Just In
- 8 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 11 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 13 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- News
ಶಿವಸೇನೆ-ಬಿಜೆಪಿ ಮೈತ್ರಿ ಸುಳಿವು ಕೊಟ್ಟ ಕರ್ನಾಟಕದ ಸಚಿವ!
- Sports
ಭಾರತ vs ಐರ್ಲೆಂಡ್: ಮೊದಲ ಟಿ20 ಪಂದ್ಯ, ಟಾಸ್ ಗೆದ್ದ ಭಾರತ, Live ಸ್ಕೋರ್, ಆಡುವ ಬಳಗ
- Movies
ಕೆ.ಎಲ್.ರಾಹುಲ್ ಜೊತೆ ಜರ್ಮನಿಗೆ ಹಾರಿದ ಆತಿಯಾ ಶೆಟ್ಟಿ
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಟೆಸ್ಲಾ ವಿರುದ್ಧ ಭಾರತೀಯ ಗ್ರಾಹಕರ ಅಸಮಾಧಾನ: ಬುಕಿಂಗ್ ಮೊತ್ತವನ್ನು ಹಿಂದಿರುಗಿಸಲು ಒತ್ತಾಯ
ಅಮೆರಿಕದ ಆಟೋಮೊಬೈಲ್ ಕಂಪನಿ ಟೆಸ್ಲಾ ಭಾರತ ಪ್ರವೇಶಿಸಲು ಹಲವು ವರ್ಷಗಳಿಂದ ತಯಾರಿ ನಡೆಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ದೇಶದಲ್ಲಿ ತನ್ನ ಕಂಪನಿಯ ಹೆಸರನ್ನು ನೋಂದಾಯಿಸಿರುವ ಟೆಸ್ಲಾ, ಉದ್ಯಮ ಆರಂಭಿಸಲು ಹಿಂದೇಟು ಹಾಕುತ್ತಿದೆ.

2016 ರಲ್ಲಿ ಟೆಸ್ಲಾ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರ್ ಟೆಸ್ಲಾ ಮಾಡೆಲ್ 3 ಗಾಗಿ ಭಾರತದಿಂದ ಮತ್ತು ಪ್ರಪಂಚದ ಇತರ ಭಾಗಗಳಿಂದ ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಆ ಸಮಯದಲ್ಲಿ ಟೆಸ್ಲಾ ಮಾಡೆಲ್ 3 ಗಾಗಿ ಕೇವಲ $ 1000 (ಅಂದಾಜು ರೂ. 60-65 ಸಾವಿರ) ಗೆ ಬುಕಿಂಗ್ ತೆರೆಯಿತು. ಆ ಸಮಯದಲ್ಲಿ ಭಾರತದ ಕೆಲವು ಉತ್ಸಾಹಿಗಳು ಟೆಸ್ಲಾ ಮಾಡೆಲ್ 3 ಕಾರನ್ನು ಬುಕ್ ಮಾಡಿದರು.

ಆದರೆ, ಅಮೆರಿಕದ ಈ ಕಂಪನಿ ಭಾರತೀಯ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಬಿಡುಗಡೆ ಅಥವಾ ವಿತರಣೆಯ ಬಗ್ಗೆ ಕಂಪನಿಯು ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದರ ಹಿನ್ನೆಲೆಯಲ್ಲಿ ಗ್ರಾಹಕರು ಕಳೆದ ಆರು ವರ್ಷಗಳಿಂದ ಟೆಸ್ಲಾಗೆ ಮರುಪಾವತಿಗಾಗಿ ಪದೇ ಪದೇ ಕೇಳುತ್ತಿದ್ದರೂ ಕಂಪನಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ನಿರಾಶೆಗೊಂಡಿದ್ದಾರೆ.

ವಿಶ್ವದಾದ್ಯಂತ ಮೂರು ಮಿಲಿಯನ್‌ಗಿಂತ ಹೆಚ್ಚು ವಿತರಣೆ
ಟೆಸ್ಲಾ ಭಾರತದಲ್ಲಿ ತನ್ನ ಕಾರನ್ನು ನೇರವಾಗಿ ವಿತರಿಸದಿರಬಹುದು, ಆದರೆ ಈ ಕಾರನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವಿತರಿಸಲಾಗುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಟೆಸ್ಲಾ ಜಾಗತಿಕ ಮಾರುಕಟ್ಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮಾಡೆಲ್ 3 ಕಾರುಗಳನ್ನು ವಿತರಿಸಿದೆ.

ವಾಸ್ತವವಾಗಿ ಭಾರತದಲ್ಲಿ ಟೆಸ್ಲಾಗೆ ಯಶಸ್ಸಿನ ಸಾಧ್ಯತೆಗಳು ತುಂಬಾ ಹೆಚ್ಚು. ಆದರೆ ನಮ್ಮ ದೇಶವು ಪ್ರಸ್ತುತ ಅನುಸರಿಸುತ್ತಿರುವ ಆಮದು ಸುಂಕಗಳ ಬಗ್ಗೆ ಟೆಸ್ಲಾಗೆ ಅಸಂತೃಪ್ತಿಯಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಗೆ ತಮ್ಮ ಕಾರುಗಳನ್ನು ಬಿಡುಗಡೆ ಮಾಡುವ ಕುರಿತು ಕಂಪನಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

ಬುಕಿಂಗ್ ಮೊತ್ತವನ್ನು ಮರುಪಾವತಿಸಲು ಒತ್ತಾಯ
ಆರು ವರ್ಷಗಳ ಹಿಂದೆ ಟೆಸ್ಲಾ ಮಾಡೆಲ್ 3 ಕಾರನ್ನು ಬುಕ್ ಮಾಡಿದ ಭಾರತೀಯ ಗ್ರಾಹಕರು ತಮ್ಮ ಹಣವನ್ನು ಮರುಪಾವತಿಸುವಂತೆ ಕೇಳುತ್ತಿದ್ದಾರೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಟೆಸ್ಲಾ ಮಾಡೆಲ್ 3 ಅನ್ನು ಬುಕ್ ಮಾಡಿದ ಅನೇಕ ಭಾರತೀಯ ಗ್ರಾಹಕರು ಈಗ ಮರುಪಾವತಿಯನ್ನು ಬಯಸುತ್ತಿದ್ದಾರೆ.

ತಾವು ಮೋಸ ಹೋಗಿದ್ದೇವೆ ಎಂದು ಅರಿತುಕೊಳ್ಳಲು ಆರು ವರ್ಷ ಬೇಕಾಯಿತು ಎಂದು ಕೆಲವರು ಹೇಳುತ್ತಿದ್ದಾರೆ, ಇಂತಹ ಪ್ರತಿಷ್ಠಿತ ಕಂಪನಿಗಳು ತಮ್ಮನ್ನು ತಾವು ಮೋಸಗೊಳಿಸುತ್ತವೆ ಎಂದು ಊಹಿಸಿರಲಿಲ್ಲ. ಟೆಸ್ಲಾ ಕಾರುಗಳನ್ನು ಬುಕ್ ಮಾಡಿದ ಗ್ರಾಹಕರು ಮರುಪಾವತಿಗಾಗಿ ಕಂಪನಿಗೆ ಹಲವಾರು ಬಾರಿ ಮೇಲ್ ಮಾಡಬೇಕಾಗಿತ್ತು, ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕಂಪನಿಯು ಕಳೆದ ವರ್ಷ ಕೆಲವು ಗ್ರಾಹಕರಿಗೆ ಮರುಪಾವತಿ ಮಾಡಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಸಲಹೆ
ಕಳೆದ ವರ್ಷ ಬೆಂಗಳೂರಿನಲ್ಲಿ ಟೆಸ್ಲಾ ತನ್ನ ಕಚೇರಿಯನ್ನು ತೆರೆಯುವುದರೊಂದಿಗೆ, ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವರದಿಯಾಗಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ 2021ರ ಆರಂಭದಿಂದ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದರು.

ಆದರೆ ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂದು ಟೆಸ್ಲಾ ನಂತರ ಹೇಳಿತು. ಭಾರತಕ್ಕೆ ಆಮದು ಮಾಡಿಕೊಳ್ಳುವ ವಿದೇಶಿ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೇಳಿದೆ. ಇತರ ಕಂಪನಿಗಳಿಗೆ ಅನ್ವಯಿಸುವ ಅದೇ ಪ್ರಯೋಜನಗಳು ಟೆಸ್ಲಾಗೆ ಅನ್ವಯಿಸುತ್ತವೆ. ಈ ವಿಷಯದಲ್ಲಿ ಯಾವುದೇ ವಿಶೇಷ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೆಸ್ಲಾ ಮತ್ತು ಭಾರತ ಸರ್ಕಾರದ ನಡುವೆ ಸುಮಾರು ಒಂದು ವರ್ಷದಿಂದ ಮಾತುಕತೆಗಳು ನಡೆಯುತ್ತಿವೆ. ಭಾರತ ಸರ್ಕಾರದ ಪ್ರಕಾರ, ಟೆಸ್ಲಾ ನಮ್ಮ ದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವುದರಿಂದ ಈ ದೇಶ ಆರ್ಥಿಕತೆ ಬಲಗೊಳ್ಳುವುದರ ಜೊತೆಗೆ ಉದ್ಯೋಗವಕಾಶಗಳು ಹೆಚ್ಚಲಿವೆ.

ಟೆಸ್ಲಾ ಪ್ರಕಾರ, ನಮ್ಮ ನೆರೆಯ ಚೀನಾದಲ್ಲಿ ತಯಾರಾದ ಕಾರುಗಳನ್ನು ಆಮದು ಮಾಡಿಕೊಳ್ಳುವುದರಿಂದ ಕಂಪನಿಯ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ ಮತ್ತು ಎರಡು ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗುತ್ತದೆ ಎಂದು ಅಮೆರಿಕಾ ಕಂಪನಿ ಲೆಕ್ಕಾಚಾರ ಹಾಕಿದೆ.

ಭಾರತದಲ್ಲಿ ಸ್ಥಾವರ ಸ್ಥಾಪಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳದ ಟೆಸ್ಲಾ, ಚೀನಾದಲ್ಲಿ ತನ್ನ ಸ್ಥಾವರಗಳನ್ನು ವಿಸ್ತರಿಸಲು ಮುಂದಾಗಿದೆ. ಟೆಸ್ಲಾ ಈಗಾಗಲೇ ಚೀನಾದ ಶಾಂಘೈನಲ್ಲಿ ಸ್ಥಾವರವನ್ನು ಹೊಂದಿದ್ದು, ಇದೀಗ ಟೆಸ್ಲಾ ಸ್ಥಾವರದ ಪಕ್ಕದಲ್ಲಿ ಮತ್ತೊಂದು ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಟೆಸ್ಲಾ ನವೆಂಬರ್ 2021 ರಲ್ಲಿ $ 200 ಮಿಲಿಯನ್ ಹೂಡಿಕೆಯೊಂದಿಗೆ ಶಾಂಘೈನಲ್ಲಿ ತನ್ನ ಕಾರ್ಖಾನೆಯನ್ನು ವಿಸ್ತರಿಸುವುದಾಗಿ ಘೋಷಿಸಿತು. ಏಷ್ಯಾದ ಮಾರುಕಟ್ಟೆಗಳಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೊಸ ಸ್ಥಾವರವು ಸಹಾಯ ಮಾಡುತ್ತದೆ. ಕಾರ್ಖಾನೆಯ ನಿರ್ಮಾಣ ಪೂರ್ಣಗೊಂಡ ನಂತರ ಪ್ರತಿ ವರ್ಷ ಸ್ಥಾವರದಿಂದ ಒಂದು ಮಿಲಿಯನ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.