India
YouTube

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವಾರು ಕಠಿಣ ಕ್ರಮಗಳೊಂದಿಗೆ ಪರಿಸರ ಸ್ನೇಹಿ ವಾಹನಗಳ ಅಳವಡಿಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ನೀತಿಯು ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಗ್ರಾಹಕರಿಗೆ ನೆರವಾಗುವಂತೆ ಇವಿ ಪಾಲಿಸಿ ಅಳವಡಿಸಿಕೊಂಡ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಜೊತೆಗೆ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದ್ದು, ಹೊಸ ಇವಿ ನೀತಿಯು ಜಾರಿಯಾದ 2 ವರ್ಷಗಳಲ್ಲಿ ಇವಿ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಹೊಸ ಇವಿ ಪಾಲಿಸಿ ಜಾರಿ ನಂತರ ಹೊಸ ಸಬ್ಸಡಿ ಯೋಜನೆ ಅಡಿ ಇದುವರೆಗೆ ಸುಮಾರು 59,949 ಇವಿ ವಾಹನಗಳು ನೋಂದಣಿಯಾಗಿದ್ದು, ದೆಹಲಿಯಲ್ಲಿ ಒಟ್ಟು ಹೊಸ ವಾಹನಗಳ ನೋಂದಣಿಯಲ್ಲಿನ ಪ್ರಮಾಣವು ಶೇ.18.60ಕ್ಕೆ ಏರಿಕೆಯಾಗಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಆಗಸ್ಟ್ 2020ರಲ್ಲಿ ಮೊದಲ ಬಾರಿಗೆ ಜಾರಿಗೆ ಮಾಡಲಾಗಿದ್ದ ಇವಿ ಪಾಲಿಸಿಯು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿದ್ದು, ಪ್ರತಿದಿನ ಸರಾಸರಿ 144 ಹೊಸ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗುತ್ತಿವೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಇವಿ ನೀತಿ ಜಾರಿಗೊಳಿಸಿ ಎರಡು ವರ್ಷಗಳನ್ನು ಪೂರ್ಣಗೊಳಿಸುವ ಸಲುವಾಗಿ ದೆಹಲಿ ಸರ್ಕಾರವು ಮುಂದಿನ ತಿಂಗಳು ಆಗಸ್ಟ್ 10ರಂದು 4ನೇ ದೆಹಲಿ ಇವಿ ಫೋರಂ ಅನ್ನು ಸಹ ಆಯೋಜಿಸುತ್ತಿದ್ದು, ಈ ವೇದಿಕೆಯನ್ನು ಸಂವಾದ ಮತ್ತು ಅಭಿವೃದ್ಧಿ ಆಯೋಗ (ಡಿಡಿಸಿ) ಆಯೋಜಿಸುತ್ತದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಕಾರ್ಯಕ್ರಮದಲ್ಲಿ ದೆಹಲಿ ಸರ್ಕಾರವು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಮತ್ತಷ್ಟು ಹೊಸ ನೀತಿಯನ್ನು ಪ್ರಕಟಿಸಬಹುದಾಗಿ ಎನ್ನಲಾಗಿದ್ದು, ಇವಿ ವಾಹನಗಳ ಖರೀದಿಗಿಂತಲೂ ಈ ಬಾರಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದ ಮೇಲೆ ಹೆಚ್ಚಿನ ಸಬ್ಸಡಿ ಜೊತೆಗೆ ಹಲವಾರು ವಿನಾಯ್ತಿಗಳನ್ನು ನೀಡಲು ಮುಂದಾಗಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್‌ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ರಾಜ್ಯಗಳ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದಲ್ಲಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಇವಿ ವಾಹನಗಳ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಳ ಮಾಡಲಾಗುತ್ತಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಈ ಮೊದಲು ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಇವಿ ವಾಹನ ಬಳಕೆಯು ಇದೀಗ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಕೂಡಾ ಹೆಚ್ಚುತ್ತಿದ್ದು, ಇವಿ ವಾಹನಗಳಿಗೆ ಪೂರಕವಾಗಿ ರಾಜ್ಯ ಸರ್ಕಾರವು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ನಿಲ್ದಾಣಗಳ ಆರಂಭಿಸುತ್ತಿದೆ.

ಇವಿ ಪಾಲಿಸಿ ಜಾರಿ ನಂತರ ದೆಹಲಿಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭಾರೀ ಬೆಳವಣಿಗೆ

ಇವಿ ವಾಹನಗಳ ನೋಂದಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ತ್ರಿ-ಚಕ್ರ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 10 ಲಕ್ಷ ಇವಿ ವಾಹನಗಳು ನೋಂದಣಿಯಾಗಿವೆ.

Most Read Articles

Kannada
English summary
Ev policy completes two years in delhi ev sales growth details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X