Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬಿಡುಗಡೆಗೊಂಡ 2022ರ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ
ಕಿಯಾ ಇಂಡಿಯಾ(Kia India) ಕಂಪನಿಯು ತನ್ನ ಜನಪ್ರಿಯ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ರಮುಖ ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹೊಸ ಸೊನೆಟ್ ಕಾರು ಮಾದರಿಯೊಂದಿಗೆ ಕಿಯಾ ಕಂಪನಿಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಬಾರಿ ಎಂಟ್ರಿ ಲೆವಲ್ ಮಾದರಿಯಲ್ಲೂ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಅಳವಡಿಸಿದೆ. ಹೀಗಾಗಿ ಹೊಸ ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.69 ಲಕ್ಷ ಬೆಲೆ ಹೊಂದಿದೆ.

ಹಳೆಯ ಮಾದರಿಗಿಂತಲೂ ಹೊಸ ಆವೃತ್ತಿಯು ಈ ಬಾರಿ ರೂ. 30 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಸಹ ವಿಸ್ತರಿಸಲಾಗಿದೆ.

ಇದರ ಹೊರತಾಗಿ ಹೊಸ ಮಾದರಿಯಲ್ಲಿ ಈ ಹಿಂದಿನ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಸೊನೆಟ್ ಮಾದರಿಯನ್ನು ಅನ್ನು ನವೀಕರಿಸಿರುವ ಕಂಪನಿಯು ಸುರಕ್ಷತೆಯ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ನವೀಕರಣಗೊಂಡಿರುವ 2022ರ ಸೊನೆಟ್ ಮಾದರಿಯ ಬೆಸ್ ವೆರಿಯೆಂಟ್‌ನಲ್ಲಿ ಈ ಬಾರಿ ಸ್ಟ್ಯಾಂಡರ್ಡ್ ಆಗಿ ನಾಲ್ಕು ಏರ್‌ಬ್ಯಾಗ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಹಾಗೆಯೇ ವೈಟ್ ಸ್ಟಿಚ್ ಹೊಂದಿರುವ ಸೆಮಿ ಲೆದರ್ ಆಸನಗಳು ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಿದ್ದು, ಹಿಂಭಾಗದ ಸೀಟಿನಲ್ಲಿ ಮಡಿಕೆ ಮಾಡಬಹುದಾದ ನಾಬ್ ನೀಡಲಾಗಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಟಾಪ್ ಎಂಡ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿ ಟಿಪಿಎಂಎಸ್ ಮತ್ತು 4 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು 6 ಏರ್‌ಬ್ಯಾಗ್‌ಗಳು, ಹೊಸ ಕಿಯಾ ಕನೆಕ್ಟ್ ಅಪ್ಲಿಕೇಶನ್, ಹೊಸ ಎಸ್ಒಎಸ್ ಮತ್ತು ಐಆರ್‌ವಿಎಂ ನಲ್ಲಿ ಕಿಯಾ ಕನೆಕ್ಟ್ ಬಟನ್ ನೀಡಲಾಗಿದೆ.

ಜೊತೆಗೆ ಈ ಹಿಂದೆ ಹೆಚ್‌ಟಿಎಕ್ಸ್ ಅಥವಾ ಮೇಲಿನ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದ್ದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಸೌಲಭ್ಯಗಳನ್ನು ಇದೀಗ ಮಿಡ್ ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಹಾಗೆಯೇ ಹೊಸ ಮಾದರಿ ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಆನಿವರ್ಸರಿ ಎಡಿಷನ್‌ಗೆ ಕಂಪನಿಯು 4.2-ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಿದ್ದು, ಇದು ಮೊದಲು ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಮಾತ್ರವೇ ಲಭ್ಯವಿತ್ತು.

ಇನ್ನು ಹೊಸ ಕಾರಿನ ಬಣ್ಣ ಆಯ್ಕೆಗಳ ಬಗೆಗೆ ಹೇಳುವುದಾದರೇ ಕಂಪನಿಯು ಸೊನೆಟ್ ಹಳೆಯ ಮಾದರಿಯಲ್ಲಿನ 3 ಬಣ್ಣಗಳ ಆಯ್ಕೆಯನ್ನು ತೆಗೆದುಹಾಕಿದ್ದು, ಇದರಲ್ಲಿ ಬ್ಲ್ಯೂ, ಗೋಲ್ಡ್ ಬೀಜ್ ಮತ್ತು ಸ್ಟೀಲ್ ಸಿಲ್ವರ್ ಇದೀಗ ಖರೀದಿ ಲಭ್ಯವಿಲ್ಲ. ಅದರ ಬದಲಾಗಿ ಕಂಪನಿಯು ಇಂಪೀರಿಯಲ್ ಸಿಲ್ವರ್ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್ ಅನ್ನು ಒಳಗೊಂಡಿರುವ ಎರಡು ಹೊಸ ಬಣ್ಣದ ಆಯ್ಕೆಗಳನ್ನು ತಂದಿದ್ದು, ಇದನ್ನು ಹೊರತುಪಡಿಸಿ ಸೊನೆಟ್‌ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಎಂಜಿನ್ ಮತ್ತು ಪರ್ಫಾಮೆನ್ಸ್
ಕಿಯಾ ಸೊನೆಟ್ ಕಾರು ಮಾದರಿಯು ಒಟ್ಟು ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಇದರ ಪೆಟ್ರೋಲ್ ಮಾದರಿಯು 1.0-ಲೀಟರ್ ಟರ್ಬೊ ಜಿಡಿಐ ಎಂಜಿನ್ ಹೊಂದಿದ್ದು ಅದು ಗರಿಷ್ಠ 120 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ.

1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಗರಿಷ್ಠ 83 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 1.5-ಲೀಟರ್ ಸಿಆರ್‌ಡಿಐ ಎಂಜಿನ್ ಅನ್ನು ಪಡೆದಿದ್ದು, ಇದು 100 ಬಿಎಚ್‌ಪಿ ಮತ್ತು 115 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

ಇದರಲ್ಲಿ 1.0 ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮಾದರಿಯು ಸ್ಮಾರ್ಟ್‌ಸ್ಟ್ರೀಮ್ 6 ಸ್ಪೀಡ್ ಐಎಂಟಿ ಮತ್ತು 7 ಡಿಸಿಟಿ ಮತ್ತು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋ ಗೇರ್‌ಬಾಕ್ಸ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತವೆ.

ಸೊನೆಟ್ ಮಾದರಿಯ ವಿಶೇಷ ಆವೃತ್ತಿಯು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಸ್ಟೀಲ್ ಸಿಲ್ವರ್ ಮತ್ತು ಗ್ರಾವಿಟಿ ಗ್ರೇ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದೆ.