Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತೀಯ ಮಾರುಕಟ್ಟೆ ತೊರೆದ ಡಸ್ಟರ್: ವಾರ್ಷಿಕ ಮಾರಾಟದಲ್ಲಿ ತೀರ್ವ ಕುಸಿತ, ದಯನೀಯ ಸ್ಥಿತಿಯಲ್ಲಿ ರೆನಾಲ್ಟ್!
ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ರೆನಾಲ್ಟ್ ಡಸ್ಟರ್ (Renault Duster) ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು.

ಭಾರತೀಯ ಮಾರುಕಟ್ಟೆಯ ಮಿಡ್ ಎಸ್‍ಯುವಿ ವಿಭಾಗದಲ್ಲಿ ರೆನಾಲ್ಟ್ ಡಸ್ಟರ್ 3-4 ವರ್ಷಗಳ ಕಾಲ ಆಳಿತು. ಆದರೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಬಿಡುಗಡೆಯೊಂದಿಗೆ ಸ್ಪರ್ಧೆಯು ತೀವ್ರವಾಯಿತು. ವಾಸ್ತವವಾಗಿ, ಸ್ಕೋಡಾ, ಫೋಕ್ಸ್‌ವ್ಯಾಗನ್ ಮತ್ತು ಎಂಜಿ ನಂತಹ ಕಾರು ತಯಾರಕರು ಇತ್ತೀಚೆಗೆ ತಮ್ಮ ಆಧುನಿಕ ಕೊಡುಗೆಗಳೊಂದಿಗೆ ವಿಭಾಗಕ್ಕೆ ಪ್ರವೇಶಿಸಿದ್ದಾರೆ.

ಈ ಪೈಪೋಟಿಯಿಂದ ಡಸ್ಟರ್ ತನ್ನ ಆಕರ್ಷಣೆಯನ್ನು ಕಳೆದುಕೊಂಡ ಕಾರಣ ಕಂಪನಿಯು ಡಸ್ಟರ್ ಎಸ್‍ಯುವಿಯ ಉತ್ಪಾದನೆಯನ್ನು ಭಾರತದಲ್ಲಿ ನಿಲ್ಲಿಸಲು ನಿರ್ಧರಿಸಿದೆ. ಇದೀಗ ಡಸ್ಟರ್ ಎಸ್‍ಯುವಿಯ ಹೆಸರನ್ನು ಕಂಪನಿಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ವಾರ್ಷಿಕ ಮಾರಾಟದಲ್ಲಿ ಕುಸಿತ
ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕಾರ್ಪೊರೇಟ್ ಕಾರುಗಳ ಮಾರಾಟ ತೀವ್ರವಾಗಿ ಕುಸಿದಿದೆ. ಮಾರ್ಚ್ 2021 ರಲ್ಲಿ 12,356 ಯೂನಿಟ್‌ಗಳನ್ನು ಮಾರಾಟ ಮಾಡಿದ್ದ ಕಂಪನಿ, ಈ ವರ್ಷದ ಮಾರ್ಚ್‌ನಲ್ಲಿ ಕೇವಲ 8,518 ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮಾರಾಟದಲ್ಲಿ ಶೇ31ರಷ್ಟು ಕುಸಿತವಾಗಿದೆ.

ತಿಂಗಳ ಮಾರಾಟದಲ್ಲಿ ಬೆಳವಣಿಗೆ
ವಾರ್ಷಿಕ ಹೋಲಿಕೆಗಳಲ್ಲಿ ಕುಸಿತದ ಹೊರತಾಗಿಯೂ, ಮಾಸಿಕ ಹೋಲಿಕೆಗಳ ವಿಷಯದಲ್ಲಿ ರೆನಾಲ್ಟ್ ಬೆಳವಣಿಗೆಯನ್ನು ದಾಖಲಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 6,568 ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಮುಂದಿನ ಮಾರ್ಚ್‌ನಲ್ಲಿ ಈ ಸಂಖ್ಯೆ 8,518ಕ್ಕೆ ಏರಿತು. ಇದು ಸುಮಾರು ಶೇ30ರಷ್ಟು ಹೆಚ್ಚಳವಾಗಿದೆ. ಕಳೆದ ಮಾರ್ಚ್ ನಲ್ಲಿ ಭಾರತದಲ್ಲಿ ಟಾಪ್ ಕಾರು ಮಾರಾಟಗಾರರ ಪಟ್ಟಿಯಲ್ಲಿ ರೆನಾಲ್ಟ್ ಅಗ್ರಸ್ಥಾನದಲ್ಲಿತ್ತು.

ಹೋಂಡಾ, ಸ್ಕೋಡಾ, ಎಂಜಿ, ನಿಸ್ಸಾನ್, ಜೀಪ್ ಮತ್ತು ಸಿಟ್ರೊಯೆನ್ ರೆನಾಲ್ಟ್ ಹಿಂದೆ ಇವೆ. ಮಾರ್ಚ್ 2021 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್‌ನ ಮಾರುಕಟ್ಟೆ ಪಾಲು ಶೇಕಡಾ 3.9 ರಷ್ಟಿತ್ತು. ಆದರೆ ಈ ವರ್ಷದ ಮಾರ್ಚ್ ನಲ್ಲಿ ಶೇ.2.7ಕ್ಕೆ ಕುಸಿದಿದೆ.

ರೆನಾಲ್ಟ್ ಟ್ರಿಪ್ಪರ್ ಈ ವರ್ಷದ ಮಾರ್ಚ್‌ನಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ರೆನಾಲ್ಟ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಎಂಪಿವಿ ಮಾದರಿಯ ಕಾರಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ರೆನಾಲ್ಟ್ 3,561 ಟ್ರಿಪ್ಪರ್ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಮಾರ್ಚ್ 2021 ರಲ್ಲಿ ಇದೇ ಕಾರಿನ 4,133 ಯೂನಿಟ್‌ಗಳನ್ನು ಕಂಪನಿ ಮಾರಾಟ ಮಾಡಿತ್ತು. ಈ ಮೂಲಕ ವರ್ಷದ ಮಾರಾಟದಲ್ಲಿ ಶೇ 14ರಷ್ಟು ಕುಸಿತವಾಗಿದೆ.

ರೆನಾಲ್ಟ್ ಕೈಗರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಸಬ್-4 ಮೀಟರ್ ಕಾಂಪ್ಯಾಕ್ಟ್ SUV ಆಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 2,496 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಮಾರ್ಚ್ 2021 ರಲ್ಲಿ 3,839 ಯೂನಿಟ್‌ಗಳು ಮಾರಾಟಗೊಂಡಿದ್ದವು, ಈ ಮೂಲಕ ವಾರ್ಷಿಕ ಮಾರಾಟದಲ್ಲಿ ಶೇ35ರಷ್ಟು ಕುಸಿತವಾಗಿದೆ.

ರೆನಾಲ್ಟ್ ಕ್ವಿಡ್ ಈ ಪಟ್ಟಿಯಲ್ಲಿ ಮೂರನೇ ಮತ್ತು ಕೊನೆಯ ಸ್ಥಾನದಲ್ಲಿದೆ. ಮಾರ್ಚ್ 2021 ರಲ್ಲಿ 4,132 ಕ್ವಿಡ್ ಕಾರುಗಳು ಮಾರಾಟವಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಆ ಸಂಖ್ಯೆ 2,461 ಕ್ಕೆ ಇಳಿದಿದೆ. ಇದರಿಂದಾಗಿ ರೆನಾಲ್ಟ್ ಕ್ವಿಡ್ ಕಾರು ವಾರ್ಷಿಕ ಮಾರಾಟದಲ್ಲಿ ಶೇ.40ರಷ್ಟು ಕುಸಿದಿದೆ.

ರೆನಾಲ್ಟ್ ಮಾರಾಟದಲ್ಲಿ ಕುಸಿತಕ್ಕೆ ಕಾರಣ?
ರೆನಾಲ್ಟ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಈ 3 ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ರೆನಾಲ್ಟ್ ಈ ಹಿಂದೆ ಡಸ್ಟರ್ ಅನ್ನು ಮಾರಾಟ ಮಾಡಿತ್ತು. ಆದರೆ ರೆನಾಲ್ಟ್ ಈಗ ಭಾರತೀಯ ಮಾರುಕಟ್ಟೆಯಿಂದ ಡಸ್ಟರ್ ಅನ್ನು ಹಿಂಪಡೆದಿದೆ. ರೆನಾಲ್ಟ್ ಡಸ್ಟರ್ ಒಂದು SUV ರೂಪಾಂತರವಾಗಿದ್ದು, ಒಂದು ಕಾಲದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದ ಮಾದರಿಯಾಗಿದೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಮಾರಾಟ ಮಾಡುತ್ತಿರುವ ಎಲ್ಲಾ ಮೂರು ಕಾರುಗಳು ಈ ವರ್ಷದ ಮಾರ್ಚ್‌ನಲ್ಲಿ ಕುಸಿತ ಕಂಡಿವೆ. ಬಹುಕಾಲದಿಂದ ಮಾರಾಟವಾಗುತ್ತಿರುವ ಡಸ್ಟರ್ ಕಾರಿನ ಉತ್ಪಾದನೆಯನ್ನು ರೆನಾಲ್ಟ್ ಸ್ಥಗಿತಗೊಳಿಸಿರುವುದು ಸಹ ಈ ಕುಸಿತಕ್ಕೆ ಒಂದು ಕಾರಣವೆಂದು ಪರಿಗಣಿಸಲಾಗಿದೆ.

ಆದರೆ ಡಸ್ಟರ್ ಕಾರನ್ನು ಮಾರಾಟದಿಂದ ಏಕೆ ಏಕೆ ಸ್ಥಗಿತಗೊಳಿಸಲಾಗಿದೆ ಎಂಬುದಕ್ಕೆ ರೆನಾಲ್ಟ್ ಕಂಪನಿ ಅಧಿಕೃತ ಕಾರಣವನ್ನು ಇನ್ನೂ ತಿಳಿಸಿಲ್ಲ. ಮಾರಾಟವು ಮಂದಗತಿಯಲ್ಲಿರುವುದು ಮತ್ತು ತೀರ್ವ ಸ್ಪರ್ಧೆಯಿಂದ ರೆನಾಲ್ಟ್ ಡಸ್ಟರ್ ಮಾರಾಟವನ್ನು ನಿಲ್ಲಿಸಲಾಗಿದೆ ಎಂಬುದು ಕೆಲವರ ವಾದ.

ರೆನಾಲ್ಟ್ ಡಸ್ಟರ್ ಕಾರಿನ ಪ್ರಮುಖ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎರಡೂ ಮಾರಾಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಹಾಗೆಯೇ ಹೊಸ ಸ್ಪರ್ಧಿಗಳ ಆಗಮನದಿಂದ ರೆನಾಲ್ಟ್ ಡಸ್ಟರ್ ಕಾರಿನ ಮಾರಾಟದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿದೆ.

ಈ ಕಾರಣದಿಂದಾಗಿ, ಡಸ್ಟರ್ ಅನ್ನು ಮಾರಾಟದಿಂದ ಹೊರಗಿಡಲು ರೆನಾಲ್ಟ್ ನಿರ್ಧರಿಸಿದೆ ಎಂದು ಹೇಳಲಾಗುತ್ತದೆ. ರೆನಾಲ್ಟ್ ಇತ್ತೀಚೆಗೆ ಕ್ವಿಡ್ ಹ್ಯಾಚ್‌ಬ್ಯಾಕ್ ಮತ್ತು ಕೈಗರ್ ಸಬ್-4m ಕಾಂಪ್ಯಾಕ್ಟ್ SUV ಯ 2022 ಮಾದರಿಗಳನ್ನು ಬಿಡುಗಡೆ ಮಾಡಿತು. ಇದು ರೆನಾಲ್ಟ್ ಅನ್ನು ಮತ್ತೆ ಮಾರುಕಟ್ಟೆಯಲ್ಲಿ ಪ್ರಬಲವಾಗಿಸಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.