ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಟಿಯಾಗೋ ಮತ್ತು ಟಿಗೋರ್ ಆವೃತ್ತಿಗಳಲ್ಲಿ ಸಿಎನ್‌ಜಿ ವರ್ಷನ್ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಕಾರುಗಳು ಹೊಸ ವರ್ಷದ ಸಂಭ್ರಮಕ್ಕಾಗಿ ಇದೇ ತಿಂಗಳು 19ರಂದು ಬಿಡಗಡೆಯಾಗುತ್ತಿರುವುದು ಬಹುತೇಕ ಖಚಿತವಾಗಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸಿಎನ್‌ಜಿ ವರ್ಷನ್‌ಗಳ ಬಿಡುಗಡೆಗೂ ಮುನ್ನು ಟೀಸರ್ ಹಂಚಿಕೊಂಡಿದ್ದು, ಹೊಸ ಟೀಸರ್ ಮೂಲಕ ಅಧಿಕೃತ ಬುಕ್ಕಿಂಗ್ ಆರಂಭ ಕುರಿತು ಮಾಹಿತಿ ಹಂಚಿಕೊಂಡಿದೆ. ಸಿಎನ್‌ಜಿ ಮಾದರಿಗಳ ಮೂಲಕ ಪರಿಸರ ಸ್ನೇಹಿ ವಾಹನಗಳತ್ತ ಮಹತ್ವದ ಹೆಜ್ಜೆಯಿಟ್ಟಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆ ನೀಡಲಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಪರಿಸರ ಸ್ನೇಹಿ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಆರಂಭಿಕವಾಗಿ ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ತದನಂತರ ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಮತ್ತಷ್ಟು ಹೊಸ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಉತ್ಪಾದನೆಯನ್ನು ತಗ್ಗಿಸಿ ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಹೈಬ್ರಿಡ್ ಮಾದರಿಗಳತ್ತ ಹೆಚ್ಚಿನ ಗಮನಹರಿಸುತ್ತಿದ್ದು, ಹಂತ-ಹಂತವಾಗಿ ಇವಿ ಮತ್ತು ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಭವಿಷ್ಯದ ವಾಹನ ಮಾದರಿಗಳ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಹೊಸ ಬದಲಾವಣೆ ಕಾರಣವಾಗಿದ್ದು, ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಗಮನಸೆಳೆಯುತ್ತಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಪ್ರಮುಖ ಕಾರು ಮಾದರಿಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಟಿಗೋರ್ ಮತ್ತು ಟಿಯಾಗೋ ಮಾದರಿಗಳಲ್ಲಿ ಸಿಎನ್‌ಜಿ(CNG) ಆವೃತ್ತಿಗಳನ್ನು ಅಭಿವೃದ್ದಿಪಡಿಸುತ್ತಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಾಟಾ ಹೊಸ ಸಿಎನ್‌ಜಿ ಕಾರು ಆವೃತ್ತಿಗಳು ಅತಿ ಕಡಿಮೆ ಮಾಲಿನ್ಯ ಉತ್ಪತ್ತಿಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸಲಿದ್ದು, ಇವು ಸಾಂಪ್ರಾದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಸದ್ಯ ಮಾರುಕಟ್ಟೆ ಸಿಎನ್‍ಜಿ ತಂತ್ರಜ್ಞಾನ ಪ್ರೇರಿತ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಪೂರಕವಾಗಿ ಸಿಎನ್‌ಜಿ ಪೂರೈಕೆಯ ಕೇಂದ್ರಗಳನ್ನು ಸಹ ಹೆಚ್ಚಿಸುತ್ತಿರುವುದು ಇತರೆ ಕಂಪನಿಗಳು ಹೊಸ ಕಾರು ಮಾದರಿಗಳತ್ತ ಗಮನಹರಿಸುತ್ತಿವೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಸಿಎನ್‌ಜಿ ಹೊಸ ಆವೃತ್ತಿಗಳು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿರಲಿವೆ ಎನ್ನಲಾಗಿದ್ದು, ಹೊಸ ಕಾರು ಮಾದರಿಗಳು ಪ್ರಸ್ತುತ ಮಾದರಿಗಳಲ್ಲಿನ ಮಧ್ಯಮ ಕ್ರಮಾಂಕದ ಆವೃತ್ತಿಗಳನ್ನು ಆಧರಿಸಿ ಬಿಡುಗಡೆಯಾಗಲಿವೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಹೊಸ ಆವೃತ್ತಿಗಳು ಉತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಬಿಎಸ್ 6 ಜಾರಿ ನಂತರ ಟಾಟಾ ಕಂಪನಿಯು ಪ್ರಮುಖ ಕಾರುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತದ ನಂತರ ಪೆಟ್ರೋಲ್ ಮಾದರಿಗಳನ್ನು ಸಹ ಮುಂಬರುವ ಕೆಲವೇ ವರ್ಷಗಳಲ್ಲಿ ಹಂತ-ಹಂತವಾಗಿ ಸ್ಥಗಿತಗೊಳಿಸುವ ನಿರ್ಧರಿಸಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಡೀಸೆಲ್ ಮತ್ತು ಪೆಟ್ರೋಲ್ ಬದಲಾಗಿ ಕಾರು ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ನೈಸರ್ಗಿಕ ಅನಿಲಗಳಿಂದ ಚಾಲನೆ ಮಾಡಬಹುದಾದ ವಿವಿಧ ತಂತ್ರಜ್ಞಾನ ಪ್ರೇರಣೆಯ ವಾಹನಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿವೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಟಾಟಾ ಮೋಟಾರ್ಸ್ ಕಂಪನಿಯು ಸದ್ಯಕ್ಕೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸದಾಗಿ ಪರಿಚಯಿಸಲಿರುವ ಸಿಎನ್‌ಜಿ ಆಯ್ಕೆಯು ಹೊಸ ಕಾರಿನ ಮಾರಾಟವನ್ನು ಹೆಚ್ಚಿಸಲಿದೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಸಿಎನ್‌ಜಿ ಆವೃತ್ತಿಯನ್ನು ಟಿಗೋರ್ ಮತ್ತು ಟಿಯಾಗೋ ಕಾರಿನ ಮಧ್ಯಮ ಕ್ರಮಾಂಕದ ಮಾದರಿಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿಯಾದರೂ ಉತ್ತಮ ಇಂಧನ ದಕ್ಷತೆಯೊಂದಿಗೆ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿವೆ.

ಇದೇ ತಿಂಗಳು 19ರಂದು ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ವರ್ಷನ್

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.07 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.67 ಲಕ್ಷದಿಂದ ರೂ. 7.84 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Tata motors officially confirms debut date of its tiago and tigor cng cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X