ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದ್ದು, ದೆಹಲಿ ನಂತರ ಹಲವು ರಾಜ್ಯಗಳು ಇವಿ ವಾಹನಗಳಿಗೆ ಹೆಚ್ಚಿನ ಸಬ್ಸಡಿ ಘೋಷಣೆ ಮಾಡುತ್ತಿವೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಇತ್ತೀಚೆಗೆ ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ಹೊಸ ಇವಿ ಪಾಲಿಸಿ ಘೋಷಣೆ ಮಾಡಿದ ನಂತರ ಇದೀಗ ಹರಿಯಾಣ ಸರ್ಕಾರವು ಸರ್ಕಾರವು ಇವಿ ಪಾಲಿಸಿಗೆ ಅನುಮೋದನೆ ನೀಡಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಇವಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ತಯಾರಕರಿಗೆ ಹಲವಾರು ಆರ್ಥಿಕ ಪ್ರೋತ್ಸಾಹಗಳನ್ನು ನೀಡಲು ತೀರ್ಮಾನಿಸಲಾಗಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಎಲೆಕ್ಟ್ರಿಕ್ ಕಾರಿನ ಮೇಲೆ ರೂ. 10 ಲಕ್ಷದವರೆಗೆ ರಿಯಾಯಿತಿ

ಹೊಸ ಇವಿ ನೀತಿ ಅಡಿಯಲ್ಲಿ ಹರಿಯಾಣ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು ಅಥವಾ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ರೂ. 10 ಲಕ್ಷದವರೆಗೆ ಸಬ್ಸಿಡಿ ಘೋಷಣೆ ಮಾಡಿದ್ದು, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಮತ್ತು ಮೋಟಾರ್ ವಾಹನ ತೆರಿಗೆಯಲ್ಲಿ ಸಹ ವಿನಾಯ್ತಿ ಪಡೆಯಲಿದ್ದಾರೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ರಾಜ್ಯದಲ್ಲಿ ಇವಿ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಹರಿಯಾಣ ಸರ್ಕಾರವು ಹೊಸ ಚಾರ್ಜಿಂಗ್ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಯೋಜನಾ ವೆಚ್ಚದ 50 ಪ್ರತಿಶತವನ್ನು (ರೂ. 1 ಕೋಟಿವರೆಗೆ) ನೀಡುತ್ತಿದೆ. ಇದರೊಂದಿಗೆ ಆರ್ & ಡಿ ಕೇಂದ್ರಗಳಲ್ಲಿ ಹೊಸ ಇವಿಗಳನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂಪಾಯಿಗಳವರೆಗೆ ನೆರವು ನೀಡುವುದಾಗಿ ಹೇಳಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಹೊಸ ಸಬ್ಸಡಿ ಯೋಜನೆ ಅಡಿ ಪಳೆಯುಳಿಕೆ ಅಲ್ಲದ ಇಂಧನ ಆಧಾರಿತ ಚಲನಶೀಲತೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳಿಗೆ ಹರಿಯಾಣ ಸರ್ಕಾರವು ರೂ. 5 ಕೋಟಿ ಅನುದಾನ ಘೋಷಣೆ ಮಾಡಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಇ-ವಾಹನ ತಯಾರಕ ಕಂಪನಿಗಳಿಗೆ ಪ್ರೋತ್ಸಾಹ

ಹರಿಯಾಣ ಸರ್ಕಾರವು ಇವಿ ಪಾಲಿಸಿಯಡಿಯಲ್ಲಿ ಇವಿ ತಯಾರಕ ಕಂಪನಿಗಳಿಗೆ ಫಿಕ್ಸೆಡ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ (FCI), SGST, ಸ್ಟ್ಯಾಂಪ್ ಡ್ಯೂಟಿ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಮೇಲೆ ಪ್ರೋತ್ಸಾಹವನ್ನು ನೀಡುವ ಮೂಲಕ ವಿವಿಧ ಹಣಕಾಸಿನ ಪ್ರೋತ್ಸಾಹವನ್ನು ನೀಡುತ್ತದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಹಾಗೆಯೇ ಇವಿ ನೀತಿಯ ಅಡಿಯಲ್ಲಿ 20 ವರ್ಷಗಳ ಅವಧಿಗೆ ವಿದ್ಯುತ್ ಸುಂಕದ ವಿನಾಯಿತಿಯೊಂದಿಗೆ ಸ್ಟ್ಯಾಂಪ್ ಡ್ಯೂಟಿಯ ಪ್ರತಿಶತ 100 ರಷ್ಟು ಮರುಪಾವತಿಯ ಮಾಡುವುದಾಗಿ ಘೋಷಣೆ ಮಾಡಿದ್ದು, SGST ಮರುಪಾವತಿ 10 ವರ್ಷಗಳ ಅವಧಿಗೆ ಶೇ. 50 ವರೆಗೆ ಇರಲಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಇದಲ್ಲದೇ ಹರಿಯಾಣ ಸರ್ಕಾರವು ತನ್ನ ರಾಜ್ಯದಲ್ಲಿ ಉತ್ಪಾದನೆಗೊಳ್ಳುವ ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು, ಇವಿ ಬ್ಯಾಟರಿಗಳು, ಚಾರ್ಜಿಂಗ್ ಮೂಲಸೌಕರ್ಯ ಇತ್ಯಾದಿಗಳನ್ನು ತಯಾರಿಸುವ ಕಂಪನಿಗಳಿಗೆ ಸಬ್ಸಿಡಿಯೊಂದಿಗೆ ವಿವಿಧ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಇ-ವಾಹನ ತಯಾರಕ ಕಂಪನಿಗಳಿಗೆ ಎಷ್ಟು ಸಬ್ಸಿಡಿ?

ಬೃಹತ್ ಉದ್ಯಮ ವ್ಯವಹಾರದಲ್ಲಿನ ಫಿಕ್ಸೆಡ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ನ (ಎಫ್‌ಸಿಐ) ಶೇಕಡಾ 20 ರಷ್ಟು ಅಥವಾ 20 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಪಡೆಯಲಿದ್ದು, ಬಂಡವಾಳ ಹೂಡಿಕೆಯ ಮೇಲೆ ಬೃಹತ್ ಕೈಗಾರಿಕೆಗಳಿಗೆ ರೂ.10 ಕೋಟಿ ಅಥವಾ ಶೇ.10ರಷ್ಟು ಸಬ್ಸಿಡಿ ನೀಡಲಾಗುವುದು.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಅದೇ ಸಮಯದಲ್ಲಿ ಮಧ್ಯಮ ಗಾತ್ರದ ಉದ್ಯಮಕ್ಕೆ FCI ಯ ಪ್ರತಿಶತ 20 ರಷ್ಟು ಅಥವಾ ರೂ. 50 ಲಕ್ಷದವರೆಗೆ ಸಹಾಯಧನವನ್ನು ನೀಡಲಿದ್ದು, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಶೇ. 20 ಅಥವಾ ರೂ.40 ಲಕ್ಷದವರೆಗೆ ಮತ್ತು ಸೂಕ್ಷ್ಮ ಉದ್ಯಮ ವಿಭಾಗಗಳಿಗೆ ಶೇ. 25ರಷ್ಟು ಸಬ್ಸಿಡಿ ದೊರೆಯಲಿದೆ.

ಹೊಸ ಇವಿ ಪಾಲಿಸಿ: ಎಲೆಕ್ಟ್ರಿಕ್ ಕಾರು ಖರೀದಿಗೆ ಭರ್ಜರಿ ಸಬ್ಸಡಿ ಘೋಷಿಸಿದ ಹರಿಯಾಣ ಸರ್ಕಾರ

ಹೊಸ ಇವಿ ನೀತಿಯ ಅಡಿಯಲ್ಲಿ ಬ್ಯಾಟರಿ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಘಟಕಗಳಿಗೆ 1 ಕೋಟಿ ರೂಪಾಯಿಗಳ ಹೂಡಿಕೆ ಮೇಲೆ ಶೇಕಡಾ 15 ರಷ್ಟು ಸಹಾಯಧನವನ್ನು ನೀಡಲಿದ್ದು, ಹೊಸ ಉದ್ಯಮಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

Most Read Articles

Kannada
English summary
Haryana electric vehicle ev policy 2022 full details
Story first published: Friday, July 8, 2022, 21:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X