ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಹ್ಯುಂಡೈ ಇಂಡಿಯಾ ಕಂಪನಿಯು ಹೊಸ ವರ್ಷದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿರುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಜನವರಿ 1ರಿಂದಲೇ ಹೊಸ ಕಾರುಗಳ ದರ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಇದೀಗ ತನ್ನ ಪ್ರಮುಖ ಕಾರು ಮಾದರಿಯ ಬೆಲೆ ಹೆಚ್ಚಿಸಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.0.50 ರಿಂದ ಶೇ. 1.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಜನವರಿ 1ರಿಂದ ಬೆಲೆ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ಹ್ಯುಂಡೈ ಕಂಪನಿಯು ಕೊನಾ ಎಲೆಕ್ಟ್ರಿಕ್, ಟ್ಯುಸಾನ್ ಮತ್ತು ಎಲಾಂಟ್ರಾ ಕಾರು ಮಾದರಿಗಳನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಹೊಸ ದರ ಪಟ್ಟಿ ಪ್ರಕಾರ ಅಲ್ಕಾಜರ್ ಎಸ್‌ಯುವಿ ಮಾದರಿಯು ಹೆಚ್ಚಿನ ಮಟ್ಟದ ದರ ಏರಿಕೆ ಪಡೆದುಕೊಂಡರೆ ವೆರ್ನಾ ಸೆಡಾನ್ ಮಾದರಿಯಲ್ಲಿ ಅಲ್ಪ ಪ್ರಮಾಣದ ದರ ಏರಿಕೆ ಮಾಡಲಾಗಿದೆ. ಅಲ್ಕಾಜರ್ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 22 ಸಾವಿರದಷ್ಟು ದುಬಾರಿಯಾಗಿದ್ದು, ಸ್ಯಾಂಟ್ರೊ ಕಾರಿನ ಬೆಲೆಯಲ್ಲಿ ರೂ.10 ಸಾವಿರದಿಂದ ರೂ.17,400 ತನಕ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಗ್ರಾಂಡ್ ಐ10 ನಿಯೋಸ್ ಮತ್ತು ಔರಾ ಕಾರು ಮಾದರಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 6 ಸಾವಿರದಿಂದ ರೂ. 7,300 ತನಕ ಮತ್ತು ಹ್ಯುಂಡೈ ಜನಪ್ರಿಯ ಕಾರು ಮಾದರಿಯಾದ ಕ್ರೆಟಾ ಕಾರು ಮಾದರಿಯು ಗರಿಷ್ಠ ರೂ.7 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಹಾಗೆಯೇ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ವೆರ್ನಾ ಕಾರು ಸೆಡಾನ್ ಕಾರು ಮಾದರಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 4 ಸಾವಿರದಿಂದ ರೂ.4,100 ಬೆಲೆ ಹೆಚ್ಚಳ ಪಡೆದುಕೊಂಡಿವೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಇನ್ನು ಹ್ಯುಂಡೈ ಕಂಪನಿಯು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನಡುವೆಯೂ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಕಾರು ಮಾರಾಟ ಪಾಲು ಹೊಂದಿರುವ ದೇಶದ 2ನೇ ಅತಿದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಸ್ಯಾಂಟ್ರೊ ಕಾರು ಮಾದರಿಯ ಉತ್ಪಾದನೆಯೊಂದಿಗೆ ವಿವಿಧ ಕಾರು ಮಾದರಿಗಳ ಮಾರಾಟದ ಮೂಲಕ ಸದ್ಯ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಇದುವರೆಗೆ ಹ್ಯುಂಡೈ ಕಂಪನಿಯು ಸುಮಾರು 12 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಕಾರು ಮಾರಾಟ ಆರಂಭಿಸಿದ ಆರಂಭದಲ್ಲಿ ವಾರ್ಷಿಕವಾಗಿ 8 ಸಾವಿರ ಕಾರುಗಳ ಮಾರಾಟ ಹೊಂದಿದ್ದ ಕಂಪನಿಯು ಕಳೆದ ಕೆಲ ವರ್ಷಗಳಿಂದ ವಾರ್ಷಿಕವಾಗಿ 2 ಲಕ್ಷದಿಂದ 3 ಲಕ್ಷ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಎಸ್‌ಯುವಿ ಕಾರುಗಳ ಬೇಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹತ್ತು ಕಾರು ಆವೃತ್ತಿಗಳ ಮಾರಾಟ ಮಾಡುತ್ತಿರುವ ಹ್ಯುಂಡೈ ಕಂಪನಿಯು ಶೇ. 18ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಹ್ಯುಂಡೈ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಹ್ಯುಂಡೈ ಎಸ್‌ಯುವಿ ವಿಭಾಗದಲ್ಲಿ ಟ್ಯುಸಾನ್, ಕ್ರೆಟಾ, ಕೊನಾ ಎಲೆಕ್ಟ್ರಿಕ್, ವೆನ್ಯೂ ಮತ್ತು ಹೊಸ ಅಲ್ಕಾಜರ್ ಕಾರುಗಳಿದ್ದು, ಹ್ಯುಂಡೈ ಕಾರುಗಳ ಮಾರಾಟದಲ್ಲಿ ಎಸ್‌ಯುವಿ ಕಾರು ಮಾದರಿಯ ಪಾಲು ಹೆಚ್ಚಿದೆ. ಹ್ಯುಂಡೈ ಎಸ್‌ಯುವಿ ಕಾರು ವಿಭಾಗದಲ್ಲಿ ಕ್ರೆಟಾ ಕಾರು ಮಾದರಿಯೊಂದೆ ಸುಮಾರು 7 ಲಕ್ಷ ಯುನಿಟ್ ಮಾರಾಟ ದಾಖಲೆಯನ್ನು ಹೊಂದಿದ್ದು, 2021ರಲ್ಲಿ ವಿವಿಧ ಎಸ್‌ಯುವಿ ಮಾದರಿಗಳೊಂದಿಗೆ ಹ್ಯುಂಡೈ ಕಂಪನಿಯು ಸುಮಾರು 2.52 ಲಕ್ಷ ಯುನಿಟ್ ಮಾರಾಟ ಮಾಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯು ಹ್ಯುಂಡೈ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, 2021ರಲ್ಲಿ ಕ್ರೆಟಾ ಮಾದರಿಯು 1.25 ಲಕ್ಷ ಯುನಿಟ್ ಮಾರಾಟಗೊಂಡರೆ, ವೆನ್ಯೂ 1.08 ಲಕ್ಷ ಯುನಿಟ್ ಮತ್ತು ಹೊಸ ಅಲ್ಕಾಜರ್ ಕಾರು ಮಾದರಿಯು 17,700 ಯುನಿಟ್ ಮಾರಾಟಗೊಂಡಿದೆ.

ಬೆಲೆ ಹೆಚ್ಚಳ: ಹೊಸ ವರ್ಷದಲ್ಲಿ ಹ್ಯುಂಡೈ ಪ್ರಮುಖ ಕಾರುಗಳ ಬೆಲೆ ಮತ್ತಷ್ಟು ದುಬಾರಿ

ಕಳೆದ ಎರಡು ವರ್ಷಗಳಿಂದ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಹ್ಯುಂಡೈ ಕಂಪನಿಯು ಮಹೀಂದ್ರಾ ಕಂಪನಿಗೆ ತೀವ್ರ ಪೈಪೋಟಿ ನೀಡಿದೆ.

ಬಜೆಟ್ ಕಾರು ಮಾದರಿಗಳೊಂದಿಗೆ ಪ್ರೀಮಿಯಂ ಕಾರು ಮಾದರಿಗಳ ಮಾರಾಟದ ಮೇಲೂ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕಂಪನಿಯು ಭವಿಷ್ಯ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಉತ್ಪಾದನಾ ವಿಸ್ತರಣೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

Most Read Articles

Kannada
English summary
Hyundai cars price increased up to rs 22000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X