600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದೀಗ ಜನಪ್ರಿಯ ಸ್ಪೋರ್ಟ್ಸ್ ಕಾರ್ ತಯಾರಕ, ಲೋಟಸ್ ಹೊಸ ಲೋಟಸ್ ತನ್ನ ಎಲೆಟ್ರೆ ಎಂಬ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಮೂಲಕ ಲೋಟಸ್ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿ ಹೊಸ ವಿನ್ಯಾಸ ಭಾಷೆಯನ್ನು ಒಳಗೊಂಡಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಕಾರು ಬ್ರ್ಯಾಂಡ್‌ನ ಎವಿಜಾ ಹೈಪರ್‌ಕಾರ್‌ನಿಂದ ಪ್ರೇರಿತವಾಗಿದೆ. ಲೋಟಸ್ ಮುಂದಿನ 3-4 ವರ್ಷಗಳಲ್ಲಿ ಪ್ರಾರಂಭಿಸಲು ಯೋಜಿಸಿರುವ ಮೂರು ಹೊಸ ಇವಿ ಕಾರುಗಳಲ್ಲಿ ಎಲೆಟ್ರೆ ಮೊದಲನೆಯದು. ಕಂಪನಿಯು ಸ್ಪೋರ್ಟ್ಸ್ ಕಾರ್, ಕೂಪ್-ಸೆಡಾನ್ ಮತ್ತು ಹೊಸ ಎಸ್‍ಯುವಿಯನ್ನು ಅನ್ನು ಅಭಿವೃದ್ಧಿಪಡಿಸುತ್ತಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಬ್ರ್ಯಾಂಡ್‌ನ ಈ ಹೊಸ ಎಲೆಟ್ರೆ ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್ ಪ್ರೀಮಿಯಂ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ, ಇದು ವಿಭಿನ್ನ ಬ್ಯಾಟರಿ ಗಾತ್ರಗಳು, ಮೋಟಾರ್‌ಗಳು ಮತ್ತು ಸ್ಮಾರ್ಟ್ ಡ್ರೈವಿಂಗ್ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಹೊಂದಿಕೊಳ್ಳುತ್ತದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಕಾರಿನಲ್ಲಿ ಕ್ಯಾಮೆರಾ-ಮಾತ್ರ ಸೈಡ್-ವ್ಯೂ ಮಿರರ್‌ಗಳು ಮತ್ತು ರೂಫ್ ಮುಂಭಾಗ ಮತ್ತು ಹಿಂಭಾಗಕ್ಕೆ ಸ್ಥಿರವಾಗಿರುವ ಲಿಡಾರ್ ಸೆನ್ಸರ್ (ಲೇಸರ್ ಸ್ಕ್ಯಾನಿಂಗ್ ಅಥವಾ 3D ಸ್ಕ್ಯಾನಿಂಗ್) ನಂತಹ ಹಲವಾರು ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಲೋಟಸ್ ಎಲೆಟ್ರೆ ಒಂದು ಪರ್ಫಾಮೆನ್ಸ್ ಆಧಾರಿತ ಹೈಪರ್ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ, ಈ ಎಲೆಕ್ಟ್ರಿಕ್ ಎಸ್‍ಯುವಿ 3 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಆಲ್-ವೀಲ್-ಡ್ರೈವ್, 5-ಡೋರ್ ಎಲೆಕ್ಟ್ರಿಕ್ ಎಸ್‍ಯುವಿ 100kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಈ ಎಲೆಕ್ಟ್ರಿಕ್ ಎಸ್‍ಯುವಿ 600 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು 350kW ಚಾರ್ಜರ್ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ, ಇದು ಕೇವಲ 20 ನಿಮಿಷಗಳಲ್ಲಿ 400 ಕಿ.ಮೀ ವರೆಗೂ ಚಲಿಸುತ್ತದೆ. ಇನ್ನು ಇದನ್ನು ಪೂರ್ಣ ಪ್ರಮಾಣದ ಚಾರ್ಜ್‌ ಮಾಡಿದರೆ 600 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಇನ್ನು ಈ ಎಸ್‍ಯುವಿಯು ಇವಿ 22kW AC ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಲೋಟಸ್ ಎಲೆಟ್ರೆ ಅಗ್ರೇಸಿವ್ ವಿನ್ಯಾಸವನ್ನು ಮುಂದಕ್ಕೆ ಒಲವು ತೋರುವ ಮುಂಭಾಗ ಮತ್ತು ಕೂಪ್ ತರಹದ ರೂಫ್ ಅನ್ನು ಹೊಂದಿದೆ. ಇದು ಬ್ರ್ಯಾಂಡ್‌ನ ಮೊದಲ 5-ಡೋರ್ ಉತ್ಪಾದನಾ ಕಾರು ಮತ್ತು ಇದುವರೆಗೆ ತಯಾರಿಸಿದ ಅತ್ಯಂತ ಕನೆಕ್ಟೆಡ್ ಎಸ್‍ಯುವಿಯಾಗಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಹೊಸ ಹೈಪರ್ ಎಸ್‍ಯುವಿ "ಎಂಡ್-ಟು-ಎಂಡ್ ಆಟೋನೊಮಸ್ ಡ್ರೈವಿಂಗ್ ತಂತ್ರಜ್ಞಾನ" ಮತ್ತು OTA ಸಾಫ್ಟ್‌ವೇರ್ ಅಪ್‌ಡೇಟ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಇದು ಸ್ಪೆಲ್ಫ್ ಪಾರ್ಕಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯಲ್ಲಿ ಲೋಟಸ್, "ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಹತ್ತಿರದ ಪಾರ್ಕಿಂಗ್ ಸ್ಥಳದಿಂದ ಆಟೋನೊಮಸ್ ಓಡಿಸಲು ಎಲೆಟ್ರೆಗೆ ವಿನಂತಿಸಬಹುದು. ನಂತರ ಪ್ರಯಾಣವು ಕೊನೆಗೊಂಡ ನಂತರ ಆಟೋನೊಮಸ್ ರಿಪಾರ್ಕ್ ಮಾಡಬಹುದು" ಎಂದು ಹೇಳಿದ್ದಾರೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಈ ಎಸ್‍ಯುವಿಯು ಇಂಟಿಲಿಜೆಂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕೊಲಿಷನ್ ಮಿಟಿಗೇಷನ್ ಸಂಪೂರ್ಟ್, ಟ್ರಾಫಿಕ್ ಸೈನ್ ಗುರುತಿಸುವಿಕೆ, ರೇರ್ ಗ್ರಾಸ್ ಟ್ರಾಫಿಕ್ ಅಲರ್ಟ್, ಫ್ರಂಟ್ ಕ್ರಾಸ್ ಟ್ರಾಫಿಕ್ ಅಲರ್ಟ್, ಪಾರ್ಕಿಂಗ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಚೇಂಜ್ ಅಸಿಸ್ಟ್ ಮತ್ತು ADAS ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇನ್ನು ಇಂಧನ ಚಾಲಿತ ವಾಹನಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಇಂಧನಗಳ ಬೆಲೆ ಏರಿಕೆ ಪರಿಣಾಮ ವಿವಿಧ ರಾಷ್ಟ್ರಗಳು 2030ರಿಂದಲೇ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟವನ್ನು ಶೇ.50 ರಷ್ಟು ತಗ್ಗಿಸುವ ನಿರ್ಣಯ ಕೈಗೊಂಡಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.ಭಾರತದಲ್ಲೂ ಈಗಾಗಲೇ ಪ್ರಮುಖ ಕಾರು ಕಂಪನಿಗಳು ಪರಿಸರ ವಾಹನಗಳ ಮಾರಾಟದತ್ತ ಆದ್ಯತೆ ನೀಡುತ್ತಿದೆ.ಕಳೆದ ಕೆಲ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಇನ್ನು ಟಾಟಾ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿಯ ಸಂಯೋಜಿತ ಮಾರಾಟವು 2022ರ ಫೆಬ್ರವರಿ ತಿಂಗಳಿನಲ್ಲಿ 2,264 ಯುನಿಟ್‌ಗಳಷ್ಟಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 434 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷಕ್ಕೆ 421.6 ಶೇಕಡಾ ಹೆಚ್ಚಳವಾಗಿದೆ.

600 ಕಿ.ಮೀ ರೇಂಜ್ ಹೊಂದಿರುವ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಹೈಪರ್ ಎಸ್‍ಯುವಿಯು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆಯೇ ಎಂಬ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Lotus unveiled new eletre hyper electric suv 600km driving range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X