ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ನಿಸ್ಸಾನ್ ಇಂಡಿಯಾ ಕಂಪನಿಯು ಹೊಸ ವರ್ಷದ ಆರಂಭದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದು, ಜನವರಿ 1ರಿಂದಲೇ ಅನ್ವಯಿಸುವಂತೆ ಹೊಸ ಕಾರುಗಳ ದರ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಆಟೋ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ನಿಸ್ಸಾನ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.1 ರಿಂದ ಶೇ. 1.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಜನವರಿ 1ರಿಂದ ಬೆಲೆ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ನಿಸ್ಸಾನ್ ಕಂಪನಿಯು ಹೊಸ ದರ ಪಟ್ಟಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.5,500 ದಿಂದ ರೂ. 25 ಸಾವಿರದಷ್ಟು ದರ ಹೆಚ್ಚಳವಾಗಿವೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 40 ಸಾವಿರದಿಂದ ರೂ. 80 ಸಾವಿರದಷ್ಟು ಮತ್ತು ಮಧ್ಯಮ ಕ್ರಮಾಂಕದ ಕಾರುಗಳು ರೂ. 50 ಸಾವಿರದಿಂದ ರೂ. 1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಹೊಸ ದರಪಟ್ಟಿಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯಲ್ಲಿ ರೂ.5,500 ಸಾವಿರದಿಂದ ರೂ.9 ಸಾವಿರದಷ್ಟು ಹೆಚ್ಚಳ ಮಾಡಲಾಗಿದ್ದು, ಕಿಕ್ಸ್ ಕಾರು ಮಾದರಿಯ ಬೆಲೆಯಲ್ಲಿ ರೂ. 20 ಸಾವಿರದಿಂದ ರೂ.25 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಹೊಸ ಕಾರುಗಳು ದರ ಹೆಚ್ಚಳ ನಂತರ ಮ್ಯಾಗ್ನೈಟ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5,76,500ರಿಂದ ಟಾಪ್ ಎಂಡ್ ಮಾದರಿಯು 9.99 ಲಕ್ಷ ಬೆಲೆ ಹೆಚ್ಚಳ ಪಡೆದುಕೊಂಡರೆ ಕಿಕ್ಸ್ ಎಸ್‌ಯುವಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.98 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.14.90 ಲಕ್ಷ ಬೆಲೆ ಹೊಂದಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಮ್ಯಾಗ್ನೈಟ್ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಯೊಂದಿಗೆ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಟರ್ಬೊ ಮಾದರಿಗಳ ಬೆಲೆಯಲ್ಲಿ ಹೆಚ್ಚಿನ ಮಟ್ಟದ ದರ ಹೆಚ್ಚಳ ಮಾಡಲಾಗಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಹೊಸ ಕಾರು ಮಾದರಿಯು ಬಿಡುಗಡೆಯ ನಂತರ ಇದುವರೆಗೆ ಸುಮಾರು 75 ಸಾವಿಕ್ಕೂ ಹೆಚ್ಚು ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದ್ದು, ಹೊಸ ಕಾರಿನೊಂದಿಗೆ ಹಲವು ದಾಖಲೆಗಳಿಗೆ ಕಾರಣವಾಗಿರುವ ನಿಸ್ಸಾನ್ ಕಂಪನಿಯು ಬುಕ್ಕಿಂಗ್ ಪ್ರಕ್ರಿಯೆ ಅನುಗುಣವಾಗಿ ಕಾರು ಉತ್ಪಾದನೆಯನ್ನು ಸಹ ತೀವ್ರಗೊಳಿಸಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಮ್ಯಾಗ್ನೈಟ್ ಕಾರಿನಲ್ಲಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಇನ್ನು ಕಿಕ್ಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಆವೃತ್ತಿಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ದುಬಾರಿ ದುನಿಯಾ: ನಿಸ್ಸಾನ್ ಕಾರುಗಳ ಬೆಲೆಯಲ್ಲಿ ರೂ.25 ಸಾವಿರ ತನಕ ಹೆಚ್ಚಳ

ಹೊಸ ಕಿಕ್ಸ್ ಮಾದರಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಗಳೊಂದಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Nissan magnite kicks prices hiked up to 25000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X