ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಗೆ ಮೇಲೆ ದೀಪಾವಳಿ ವಿಶೇಷವಾಗಿ ಬಂಪರ್ ಆಫರ್ ನೀಡುತ್ತಿದ್ದು, ಹಣಕಾಸು ಸಂಬಂಧಿತ ವಿಚಾರಗಳಿಗೆ ಸದ್ಯ ಕಾರು ಖರೀದಿ ಸಾಧ್ಯವಿಲ್ಲದ ಗ್ರಾಹಕರಿಗೆ ಕಂಪನಿಯ ಹೊಸ ಆಫರ್ ಸಾಕಷ್ಟು ಅನುಕೂಲಕವಾಗಲಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಭಾರತದಲ್ಲಿ ವಿವಿಧ ಕಾರು ಮಾದರಿಗಳೊಂದಿಗೆ ಮುಂಚೂಣಿಯಲ್ಲಿದ್ದ ಹೋಂಡಾ ಕಾರ್ಸ್ ಕಂಪನಿಯು ಇತ್ತೀಚೆಗೆ ಬೇಡಿಕೆಯಲ್ಲಿ ತುಸು ಹಿನ್ನಡೆ ಅನುಭವಿಸುತ್ತಿದ್ದು, ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಗ್ರಾಹಕರಿಗೆ ಹಲವಾರು ಹಣಕಾಸು ಸೌಲಭ್ಯಗಳನ್ನು ನೀಡುತ್ತಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹಣಕಾಸು ಸೌಲಭ್ಯಗಳಿಂದಾಗಿ ಸದ್ಯ ಕಾರು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಗ್ರಾಹಕರು ಕಾರು ಯೋಜನೆಯನ್ನು ಮುಂದೂಡದೆ ಈಗಲೇ ಖರೀದಿಸುವಂತೆ ಉತ್ತೇಜಿಸುವುದೇ ಹೊಸ ಆಫರ್ ಉದ್ದೇಶವಾಗಿದ್ದು, ಹೊಸ ಆಫರ್‌ನಲ್ಲಿ ಗ್ರಾಹಕರು ಇದೀಗ ಕಾರು ಖರೀದಿಸಿ 2023ರಿಂದ ಹಣ ಪಾವತಿ ಆರಂಭಿಸಬಹುದಾಗಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೊಸ ಹಣಕಾಸು ಆಫರ್ ಯೋಜನೆ ಅಡಿಯಲ್ಲಿ ಗ್ರಾಹಕರು ಹೋಂಡಾ ಸಿಟಿ ಮತ್ತು ಅಮೇಜ್ ಕಾರುಗಳ ಖರೀದಿಗಾಗಿ ಕನಿಷ್ಠ ಶೇ. 15 ರಷ್ಟು ಡೌನ್ ಪೇಮೆಂಟ್ ಮೂಲಕ ಕಾರು ಖರೀದಿಸಬಹುದಾಗಿದ್ದು, 2023ರಿಂದ ಹೊಸ ಕಾರುಗಳ ಇಎಂಐ ಮರುಪಾವತಿ ಆರಂಭವಾಗುತ್ತದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಕೊಟಕ್ ಮಹೀಂದ್ರಾ ಬ್ಯಾಂಕ್ ಜೊತೆಗೂಡಿ ಹೋಂಡಾ ಕಂಪನಿಯು ಸಿಟಿ ಸೆಡಾನ್ ಮತ್ತು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಗಳ ಖರೀದಿಗಾಗಿ 'ಡ್ರೈವ್ ಇನ್ 2022, ಪೇ ಇನ್ 2023' ಅಭಿಯಾನ ಆರಂಭಿಸಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೊಸ ಕಾರು ಖರೀದಿದಾರರಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಶೇ.85 ರಷ್ಟು ಆನ್‌ರೋಡ್ ದರದ ಮೇಲೆ ಹಣಕಾಸು ನೆರವು ನೀಡಲಿದ್ದು, ಇನ್ನುಳಿದ ಶೇ. 15 ರಷ್ಟು ಡೌನ್ ಪೇಮೆಂಟ್ ಪಾವತಿಯೊಂದಿಗೆ ಹೊಸ ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಅಕ್ಟೋಬರ್ 31ರ ತನಕ ಹೊಸ ಸಿಟಿ ಮತ್ತು ಅಮೇಜ್ ಕಾರು ಖರೀದಿಸುವ ಗ್ರಾಹಕರಿಗೆ ಈ ಹೊಸ ಆಫರ್ ಅನ್ವಯವಾಗಲಿದ್ದು, ಇದೀಗ ಹೊಸ ಕಾರು ಖರೀದಿಸಿದರೆ 2022ರ ಜನವರಿಯಿಂದ ಇಎಂಐ ಆಯ್ಕೆಗಳು ಈ ಹಿಂದಿನ ಮೂರು ತಿಂಗಳ ಇಎಂಐ ದರಗಳೊಂದಿಗೆ ಒಟ್ಟುಗೂಡಿ ಪಾವತಿ ಮಾಡಬೇಕಾಗುತ್ತದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೊಸ ಹಣಕಾಸು ಸೌಲಭ್ಯದ ಮುಖ್ಯ ಉದ್ದೇಶವೆಂದರೆ ಹಣಕಾಸು ವಿಚಾರವಾಗಿ ಕಾರು ಖರೀದಿಯನ್ನು ಸದ್ಯ ಮುಂದೂಡಿಕೆ ಮಾಡಿರುವ ಗ್ರಾಹಕರಿಗೆ ಇದು ಸಹಕಾರಿಯಾಗಲಿದ್ದು, ಇನ್ನುಳಿದ ಮಾದರಿಗಳ ಮೇಲೂ ಗ್ರಾಹಕರಿಗೆ ಹೋಂಡಾ ಕಂಪನಿಯು ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶಾದ್ಯಂತ ಹರಡಿಕೊಂಡಿರುವ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ನವೀಕರಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆಗೆ ಮಾಡುತ್ತಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ಅದರ ಡೀಲರ್ ಪಾಲುದಾರರೊಂದಿಗೆ ಸಹಯೋಗದಲ್ಲಿ ಸುಮಾರು ರೂ. 260 ಕೋಟಿ ಹೂಡಿಕೆ ಮಾಡಲು ಮುಂದಾಗಿರುವ ಹೋಂಡಾ ಕಂಪನಿಯು ಹೊಸ ಡೀಲರ್‌ಶಿಪ್‌ಗಳೊಂದಿಗೆ ಗ್ರಾಹಕರಿಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುವ ಯೋಜನೆಯಲ್ಲಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೊಸ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೂ ಮುನ್ನ ಕಂಪನಿಯು ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ನಿರ್ಧರಿಸಿದ್ದು, ಪ್ರೀಮಿಯಂ ಕಾರು ಮಾದರಿಗಳೊಂದಿಗೆ ಕಾರು ಮಾರಾಟ ಸೌಲಭ್ಯವನ್ನು ಸಹ ನವೀಕರಿಸುತ್ತಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಭಾರತದಲ್ಲಿ 1995ರಿಂದ ಹೋಂಡಾ ಕಂಪನಿಯು 27 ವರ್ಷಗಳ ಕಾರ್ಯಾಚರಣೆಯ ಅನುಭವ ಹೊಂದಿದ್ದು, ಹೋಂಡಾ ಮಾರಾಟ ಮಾಡಿದ ಕಾರುಗಳು ಸಮಯೋಚಿತ ನವೀಕರಣಗಳು ಮತ್ತು ಪೀಳಿಗೆಯ ಬದಲಾವಣೆಗಳನ್ನು ಪಡೆದಿದ್ದರೂ ಸಹ ಹೋಂಡಾದ ಡೀಲರ್‌ಶಿಪ್‌ಗಳು ಹೆಚ್ಚು ಕಡಿಮೆ ಹಾಗೆಯೇ ಉಳಿದಿವೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೋಂಡಾದ ಡೀಲರ್‌ಶಿಪ್‌ಗಳು ಕ್ರಿಯಾತ್ಮಕ ಮತ್ತು ಪ್ರಾಯೋಗಿಕವಾಗಿದ್ದು, ಈ ಡೀಲರ್‌ಶಿಪ್‌ಗಳು ಹಿಂದಿನ ದಿನದಲ್ಲಿ ಬಹಳ ಪ್ರೀಮಿಯಂ ಆಗಿ ಕಾಣುತ್ತಿದ್ದವು. ಆದಾಗ್ಯೂ ಇತ್ತೀಚೆಗೆ ಆಗುತ್ತಿರುವ ಆಟೋ ಉದ್ಯಮದಲ್ಲಿನ ಬದಲಾವಣೆಗಳು ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಕಂಪನಿಯು ಇದೇ ಕಾರಣಕ್ಕೆ ಗ್ರಾಹಕರಿಗೆ ಹೊಸ ಖರೀದಿ ಅನುಭವ ನೀಡಲು ಮುಂದಾಗಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೋಂಡಾ ಕಾರ್ಸ್ ಇಂಡಿಯಾ ಈಗ ಭಾರತದಾದ್ಯಂತ ತನ್ನ ಡೀಲರ್‌ಶಿಪ್‌ಗಳನ್ನು ನವೀಕರಿಸಲು ನಿರ್ಧರಿಸಿದ್ದು, ಈ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ಮತ್ತೊಂದು ಕಾರಣವೆಂದರೆ 2023 ರಲ್ಲಿ ಹೋಂಡಾದಿಂದ ಹಲವು ಹೊಸ ಎಸ್‌ಯುವಿ ಕಾರುಗಳು ಆಗಮನವಾಗಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೀಗಾಗಿ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡುವ ಯೋಜನೆಯನ್ನು ತ್ವರಿತಗೊಳಿಸುತ್ತಿದ್ದು, ಕೋವಿಡ್ ಕಾರಣಕ್ಕೆ ಶೋರೂಂಗಳ ನವೀಕರಣ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಸದ್ಯ ಹೊಸ ಕಾರುಗಳ ಮಾರಾಟವು ಹೆಚ್ಚುತ್ತಿರುವುದರಿಂದ ಶೋರೂಂ ನವೀಕರಣ ಯೋಜನೆಗೆ ಚಾಲನೆ ನೀಡುತ್ತಿದೆ.

ಹೋಂಡಾ ಕಾರು ಖರೀದಿದಾರರಿಗೆ ಬಂಪರ್ ಆಫರ್: ಈಗಲೇ ಖರೀದಿಸಿ.. ನಂತರ ಪಾವತಿಸಿ..

ಹೋಂಡಾದ ಡೀಲರ್‌ಶಿಪ್‌ಗಳನ್ನು ಮೇಲ್ದರ್ಜೆಗೇರಿಸಲು ಕಂಪನಿಯು ಒಟ್ಟು ರೂ. 260 ಕೋಟಿ ಹೂಡಿಕೆ ಮಾಡಬೇಕಿದ್ದು, ಇದು ಹೋಂಡಾದ ಡೀಲರ್ ಪಾಲುದಾರರ ಸಹಯೋಗದಲ್ಲಿರುತ್ತದೆ. ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿನ ಹೋಂಡಾ ಕಂಪನಿಯು ಸುಮಾರು 350 ಡೀಲರ್‌ಶಿಪ್‌ಗಳನ್ನು ಹೊಂದಿದ್ದು, ಈಗಾಗಲೇ ಹಳೆಯ ಶೋರೂಂಗಳ ನವೀಕರಣಕ್ಕಾಗಿ ಸುಮಾರು ರೂ. 100 ಕೋಟಿ ಹೂಡಿಕೆ ಮಾಡಲಾಗಿದೆ.

Most Read Articles

Kannada
Read more on ಹೋಂಡಾ honda
English summary
Honda new finance scheme drive now pay in 2023 for honda city amaze buyers
Story first published: Tuesday, October 4, 2022, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X