ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ

ಮಧ್ಯಮ ವರ್ಗದ ಜನರಿಗೆ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಸ್ವಂತ ಕಾರನ್ನಾದರೂ ಖರೀದಿಸುವ ಕನಸಿರುತ್ತದೆ. ಇದಕ್ಕಾಗಿ ಸಣ್ಣ ಮೊತ್ತದ ಹಣವನ್ನು ಉಳಿಸುವ ಅನೇಕ ಜನರನ್ನು ನಾವು ನೋಡಿರುತ್ತೇವೆ. ಇಂತವರು ಕಾರು ಇರುವ ಬೆಲೆಗಿಂತ ಕಡಿಮೆಗೆ ಸಿಗಲಿದೆಯೇ ಎಂದು ಹಲವರನ್ನು ವಿಚಾರಿಸುತ್ತಾರೆ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಈ ವೇಳೆ ಕೆಲವರು ಬಗೆಬಗೆಯ ಮಾತುಗಳನ್ನು ಹೇಳಿ ನೆಪಗಳನ್ನು ಹುಟ್ಟುಹಾಕುತ್ತಾರೆ. ಹೀಗೆ ಮಾಡಿ ಕಡಿಮೆ ಬೆಲೆಗೆ ಸಿಗುತ್ತದೆ, ಹಾಗೆ ಮಾಡಿ ರಿಯಾಯಿತಿ ಸಿಗುತ್ತದೆ ಎಂಬೆಲ್ಲಾ ತಪ್ಪು ಮಾಹಿತಿ ನೀಡುತ್ತಾರೆ. ಇವೆಲ್ಲವೂ ವಾಸ್ತವಕ್ಕೆ ತುಂಬಾ ದೂರ. ಅಲ್ಲದೇ ಯಾವುದಕ್ಕೂ ನಂಬುವಂತಹ ಸಾಕ್ಷ್ಯಾಧಾರಗಳು ಸಹ ಇರುವುದಿಲ್ಲ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ನಮ್ಮಲ್ಲಿ ಹೆಚ್ಚಿನವರು ಇವೆಲ್ಲವನ್ನೂ ನಂಬಿ ಕಾರು ಕೊಳ್ಳಲು ಮುಂದಾಗುತ್ತಾರೆ. ಆದರೆ ಶೋ ರೂಂನಲ್ಲಿ ಯಾವುದೇ ರಿಯಾಯಿತಿ ಅಥವಾ ಗ್ರಾಹಕ ಊಹಿಸಿಕೊಂಡು ಬಂದವುಗಳಿಗೆ ಯಾವುದೇ ತೃಪ್ತಿಕರ ಸಮಾಧಾನ ಸಿಗುವುದಿಲ್ಲ. ಇಂತಹ ಸುದ್ದಿ ಸುಳ್ಳಾದರೂ ಅನೇಕರು ಅದನ್ನೇ ನಂಬುತ್ತಾರೆ. ಹಾಗಾಗಿ ಗ್ರಾಹಕರು ಎಚ್ಚರ ವಹಿಸಲು ಈ ಲೇಖನದಲ್ಲಿ ಕಾರನ್ನು ಖರೀದಿಸುವಾಗ ಪ್ರಚೋದಿಸುವ ಕೆಲವು ವಂಚನೆಗಳನ್ನು ತಿಳಿಸಿದ್ದೇವೆ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ತಿಂಗಳ ಕೊನೆಯಲ್ಲಿ ಕಾರು ಖರೀದಿಸಿದರೆ ಲಾಭ

ತಿಂಗಳ ಕೊನೆಯಲ್ಲಿ ಕಾರು ಖರೀದಿಸಿದರೆ ಉತ್ತಮ ಲಾಭ ಎಂದು ಹೇಳಲಾಗುತ್ತದೆ. ಕಾರು ಮಾರಾಟ ಕೇಂದ್ರಗಳು ಪ್ರತಿ ತಿಂಗಳು ಮಾರಾಟ ಗುರಿಯನ್ನು ಹೊಂದಿರುತ್ತವೆ. ಅವರು ಆಗಾಗ್ಗೆ ಆ ಗುರಿಯನ್ನು ಪೂರ್ಣಗೊಳಿಸುವುದಿಲ್ಲ. ಹೀಗೆ ತಿಂಗಳಾಂತ್ಯದಲ್ಲಿ ಕಾರನ್ನು ಕೊಂಡರೆ ಹೇಗೋ ಕಾರನ್ನು ಮಾರಲು ಇರುವ ಹಣವನ್ನು ಕಡಿಮೆ ಮಾಡುತ್ತಾರೆ. ಹಾಗಾಗಿ ಬೇರೆ ದಿನಗಳಿಗಿಂತ ತಿಂಗಳಾಂತ್ಯದಲ್ಲಿ ಕಾರು ಕೊಂಡರೆ ನಮಗೆ ಕಡಿಮೆ ಸಿಗುತ್ತದೆ ಎನ್ನುತ್ತಾರೆ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಆದರೆ ವಾಸ್ತವದಲ್ಲಿ ಕಾರುಗಳ ಬೆಲೆಯಲ್ಲಿ ರಿಯಾಯಿತಿ ನೀಡುವ ಅಧಿಕಾರ ವಿತರಕರು ಅಥವಾ ಅದರ ಉದ್ಯೋಗಿಗಳಿಗೆ ಇರುವುದಿಲ್ಲ. ಇವುಗಳನ್ನು ನಂಬಿ ತಿಂಗಳ ಅಂತ್ಯದವರೆಗೆ ಕಾಯುವುದು ಮೂರ್ಖತನ. ಇಂತಹ ಹೇಳಿಕೆಗಳನ್ನು ನಂಬಿ ಗ್ರಾಹಕರು ಮೋಸಹೋಗಬಾರದು.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಅಂಗಡಿ ಮುಚ್ಚುವ ಸಮಯದಲ್ಲಿ ಒಪ್ಪಂದ

ಶೋರೂಂ ಮುಚ್ಚುವ ವೇಳೆಗೆ ಬುಕ್ಕಿಂಗ್ ಮಾಡಲು ಹೋದರೆ ಹಣ ಉಳಿಸಬಹುದು ಎಂದು ಕಾರ್ ಶೋರೂಂಗಳು ತಿಳಿಸುತ್ತವೆ. ಅದೇನೆಂದರೆ ಅದರ ಉದ್ಯೋಗಿಗಳು ಶೋರೂಂ ಮುಚ್ಚಿ ಮನೆಗೆ ಹೋಗುವ ಆತುರದಲ್ಲಿ ಆದಷ್ಟು ಬೆಲೆ ಇಳಿಸಿದರೆ, ಮಾತುಕತೆ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಇದು ಶುದ್ಧ ಸುಳ್ಳು ಮೊದಲೇ ಹೇಳಿದಂತೆ ಬೆಲೆ ಕಡಿಮೆ ಮಾಡುವ ಅಧಿಕಾರ ನೌಕರರು ಅಥವಾ ವಿತರಕರಿಗೆ ಇಲ್ಲ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಅವರು ಲಾಭವನ್ನು ಕಡಿಮೆ ಮಾಡಬಹುದು. ಆದರೆ ನೀವು ಲಕ್ಷಂತರ ರೂ. ನೀಡಿ ಖರೀದಿಸುವ ಕಾರುಗಳ ಮೇಲೆ ಸಾವಿರ ರೂ. ಕಡಿತಗೊಳಿಸುವುದು ಅನಗತ್ಯ. ಈ ವಿಧಾನದಲ್ಲಿ ಇನ್ನೊಂದು ನಷ್ಟವೂ ಇದೆ. ಈ ಸಮಯದಲ್ಲಿ ಹೋದರೆ ಸಿಬ್ಬಂದಿ ಮನೆಗೆ ಹೋಗುವ ಆತುರದಲ್ಲಿರುತ್ತಾರೆ. ಆದ್ದರಿಂದ ನೀವು ಖರೀದಿ ಮಾಡುವಾಗ ಸೂಕ್ತವಾದ ಔಪಚಾರಿಕತೆಯನ್ನು ಮಾಡದೆ ತಪ್ಪುಗಳನ್ನು ಮಾಡಬಹುದು. ಆದ್ದರಿಂದ ಈ ಕಲ್ಪನೆಯನ್ನು ಬಿಟ್ಟುಬಿಡಿ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಮಳೆಗಾಲದಲ್ಲಿ ಬೆಲೆಗಳು ಕುಸಿಯುತ್ತವೆ

ಕಾರು ಶೋರೂಂಗಳು ಗ್ರಾಹಕರಿಲ್ಲದೆ ಖಾಲಿಯಾಗಿವೆ, ಅದರಲ್ಲೂ ಮಳೆಗಾಲದಲ್ಲಿ ಜನರು ಹೆಚ್ಚು ಹೊರಗೆ ಬರುವುದಿಲ್ಲ. ಆ ಸಮಯದಲ್ಲಿ ಶೋರೂಂ ಸಿಬ್ಬಂದಿ ಹೇಗೋ ದಿನದ ಟಾರ್ಗೆಟ್ ಹಿಡಿಯಲು ಕಾರನ್ನು ಮಾರಾಟ ಮಾಡಬೇಕೆಂಬ ಹುಮ್ಮಸ್ಸಿನಲ್ಲಿರುತ್ತಾರೆ. ಹಾಗಾಗಿ ಅಲ್ಲಿಗೆ ಹೋಗಿ ಕಾರನ್ನು ಕೊಂಡರೆ ಬೆಲೆ ಕಡಿಮೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಯಿದೆ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಅದು ಸುಳ್ಳು. ಸಿಬ್ಬಂದಿಯಿಂದ ಕಾರಿನ ಬೆಲೆ ಕಡಿಮೆ ಮಾಡಲು ಅಸಾಧ್ಯ. ಆದರೆ ಮಳೆಗಾಲದಲ್ಲಿ ವಿತರಕರು ಅಥವಾ ಕಾರು ತಯಾರಕರು ಕೊಡುಗೆಗಳನ್ನು ಘೋಷಿಸಬಹುದು. ಆ ಆಫರ್‌ಗಳಲ್ಲಿ ಕಾರನ್ನು ಖರೀದಿಸುವುದನ್ನು ಬಿಟ್ಟರೆ, ಮಳೆ ಬರುತ್ತಿದೆ ಎಂಬ ಕಾರಣಕ್ಕೆ ಬೇರೆ ಗ್ರಾಹಕರು ಇಲ್ಲದ ಕಾರಣ ಅಥವಾ ಟಾರ್ಗೆಟ್ ಹಿಡಿಯಬೇಕೆಂಬ ಕಾರಣಕ್ಕೆ ಕಾರನ್ನು ಕಡಿಮೆ ಬೆಲೆಗೆ ಮಾರುವುದಿಲ್ಲ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಸಂಪೂರ್ಣ ಹಣದಿಂದ ಕಾರಿಗೆ ಡಿಸ್ಕೌಂಟ್

ಅನೇಕ ಖರೀದಿದಾರರು ಭಾರತದಾದ್ಯಂತ ಕಾರನ್ನು ಪೂರ್ಣ ಹಣ ನೀಡಿ ಖರೀದಿಸುವುದಿಲ್ಲ. ಬದಲಿಗೆ ಅವರು ವಾಹನ ಸಾಲ ಅಥವಾ ಇತರ ಸೌಲಭ್ಯಗಳನ್ನು ಬಳಸಿಕೊಂಡು ಕಾರುಗಳನ್ನು ಖರೀದಿಸುತ್ತಾರೆ. ಈ ವೇಳೆ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಕಾರನ್ನು ಖರೀದಿಸಿದರೆ ಡಿಸ್ಕೌಂಟ್ ನೀಡುತ್ತಾರೆ ಎಂದು ನಂಬುತ್ತಾರೆ. ಇದು ಕೂಡ ಸುಳ್ಳು. ಭಾರತದಲ್ಲಿ 50,000 ರೂ.ಗಿಂತ ಹೆಚ್ಚಿನ ಮೊತ್ತದೊಂದಿಗೆ ನಗದು ರೂಪದಲ್ಲಿ ಖರೀದಿಸಲಾಗುವುದಿಲ್ಲ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಶೋರೂಮ್‌ಗಳು ಅದನ್ನು ಸ್ವೀಕರಿಸುವುದಿಲ್ಲ. ಆದರೆ ಆನ್‌ಲೈನ್ ಬ್ಯಾಂಕಿಂಗ್, ಚೆಕ್ ವಹಿವಾಟು ಮತ್ತು ಇತರ ವಿಧಾನಗಳ ಮೂಲಕ ಕಾರನ್ನು ಮಾರಾಟ ಮಾಡುತ್ತವೆ. ಹೀಗೆ ಮಾಡುವುದರಿಂದ ಬೆಲೆ ಕಡಿಮೆಯಾಗುವುದಿಲ್ಲ. ಸಾಲ ಪಾವತಿಸಿದರೂ, ಪಾವತಿಸದಿದ್ದರೂ ವಾಹನದ ಬಿಲ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಅಡಮಾನ ಸಾಲದೊಂದಿಗೆ ಸಂಪೂರ್ಣ ಬಡ್ಡಿಯನ್ನು ಪಾವತಿಸುವುದನ್ನು ತಪ್ಪಿಸಬಹುದು.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಕೆಂಪು ಕಾರಿಗೆ ಹೆಚ್ಚಿನ ವಿಮೆ ಇದೆಯೇ?

ವಿಮಾ ಕಂಪನಿಗಳು ಇತರ ಕಾರುಗಳಿಗಿಂತ ಕೆಂಪು ಕಾರಿಗೆ ಹೆಚ್ಚು ಶುಲ್ಕ ವಿಧಿಸುತ್ತವೆ ಎಂಬ ಸುಳ್ಳು ವದಂತಿಗಳು ಇವೆ. ಇದು ಸುಳ್ಳು, ಕಾರಿನ ಮಾದರಿ, ವಯಸ್ಸು, ಎಂಜಿನ್ ಗಾತ್ರ, ಯಾವ ವರ್ಷ ಖರೀದಿಸಲಾಗಿದೆ, ಪ್ರಕಾರದ ವೈಶಿಷ್ಟ್ಯಗಳನ್ನು ಮಾತ್ರ ನೋಡಲಾಗುತ್ತದೆ. ಕಾರಿನ ಬಣ್ಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಇಂತಹ ನೆಪಗಳ ಹರಡುವಿಕೆಯಿಂದಾಗಿ ಅನೇಕ ಕಂಪನಿಗಳು ಕೆಂಪು ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ವಾಹನ ತಯಾರಕರು ತಮ್ಮ ಕಾರನ್ನು ಕೆಂಪು ಆಯ್ಕೆಯಿಲ್ಲದೆ ಬಿಡುಗಡೆ ಮಾಡಿದ ಘಟನೆಗಳೂ ಇವೆ.

 ಕಾರು ಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ: ಬಗೆ ಬಗೆಯ ಮಾತುಗಳಿಗೆ ಮರುಳಾಗಿದಿರಿ...

ಹಾಗಾಗಿ ಗ್ರಾಹಕರು ಇದನ್ನೆಲ್ಲಾ ನಂಬಬಾರದು, ಇವೆಲ್ಲವೂ ನಿಷ್ಪ್ರಯೋಜಕ. ಆದ್ದರಿಂದ ನಿಮ್ಮ ಗಮನವು ಯಾವ ಕಾರು ಖರೀದಿಸಬೇಕು ಎಂಬುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಯಾವ ಗುಣಮಟ್ಟದ ಕಾರು ಸೂಕ್ತವಾಗಿದೆ? ನಿಮ್ಮ ಕಾರನ್ನು ಖರೀದಿಸುವಾಗ ಏನನ್ನು ನೋಡಬೇಕು ಎಂಬುದರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ.

Most Read Articles

Kannada
English summary
These are myths you should be careful before buying car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X