India
YouTube

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಇದೀಗ ಕಿಯಾ ಇಂಡಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿ ಬೆಲೆಯನ್ನು 34,000 ರೂ.ಗಳಷ್ಟು ಹೆಚ್ಚಿಸಿದೆ. ಈಗಾಗಲೇ ಜನವರಿಯಲ್ಲಿ ಸೊನೆಟ್ ತನ್ನ ಮೊದಲ ಹೆಚ್ಚಳವನ್ನು ಪಡೆದುಕೊಂಡಿತ್ತು, ಈ ವರ್ಷ ಕಂಪನಿಯು ಪರಿಚಯಿಸಿದ ಎರಡನೇ ಬೆಲೆ ಏರಿಕೆ ಇದಾಗಿದೆ. Kia Sonet ಈಗ HTE, HTK, HTK+, HTX, HTX+, GTX+ ಮತ್ತು ಆನಿವರ್ಸರಿ ಎಡಿಷನ್ ರೂಪಾಂತರಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ದಕ್ಷಿಣ ಕೊರಿಯಾದ ವಾಹನ ತಯಾರಕರು SUV ಯ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಸ ಸೇರ್ಪಡೆಗಳೊಂದಿಗೆ ಸೈಡ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಬ್ರೇಕ್ ಅಸಿಸ್ಟ್, ಹಿಲ್-ಅಸಿಸ್ಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಮಾಡೆಲ್ ಇಯರ್ ರಿಫ್ರೆಶ್‌ನ ಭಾಗವಾಗಿ ಸುಧಾರಿಸಿದ್ದಾರೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಮೂಲ HTE 1.2-ಲೀಟರ್ ಪೆಟ್ರೋಲ್ ರೂಪಾಂತರವು ರೂ. 34,000 ದಷ್ಟು ಬೆಲೆ ಏರಿಕೆ ಪಡೆದುಕೊಂಡರೆ, ಸಬ್-4 ಮೀಟರ್ SUV ಯ ಇತರ ರೂಪಾಂತರಗಳು ರೂ. 10,000 ಮತ್ತು ರೂ. 16,000 ರ ನಡುವೆ ಹೆಚ್ಚಳವನ್ನು ಕಾಣುತ್ತವೆ. ಕಳೆದ ಏಪ್ರಿಲ್‌ನಲ್ಲಿ, ಕಿಯಾ ಇಂಡಿಯಾ ಕೆಲವು ಮಾರ್ಪಾಡುಗಳೊಂದಿಗೆ ಏಪ್ರಿಲ್‌ನಲ್ಲಿ ಸೋನೆಟ್‌ನ MY2022 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಹೊಸ ಬ್ರ್ಯಾಂಡ್ ಲೋಗೋದೊಂದಿಗೆ ಹೊಸ ಇಂಪೀರಿಯಲ್ ಬ್ಲೂ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಸೊನೆಟ್ ಇದೀಗ ಲಭ್ಯವಿದೆ. ಅದ್ಭುತ ಯಶಸ್ಸನ್ನು ಕಂಡಿರುವ ಕಾಂಪ್ಯಾಕ್ಟ್ ಎಸ್‌ಯುವಿ ಇತ್ತೀಚೆಗೆ ದೇಶದಲ್ಲಿ 1.50 ಲಕ್ಷ ಯುನಿಟ್ ಮಾರಾಟವನ್ನು ದಾಟಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

2019 ರಲ್ಲಿ ಸೆಲ್ಟೋಸ್ ಮಧ್ಯಮ ಗಾತ್ರದ ಎಸ್‌ಯುವಿ ಮತ್ತು 2020 ರ ಆರಂಭದಲ್ಲಿ ಕಾರ್ನಿವಲ್ ಅನ್ನು ಅನುಸರಿಸಿ, ಸಬ್ -4 ಮೀಟರ್ ಎಸ್‌ಯುವಿ ಸೆಪ್ಟೆಂಬರ್ 2020 ರಲ್ಲಿ ಪಾದಾರ್ಪಣೆ ಮಾಡಿತ್ತು. ವಾಸ್ತವವಾಗಿ, ಇದು ಹ್ಯುಂಡೈದೊಂದಿಗೆ ಬಹಳಷ್ಟು ಅಂಶಗಳನ್ನು ಹಂಚಿಕೊಳ್ಳುತ್ತದೆ, ಆದರೆ ಕಂಪನಿಯು ಅದರ ಸುಳಿವನ್ನು ಸಹ ನೀಡದೆ ವಾಹನವನ್ನು ಆಯ್ಕೆ ಮಾಡಿರುವುದು ಅದರ ಯಶಸ್ಸಿನ ಪ್ರಮುಖ ಅಂಶವಾಗಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಕಂಪನಿಯು ಸೋನೆಟ್ ಅನ್ನು 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೊ ಡೀಸೆಲ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡುತ್ತಿದೆ. ಮೊದಲನೆಯದು ನಾಲ್ಕು ಸಿಲಿಂಡರ್ 1.2-ಲೀಟರ್ ಸ್ಮಾರ್ಟ್‌ಸ್ಟ್ರೀಮ್ ಪೆಟ್ರೋಲ್ ಎಂಜಿನ್ 6,000 rpm ನಲ್ಲಿ 82 bhp ಪವರ್ ಮತ್ತು 4,200 rpm ನಲ್ಲಿ 115 Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಕಿಯಾ ಸೋನೆಟ್‌ನಲ್ಲಿರುವ 1.5-ಲೀಟರ್ ನಾಲ್ಕು ಸಿಲಿಂಡರ್ CRDi ಡೀಸೆಲ್ ಎಂಜಿನ್ 4,000 rpm ನಲ್ಲಿ 99 bhp ಶಕ್ತಿಯನ್ನು ಮತ್ತು 1,500 rpm ನಲ್ಲಿ 240 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳಿದೆ. ಅದೇ ಎಂಜಿನ್‌ನ ಸ್ವಯಂಚಾಲಿತ ಆವೃತ್ತಿಯು 113 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

Kia ದ ಕಾಂಪ್ಯಾಕ್ಟ್ SUV 1.0-ಲೀಟರ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ GDI ಪೆಟ್ರೋಲ್ ಘಟಕದಿಂದ ಚಾಲಿತವಾಗಿದೆ, ಇದು 6,000 rpm ನಲ್ಲಿ 118 bhp ಶಕ್ತಿಯನ್ನು ಮತ್ತು 1,500 rpm ನಲ್ಲಿ 172 Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಕಿಯಾ ಸಬ್-4 ಮೀಟರ್ ವನ್ಹನಾ ಸೋನೆಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 16-ಇಂಚಿನ ಅಲಾಯ್ ವೀಲ್‌ಗಳು, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, ಎಸಿ ವೆಂಟ್‌ಗಳು, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಸೆಮಿ-ಲೆಥೆರೆಟ್ ಸೀಟ್‌ಗಳು, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಬಿಎಸ್ ಜೊತೆಗೆ ಇಬಿಡಿ ಇತ್ಯಾದಿ ವೈಶಿಷ್ಟ್ಯಗಳನ್ನು ಬ್ರ್ಯಾಂಡ್ ಸಿದ್ಧಪಡಿಸಿದೆ.

ಬೆಲೆ ಏರಿಕೆ: ಕಿಯಾ ಸೊನೆಟ್ ಖರೀದಿಗೂ ಮುನ್ನ ಈ ಬೆಲೆ ಪರಿಷ್ಕರಣೆಯನ್ನು ಒಮ್ಮೆ ಪರಿಶೀಲಿಸಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಮಾಡಿರುವ ಕಿಯಾ ಸೋನೆಟ್ ಬೆಲೆ ಏರಿಕೆ ಪಡೆದುಕೊಂಡಿರುವುದು ಮುಂದಿನ ತಿಂಗಳ ಮಾರಾಟದ ಮೇಲೆ ಪ್ರಭಾವಬೀರಬಹುದು. ಸೋನೆಟ್ ಸದ್ಯ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ಹೋಂಡಾ WR-V, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ಗಳ ವಿರುದ್ಧ ಭಾರತದಲ್ಲಿ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

Most Read Articles

Kannada
English summary
Kia Sonet gets price hike for 2nd time in a year New price details are here
Story first published: Thursday, August 4, 2022, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X