Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರ್ ಡ್ರೈವಿಂಗ್ ಕಲಿಯುತ್ತಿದ್ದೀರಾ?: ಹಾಗಾದರೆ ಈ ಸಲಹೆಗಳು ನಿಮಗೆ ಬಹಳ ಮುಖ್ಯ
ಎರಡು ದಶಕಗಳ ಹಿಂದೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಕಾರುಗಳು ಈಗ ಬಡ-ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಗೆ ಲಭ್ಯವಾಗುತ್ತಿವೆ. ಅನೇಕ ಮಂದಿ ಡ್ರೈವಿಂಗ್ ವಲಯವನ್ನೇ ನಂಬಿ ಜೀವನ ಮಾಡುತಿದ್ದು, ಕಾರುಗಳನ್ನೇ ಜೀವನಧಾರವಾಗಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಯುವಕ, ಯುವತಿಯರು ಕಾರ್ ಕಲಿಯಲು ಮುಂದಾಗುತಿದ್ದಾರೆ. ಆದರೆ ಕಾರನ್ನು ಕಲಿಯುವ ಮುನ್ನ ತಿಳಿದುಕೊಳ್ಳಬೇಕಾದ ಮೂಲಭೂತ ಅಂಶಗಳ ಬಗ್ಗೆ ಅದೆಷ್ಟೋ ಮಂದಿಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಕೆಲವು ಚಾಲನಾ ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಡ್ರೈವಿಂಗ್ ವೇಳೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಾಕಷ್ಟು ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

1. ಓಡಿಸುವ ಕಾರಿನ ಬಗ್ಗೆ ತಿಳಿದುಕೊಳ್ಳಿ
ಡ್ರೈವಿಂಗ್ ಮಾಡುವುದಕ್ಕೂ ಮುನ್ನ ನಿಮ್ಮ ಮೊದಲು ಕರ್ತವ್ಯವೆಂದರೇ ಕಾರನ್ನು ಆರಾಮದಾಯಕವಾಗಿಸುವುದು. ನೀವು ಪ್ರಾಯೋಗಿಕವಾಗಿ ಚಾಲನೆ ಪ್ರಾರಂಭಿಸುವ ಮೊದಲು ಕ್ಲಚ್, ಗೇರ್ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಹೆಚ್ಚಿನ ವೇಗದಲ್ಲಿ ಕಡಿಮೆ ಗೇರ್‌ಗೆ ಎಂದಿಗೂ ಬದಲಾಯಿಸಬಾರದು. ಅಲ್ಲದೇ ನೀವು ರಿವರ್ಸ್ ಗೇರ್ ಹಾಕುವ ಮುನ್ನ ಕಾರನ್ನು ನಿಲ್ಲಿಸುವುದು ಉತ್ತಮವೆಂಬುದು ಎಂದಿಗೂ ಮರಿಯಬಾರದು.

2. ನಿಮ್ಮ ಸೀಟ್ ಸರಿಪಡಿಸಿಕೊಳ್ಳಿ
ಡ್ರೈವಿಂಗ್‌ನಲ್ಲಿ ಸರಿಯಾದ ಆಸನ ಸ್ಥಾನವು ನಿರ್ಣಾಯಕವಾಗಿದೆ, ಅನುಭವಿ ಚಾಲಕರು ಸಹ ಕೆಲವೊಮ್ಮೆ ಸೀಟನ್ನು ಸರಿಯಾಗಿ ಇರಿಸಿಕೊಳ್ಳುವುದಿಲ್ಲ. ಇದರಿಂದ ಅಸೌಕರ್ಯ ಮತ್ತು ನಿಯಂತ್ರಣ ತಪ್ಪಬಹುದು, ಇದು ಅಪಘಾತಗಳ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಬೆನ್ನು ಸೀಟಿಗೆ ಹೊಂದಿಕೊಳ್ಳುವಂತೆ ನೇರವಾಗಿ ಕುಳಿತುಕೊಳ್ಳಬೇಕು. ಇದರಿಂದ ಸಂಬವನೀಯ ಬೆನ್ನು ನೋವುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಆಸನದ ವ್ಯವಸ್ಥೆ ಹೇಗಿರಬೇಕೆಂದರೆ ಆರಾಮದಾಯಕವಾಗಿ ಕುಳಿತು ಸುತ್ತಲೂ ನೋಡುವ ಸ್ಥಿತಿಯಲ್ಲಿ ಹೊಂದಿಸಬೇಕು. ಸಾಮಾನ್ಯವಾಗಿ ಆಸನದ ಎತ್ತರವು ನಿಮ್ಮ ಕಣ್ಣುಗಳು ವಿಂಡ್‌ಶೀಲ್ಡ್‌ನ ಅರ್ಧದಷ್ಟು ಎತ್ತರದಲ್ಲಿರಬೇಕು ಎಂದು ಹೇಳಲಾಗುತ್ತದೆ. ನೀವು ಕಾರಿನ ವೇಗವರ್ಧಕ, ಬ್ರೇಕ್ ಮತ್ತು ಕ್ಲಚ್ ಪೆಡಲ್‌ಗಳನ್ನು ಅನ್ವಯಿಸಿದಾಗ ನಿಮ್ಮ ಮೊಣಕಾಲುಗಳು ಹೆಚ್ಚು ಹಿಗ್ಗದಿರುವ ಸ್ಥಾನದಲ್ಲಿ ಆಸನ ಇರಬೇಕು.

ನಿಮ್ಮ ಬಲಗಾಲಿನಿಂದ ಬ್ರೇಕ್ ಅನ್ನು ಸಂಪೂರ್ಣವಾಗಿ ತಳ್ಳಿ ಕ್ಲಚ್ ಅನ್ನು ಒತ್ತಿರಿ, ಪೆಡಲ್‌ಗಳನ್ನು ಸಂಪೂರ್ಣವಾಗಿ ಒತ್ತಿದಾಗ ನಿಮ್ಮ ಮೊಣಕಾಲುಗಳು ಸುಮಾರು 120 ಡಿಗ್ರಿಗಳಷ್ಟು ಬಾಗುವ ರೀತಿಯಲ್ಲಿ ಇರಬೇಕು. ಈ ವೇಳೆ ನೇರವಾಗಿ ಕುಳಿತು ಮತ್ತು ಮುಂದಕ್ಕೆ ಬಾಗದಂತೆ ಇರಬೇಕು.

3. ಗೊಂದಲವಿರಬಾರದು
ಡ್ರೈವರ್ ಸೀಟಿನಲ್ಲಿದ್ದವರಿಗೆ ಸುತ್ತಮುತ್ತಲಿನ ಕಡೆ ಹೆಚ್ಚು ಗಮನವಿರಬೇಕು, ಕನ್ನಡಿಗಳನ್ನು ಹೊಂದಿಸಿ, ಸೀಟ್‌ಬೆಲ್ಟ್ ಧರಿಸಿ ಮತ್ತು ರಸ್ತೆಯ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಚಾಲನೆ ಮಾಡುವಾಗ ಗೊಂದಲವಿರಬಾರದು, ಏಕೆಂದರೆ ಇಂದಿನ ದಿನಗಳಲ್ಲಿ ರಸ್ತೆಗಳು ಜಾಮ್ ಆಗಿರುತ್ತವೆ. ಆದ್ದರಿಂದ ನೀವು ಪ್ರತಿ ಸೆಕೆಂಡಿಗೆ ನಿಮ್ಮ ಕಣ್ಣುಗಳು ಮತ್ತು ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ ಇಲ್ಲದಿದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ.

ನೀವು ಚಾಲನೆಯನ್ನು ಪ್ರಾರಂಭಿಸುವ ಮೊದಲು ಎರಡು ಸಾಮಾನ್ಯ ಮತ್ತು ಮೂಲಭೂತ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿವೆ. ಚಾಲನೆ ಮಾಡುವಾಗ ಮೊಬೈಲ್ ಫೋನ್ ಅನ್ನು ಯಾವುದೇ ಕಾರಣಕ್ಕೂ ಬಳಸಬೇಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಈ ನಿಯಮಗಳ ಜೊತೆಗೆ, ಹೊಸ ಡ್ರೈವರ್‌ಗಳು ವಿಶೇಷವಾಗಿ ತಿನ್ನುವುದನ್ನು ತಪ್ಪಿಸಿ ಜೊತೆಗಿದ್ದವರೊಂದಿಗೆ ಮಾತನಾಡುತ್ತ ಭದ್ರವಾಗಿ ಡ್ರೈವ್ ಮಾಡಬೇಕು.

4. ಸ್ಟೀರಿಂಗ್ ಚಕ್ರದ ಮೇಲೆ ನಿಯಂತ್ರಣವಿರಲಿ
ಸ್ಟೀರಿಂಗ್ ಚಕ್ರವನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಸರಿಯಾದ ಮಾರ್ಗವಿಲ್ಲವಾದರೂ, ಚಕ್ರದ ಮೇಲೆ ಗರಿಷ್ಠ ನಿಯಂತ್ರಣವನ್ನು ಹೊಂದಲು ನೀವು ಅದನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬುದನ್ನು ಕಲಿಯಿರಿ. ಹೆಚ್ಚಿನ ಸಂಶೋಧನೆಗಳು ಸ್ಟೀರಿಂಗ್ ಮೇಲೆ ಹಿಡಿತ ಸಾಧಿಸಲು '9 ಓ ಕ್ಲಾಕ್ ಮತ್ತು 3 ಓ ಕ್ಲಾಕ್' ಎಂಬ ಪೊಸಿಷನ್‌ಗಳು ಅತ್ಯುತ್ತಮವಾಗಿದೆ ಎಂದು ತಿಳಿಸಿವೆ. ಈ ಮೂಲಕ ಸ್ಟೀರಿಂಗ್ ಮತ್ತು ಕಾರಿನ ಉತ್ತಮ ನಿಯಂತ್ರಣವನ್ನು ಸಾಧಿಸಬಹುದು.

5. ಇಂಡಿಕೇಟರ್‌ಗಳನ್ನು ಬಳಸುವುದು ಮರೆಯದಿರಿ
ತಿರುವು ಸಂಕೇತಗಳು ಅಥವಾ ಇಂಡಿಕೇಟರ್‌ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ. ಒಮ್ಮೆ ನೀವು ರಸ್ತೆಯಲ್ಲಿ ಹೋದರೆ, ನೀವು ಅನೇಕರಲ್ಲಿ ಒಬ್ಬರಾಗಿರುತ್ತೀರಿ ಆದ್ದರಿಂದ, ನೀವು ತಿರುವು ಪಡೆದುಕೊಳ್ಳುತ್ತಿರುವಾಗ ನಿಮ್ಮ ಸುತ್ತಲಿನ ವಾಹನಗಳನ್ನು ಎಚ್ಚರಿಸುವುದು ಬಹಳ ಮುಖ್ಯ. ಇಂಡಿಕೇಟರ್‌ಗಳನ್ನು ಬಳಸುವುದರಿಂದ ರಸ್ತೆಯಲ್ಲಿನ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು.

6. ಅತಿವೇಗ ಬೇಡ
ಕಾರನ್ನು ಚಾಲನೆ ಮಾಡುವಾಗ ಯುವಕರು ಹೆಚ್ಚಿನ ವೇಗವನ್ನು ತಲುಪಲು ಬಯಸುತ್ತಾರೆ. ಇದು ಸಹಜವಾದರೂ ಆರಂಭಿಕರಾದರೆ ವೇಗವನ್ನು ಪ್ರಾರಂಭಿಸುವ ಮೊದಲು ನೀವು ಮೊದಲು ಕಾರಿನೊಂದಿಗೆ ಪರಿಚಿತರಾಗಿರುವುದು ಬಹಳ ಮುಖ್ಯ. ಕಾರನ್ನು ನಿಯಂತ್ರಣಕ್ಕೆ ತರುವ ಸಾಮರ್ಥ್ಯವಿದ್ದರೆ ಮಾತ್ರ ವೇಗವಾಗಿ ಡ್ರೈವ್ ಮಾಡಬಹುದು.

7. ಇತರ ವಾಹನಗಳಿಂದ ಅಂತರವಿರಲಿ
ಮುಂದೆ ಚಲಿಸುವ ವಾಹನದಿಂದ ಯಾವಾಗಲೂ ಯೋಗ್ಯ ಅಂತರವನ್ನು ಕಾಯ್ದುಕೊಳ್ಳಬೇಕು. ನೀವು ತುಂಬಾ ಸುರಕ್ಷಿತ ಚಾಲಕರಾಗಿರಬಹುದು ಅಥವಾ ಎಲ್ಲಾ ನಿಯಮಗಳು, ನಿಬಂಧನೆಗಳನ್ನು ಅನುಸರಿಸಬಹುದು. ಆದರೆ ಇತರರು ಕೂಡ ನಿಮ್ಮಂತೆಯೇ ಇರುತ್ತಾರೆ ಎಂದುಕೊಳ್ಳುವುದು ತಪ್ಪು ಕಲ್ಪನೆ. ಹಾಗಾಗಿ ಸುರಕ್ಷಿತವಾಗಿ ಓಡಿಸಲು ಉತ್ತಮ ಮಾರ್ಗವೆಂದರೆ ಆಕ್ರಮಣಕಾರಿ ಚಾಲನೆಗಿಂತ ಹೆಚ್ಚಾಗಿ ರಕ್ಷಣಾತ್ಮಕ ಚಾಲಕರಾಗಿರುವುದು.

8. ಅನವಶ್ಯಕ ಹಾರ್ನ್ ಬೇಡ
ಹಾರ್ನ್‌ಗಳು ನಿಮ್ಮ ಸುತ್ತಲಿನ ಚಾಲಕರನ್ನು ಎಚ್ಚರಿಸಲು, ನಿಮ್ಮ ಹತಾಶೆಯನ್ನು ಹೊರಹಾಕಲು ಅಲ್ಲ. ಹಾರ್ನ್‌ಗಳ ಅತಿಯಾದ ಬಳಕೆಯು ಸಹ ವಾಹನ ಚಾಲಕರನ್ನು ಕೆರಳಿಸಬಹುದು ಮತ್ತು ಕೆಲವೊಮ್ಮೆ ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು. ಹಾಗಾಗಿ ಅವಶ್ಯಕತೆ ಇದ್ದಷ್ಟೇ ಬಳಸುವುದು ಉತ್ತಮ.

9. ಚಾಲನೆ ವೇಳೆ ಶಾಂತವಾಗಿರಿ
ನಿಮ್ಮ ಮನಸ್ಥಿತಿಯು ಚಾಲನೆ ಮಾಡುವ ವೇಳೆ ಶಾಂತವಾಗಿ ಇರಬೇಕು. ಕೋಪದ ಚಾಲನೆಯು ನಿಮ್ಮನ್ನು ವೇಗಗೊಳಿಸಲು ಒತ್ತಾಯಿಸಬಾರದು. ಉತ್ತಮ ಮನಸ್ಥಿತಿಯು ರಸ್ತೆಯ ಮಧ್ಯದಲ್ಲಿ ಅಡ್ಡಾಡಲು ನಿಮಗೆ ಹಕ್ಕಿದೆ ಎಂದು ಅರ್ಥವಲ್ಲ. ಎಲ್ಲಾ ಸಮಯದಲ್ಲೂ ಶಾಂತವಾಗಿ ಮತ್ತು ಸಂಯೋಜನೆಯಿಂದಿರಿ. ಚಾಲನೆ ಮಾಡುವಾಗ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದರಿಂದ ಇತರರಿಗೂ ತೊಂದರೆ ಇರುವುದಿಲ್ಲ.