯೆನ್‌ನ ಎರಡನೇ ಕಾರಾಗಿ ಬಿಡುಗಡೆ ಮಾಡಲಾಯಿತು. ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ KUV100NXT ಪ್ರತಿಸ್ಪರ್ಧಿಯಾಗಿರುವ ಈ ಕಾರಿನ ಆರಂಭಿಕ ಬೆಲೆ ರೂ.5.88 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.8.15 ಲಕ್ಷ (ಎಕ್ಸ್-ಶೋರೂಂ) ಇದೆ. ಈ ಹೊಸ ಕಾರು, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4-ಸ್ಪೀಕರ್ ಸೌಂಡ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲ್ಯೂಸ್‌, ಎತ್ತರ-ಹೊಂದಾಣಿಕೆ ಚಾಲಕ ಸೀಟು ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ ಕೆ10:
ಮಾರುತಿ ಸುಜುಕಿ ಈ ವರ್ಷದ ಆಗಸ್ಟ್‌ನಲ್ಲಿ ಆಲ್ಟೊ ಕೆ10ನ ನ್ಯೂ-ಜನರೇಷನ್ ಆವೃತ್ತಿಯನ್ನು ಪರಿಚಯಿಸಿತು. ಇದರ ಆರಂಭಿಕ ಬೆಲೆ ರೂ.3.99 ಲಕ್ಷ ಇದ್ದು, ಮತ್ತು ಟಾಪ್ ಎಂಡ್ ಮಾದರಿ ಬೆಲೆ ರೂ.5.95 ಲಕ್ಷ (ಎಕ್ಸ್ ಶೋ ರೂಂ) ಇದೆ. ಹೊಸ ಆಲ್ಟೊ ಕೆ 10, 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 67ಪಿಎಸ್ ಪವರ್, 89ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿ:
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಇತ್ತೀಚಿನ 10 ಲಕ್ಷ ರೂ.ಗಳ ಒಳಗಿನ ಕಾರು ಟಾಟಾ ಟಿಯಾಗೊ ಇವಿ ಆಗಿದೆ. ಇದರ ಬೆಲೆಗಳು ರೂ.8.49 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದು ದೇಶದ ಅತ್ಯಂತ ಕೈಗೆಟುಕುವ ಸಂಪೂರ್ಣ ಎಲೆಕ್ಟ್ರಿಕ್ ಕಾರು ಆಗಿದೆ ಎಂದು ಹೇಳಬಹುದು. ಈ ಕಾರು 19.2 kWh ಅಥವಾ 24 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಒಂದೇ ಚಾರ್ಜಿನಲ್ಲಿ ಇದು ಕ್ರಮವಾಗಿ 250 ಕಿಮೀ ಮತ್ತು 315 ಕಿಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Affordable cars under 10 lakhs launched in india this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X