ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

90 ಎಲೆಕ್ಟ್ರಿಕ್ ಮಿನಿ ಬಸ್‌ಗಳ ಯಶಸ್ವಿ ಕಾರ್ಯಾಚರಣೆಯ ನಂತರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 12 ಮೀಟರ್ ಉದ್ದದ 300 ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಅಶೋಕ್ ಲೇಲ್ಯಾಂಡ್ ಈ ಬಸ್‌ಗಳನ್ನು ಬಿಎಂಟಿಸಿಗೆ ಪೂರೈಸುತ್ತಿದ್ದು, ಚಾಲಕರನ್ನು ಕಂಪನಿಯೇ ಒದಗಿಸುತ್ತಿದೆ. ಆದರೆ ಬಿಎಂಟಿಸಿ ನೌಕರರು ಇದರಲ್ಲಿ ನಿರ್ವಾಹಕರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಮಾಹಿತಿಯ ಪ್ರಕಾರ ಬೆಂಗಳೂರಿನಿಂದ ಬಿಡದಿ, ಹೊಸಕೋಟೆ ಮತ್ತು ಅತ್ತಿಬೆಲೆಗೆ ಸಹ ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 300 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ 14 ಮಾರ್ಗಗಳನ್ನು ಗುರುತಿಸಿದೆ. ಇವೆಲ್ಲವೂ ಅಕ್ಟೋಬರ್ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಕಳೆದ ಶುಕ್ರವಾರ ಬಿಎಂಟಿಸಿ ಕೇಂದ್ರ ಕಚೇರಿಗೆ ಬಸ್‌ ಮಾದರಿಯ ವಿನ್ಯಾಸದ ಅನುಮೋದನೆಗಾಗಿ ತರಲಾಗಿತ್ತು. ಅಧಿಕಾರಿಗಳು ವಿನ್ಯಾಸಕ್ಕೆ ಅನುಮೋದನೆ ನೀಡಿರುವುದರಿಂದ ಮುಂದಿನ ತಿಂಗಳು ನೂರಾರು ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. 40 ಆಸನಗಳು, ಎರಡು ಬಾಗಿಲುಗಳ ಬಸ್‌ಗೆ ಅದರ ನಾಲ್ಕು ಬದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಅಕ್ಟೋಬರ್ ವೇಳೆಗೆ ನಗರದಲ್ಲಿ ಈ ರೀತಿಯ ಸುಮಾರು 300 ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರು ಬಿಎಂಟಿಸಿ ಡಿಪೋಗಳು ಮತ್ತು ನಾಲ್ಕು ನಿಲ್ದಾಣಗಳಲ್ಲಿ ಜಾಗವನ್ನು ಗುರುತಿಸಿರುವ ಕಂಪನಿಯು ಬ್ಯಾಟರಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುತ್ತಿದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಯೇ ನಿರ್ವಹಿಸಲಿದ್ದು, ಪ್ರತಿ ಕಿ.ಮೀ ದರವನ್ನು ಬಿಎಂಟಿಸಿ ನಿಗದಿಪಡಿಸಿ ಭರಿಸಲಿದೆ. ಪರಿಸರ ಸ್ನೇಹಿ ಹಾಗೂ ಅಂಗವಿಕಲರಿಗೆ ಅನುಕೂಲವಾಗುವಂತೆ ಬಸ್ ರೂಪಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಸೆಪ್ಟೆಂಬರ್ 2019 ರಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಯಿತು.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಈ ಪ್ರಕ್ರಿಯೆಯು ವಿಳಂಬವಾದ ಕಾರಣ, ಫೇಮ್ ಇಂಡಿಯಾ ಯೋಜನೆಯಡಿಯಲ್ಲಿ ಮೆಟ್ರೋ ಫೀಡರ್ ಸೇವೆಗಾಗಿ 90 ಎಲೆಕ್ಟ್ರಿಕ್ ಮಿನಿ ಬಸ್‌ಗಳನ್ನು ಖರೀದಿಸಲು ಫೆಬ್ರವರಿ 2020 ರಲ್ಲಿ ಟೆಂಡರ್ ಅನ್ನು ಆಹ್ವಾನಿಸಲಾಯಿತು. ನಗರದಲ್ಲಿ ಸಂಚರಿಸುವ 90 ಬಸ್‌ಗಳನ್ನು ಈಗಾಗಲೇ ಜೆಬಿಎಂ ಕಂಪನಿ ಗುತ್ತಿಗೆ ಪಡೆದು ಪೂರೈಸಿದೆ. ಇದೀಗ ಬಿಎಂಟಿಸಿಗೆ 300 ಬಸ್‌ಗಳು ಸೇರ್ಪಡೆಯಾದರೆ, ನಿಗಮವು ಒಟ್ಟು 390 ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿರುತ್ತದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಕಂಪನಿಗಳೇ ಈ ಬಸ್‌ಗಳಿಗೆ ಚಾಲಕರನ್ನು ನೀಡುವುದರಿಂದ ಎಷ್ಟೋ ಜನರ ಉದ್ಯೋಗ ಖಾಸಗಿಯವರ ಪಾಲಾಗುತ್ತದೆ ಎಂಬುದು ನೌಕರರ ಆಕ್ಷೇಪ. ಗ್ರ್ಯಾಂಡ್ ಚಾಲೆಂಜ್ ಯೋಜನೆಯಡಿ, ಇ-ಸಂಸ್ಕೃತಿಯ ಪರಿಕಲ್ಪನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ದೇಶದ 9 ಪ್ರಮುಖ ನಗರಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ನಿರ್ಧರಿಸಿದೆ. ಈ ಯೋಜನೆಯಡಿ 1,500 ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಪ್ರಸ್ತಾವನೆ ಈಗ ರಾಜ್ಯ ಸರ್ಕಾರದ ಮುಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಈ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ

226N ಕೆಂಪೇಗೌಡ ಬಸ್ ನಿಲ್ದಾಣ (KBS)-ಬಿಡದಿ, 226M KR ಮಾರುಕಟ್ಟೆ-ಬಿಡದಿ, 290E ಶಿವಾಜಿನಗರ-ಯಲಹಂಕ, 328H ಅತ್ತಿಬೆಲೆ-ಹೊಸಕೋಟೆ, 276 KBS-ವಿದ್ಯಾರಣ್ಯಪುರ, KBS3A KBS-ಅತ್ತಿಬೇಲೆ, KBS3A KBS-ಅತ್ತಿಬೇಲೆ, KBS360K40KE, 402B/402D KBS-ಯಲಹಂಕ ಸ್ಯಾಟಲೈಟ್ ಟೌನ್, 401M ಯಶವಂತಪುರ-ಕೆಂಗೇರಿ, , 500DH ಅತ್ತಿಬೆಲೆ-ಹೆಬ್ಬಾಳ, 501C ಹೆಬ್ಬಾಳ-ಕೆಂಗೇರಿ, ಮತ್ತು 600F ಬನಶಂಕರಿ- ಅತ್ತಿಬೇಲೆ, 500D ಹೆಬ್ಬಾಳ-ಸೆಂಟ್ರಲ್ ಸಿಲ್ಕ್ ಬೋರ್ಡ್.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಒಟ್ಟು 225 ಕಿಲೋ ಮೀಟರ್ ಮೈಲೇಜ್

ಇಲ್ಲಿಯವರೆಗೆ ಎಲೆಕ್ಟ್ರಿಕ್ ಬಸ್​ಗಳ ತಯಾರಕರಿಂದ 12 ಬಸ್‌ಗಳನ್ನು ಪಡೆಯಲಾಗಿದೆ. ಆಗಸ್ಟ್ ಮೊದಲ ವಾರದ ವೇಳೆಗೆ 100 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಅಕ್ಟೋಬರ್ ವೇಳೆಗೆ ಎಲ್ಲಾ 300 ಬಸ್‌ಗಳು ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಚಾಲಕ ಸೇರಿದಂತೆ 41 ಆಸನಗಳ ಬಸ್‌ಗಳು ಒಮ್ಮೆ ಚಾರ್ಜ್‌ ಮಾಡಿದರೆ 150 ಕಿ.ಮೀ ಸಂಚರಿಸುತ್ತವೆ. ಹೀಗಾಗಿ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್​ಗಳ ಸಂಚಾರ ಹೆಚ್ಚಾಗಲಿವೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ದೂರದ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಓಡಿಸಲು ಯೋಜಿಸಲಾಗಿದೆ. 45 ನಿಮಿಷ ಚಾರ್ಜ್ ಮಾಡಿದ ನಂತರ ಮತ್ತೊಮ್ಮೆ ಅವಕಾಶ ಸಿಕ್ಕಾಗ ಚಾರ್ಜ್ ಹಾಕಿದರೂ ಮತ್ತೆ 75 ಕಿ.ಮೀ ಬಸ್ ಸಂಚರಿಸಬಹುದು. ಇದರರ್ಥ ಪ್ರತಿ ಬಸ್ಸು 225 ಕಿ.ಮೀ ಕ್ರಮಿಸಬಲ್ಲದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್​ಗಳು ಸಂಚರಿಸಲಿದ್ದು ಓಡಾಟಕ್ಕೆ ಅನುಕೂಲವಾಗಲಿದೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಈ ಎಲೆಕ್ಟ್ರಿಕ್ ಬಸ್‌ಗಳು ಯಲಹಂಕ, ಬಿಡದಿ ಮತ್ತು ಅತ್ತಿಬೆಲೆ, ಈ ಮೂರು ಡಿಪೋಗಳಿಂದ ಪೆರಿಫೆರಲ್ ರಸ್ತೆಗಳ ಮೂಲಕ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಈ ಇ-ಬಸ್‌ಗಳನ್ನು ಮೊದಲು ಯಲಹಂಕ ಡಿಪೋದಿಂದ ಓಡಿಸಲು ಯೋಜಿಸುತ್ತಿದ್ದೇವೆ. ಇ-ಬಸ್‌ಗಳು ವೀಲ್‌ಚೇರ್ ಲಿಫ್ಟಿಂಗ್‌ನಂತಹ ಸೌಲಭ್ಯಗಳೊಂದಿಗೆ ವಿಶೇಷಚೇತನರ ಸ್ನೇಹಿಯಾಗಿರಲಿವೆ " ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್‌ ವೇಳೆಗೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸಲಿವೆ 300 ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬೆಂಗಳೂರಿನಲ್ಲಿ ಇಂಧನ ಚಾಲಿತ ವಾಹನಗಳಿಂದ ಈಗಾಗಲೇ ಕಾರ್ಬನ್ ಪ್ರಮಾಣ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಸರ್ಕಾರ ಶ್ರಮಿಸುತ್ತಿದೆ. ಇತ್ತೀಚೆಗೆ ಸರ್ವೇಯೊಂದರ ಪ್ರಕಾರ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಬಳಕೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಬೆಂಗಳೂರು ನಗರ ಅತಿ ವೇಗವಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದೀಗ ಸರ್ಕಾರ ಕೂಡ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುತ್ತಿರುವುದು ಉತ್ತಮ ಬೆಳವಣಿಗೆಯೆಂದೇ ಹೇಳಬಹದು.

Most Read Articles

Kannada
English summary
By October 300 electric BMTC buses will ply on these routes in Bangalore
Story first published: Thursday, July 14, 2022, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X