2023ಕ್ಕೆ ಬಿಡುಗಡೆಯಾಗಲಿರುವ ಟಾಪ್ 12 CNG ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್​ಜಿ ಚಾಲಿತ ಕಾರುಗಳು ಭಾರೀ ಪ್ರಮಾಣದಲ್ಲಿ ಖ್ಯಾತಿಗಳಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆಯನ್ನು ದಾಖಲಿಸುತ್ತಿವೆ. ಕಡಿಮೆ ಇಂಧನ ವೆಚ್ಚವಿರುವುದರಿಂದ ಈ ರೀತಿಯ ಕಾರು ಖರೀದಿಸಲು ಗ್ರಾಹಕರು ಇಷ್ಟಪಡುತ್ತಿದ್ದು, ವಾಹನ ತಯಾರಕರು ಇಂತಹ ಮಾದರಿಗಳ ತಯಾರಿಕೆಯತ್ತ ಗಮನ ಹರಿಸುತ್ತಿದ್ದಾರೆ ಎಂದು ಹೇಳಬಹುದು.

ಸಿಎನ್​ಜಿ ವಾಹನಗಳು ಈ ವರ್ಷ ಸ್ಥಿರವಾದ ಬೆಳವಣಿಗೆಯನ್ನು ಕಂಡಿವೆ. ಇದಕ್ಕೆ ಸಾಕ್ಷಿ ಎಂಬನಂತೆ ಸಿಎನ್‌ಜಿ ಪ್ರಯಾಣಿಕ ಕಾರುಗಳು ಈಗ ಭಾರತದ ಒಟ್ಟು ಕಾರು ಮಾರಾಟದಲ್ಲಿ ಶೇಕಡ 10 ರಷ್ಟಿದೆ. ಇದು ಜನವರಿ 2022ರಲ್ಲಿ ಶೇಕಡ 8 ರಷ್ಟಿತ್ತು. ಹೊಸ ಕಾರುಗಳ ಬಿಡುಗಡೆ ಮತ್ತು ಡೀಸೆಲ್, ಪೆಟ್ರೋಲ್ ವಾಹನಗಳಿಗಿಂತ ಕಡಿಮೆ ಕಾರ್ಯಾಚರಣೆ ವೆಚ್ಚವು ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. 2023 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ 12 ಹೊಸ ಸಿಎನ್​ಜಿ ಕಾರುಗಳ ಪ್ರಮುಖವಾದ ವಿವರ ಇಲ್ಲಿದೆ.

ಮಾರುತಿ ಬ್ರೆಜ್ಜಾ (CNG):
2023ರ ಆರಂಭದಲ್ಲಿ ಮಾರುತಿ ಬ್ರೆಝಾ ಸಿಎನ್​ಜಿ ಕಾರು ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಮಾದರಿಯು 1.5L K15C ಪೆಟ್ರೋಲ್ ಎಂಜಿನ್ 87 bhp ಪವರ್ ಮತ್ತು 122Nm ಟಾರ್ಕ್‌ ಉತ್ಪಾದಿಸಲಿದ್ದು, ಸಿಎನ್​ಜಿ ಕಿಟ್, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಸಿಗಲಿದೆ ಎಂದು ವರದಿಯಾಗಿದೆ. ಹೀಗಾಗಿ, ಇದು ಭಾರತದ ಮೊದಲ ಸಿಎನ್​ಜಿ ಆಟೋಮೆಟಿಕ್ ಎಸ್‌ಯುವಿ ಆಗಲಿದ್ದು, ಸುಮಾರು 25-30km/kg ಮೈಲೇಜ್ ನೀಡಬಹುದು. ಸದ್ಯ ರೂ .7.99 ಲಕ್ಷ ಆರಂಭಿಕ ಬೆಲೆಯ ಮಾರುತಿ ಬ್ರೆಝಾ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಟಾಟಾ ಪಂಚ್/ಅಲ್ಟ್ರಾಜ್/ನಿಕ್ಸನ್ (CNG):
ಟಾಟಾ ಮೋಟಾರ್ಸ್ ತನ್ನ ಸಿಎನ್​ಜಿ ಮಾದರಿಗಳನ್ನು 2023 ರಲ್ಲಿ ಅಲ್ಟ್ರಾಜ್ ಸಿಎನ್​ಜಿ, ಪಂಚ್ ಸಿಎನ್​ಜಿ ಮತ್ತು ನಿಕ್ಸನ್ ಸಿಎನ್​ಜಿ ಬಿಡುಗಡೆಯೊಂದಿಗೆ ವಿಸ್ತರಿಸುವ ಸಾಧ್ಯತೆಯಿದೆ. ಪಂಚ್ ಸಿಎನ್​ಜಿ 1.2L ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಅಲ್ಟ್ರಾಜ್, ನಿಕ್ಸನ್ ಸಿಎನ್​ಜಿ 1.2L ಟರ್ಬೊ ಪೆಟ್ರೋಲ್ ಎಂಜಿನ್ ಜೊತೆ ಖರೀದಿಗೆ ಸಿಗಲಿದೆ. ಸಿಎನ್​ಜಿಗಳು ಪೆಟ್ರೋಲ್ ಮಾದರಿಗೆ ಹೋಲಿಕೆ ಮಾಡಿದರೆ 10 bhp-15 bhp ಕಡಿಮೆ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು.

ಹ್ಯುಂಡೈ ಕ್ರೆಟಾ/ವೆನ್ಯೂ/ಅಲ್ಕಾಜರ್ (CNG):
ಹ್ಯುಂಡೈ ಕ್ರೆಟಾ ಸಿಎನ್‌ಜಿ ಇಂಧನ ರೂಪಾಂತರವು 2023ರ ಆರಂಭದಲ್ಲಿ ಮಿಡ್-ಲೈಫ್ ಅಪ್‌ಡೇಟ್‌ನೊಂದಿಗೆ ಬರಲಿದೆ ಎಂದು ವರದಿಗಳಾಗಿವೆ. ಇದು ಖಚಿತವಾದರೆ ಕಾರು ತಯಾರಕರು, ಅಸ್ತಿತ್ವದಲ್ಲಿರುವ 1.4L ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಸ 1.5L ಟರ್ಬೊ ಪೆಟ್ರೋಲ್ ಎಂಜಿನ್ ಗೆ ಬದಲಾಯಿಸಬಹುದು. ಜೊತೆಗೆ ಸಿಎನ್‌ಜಿ ಕಿಟ್ ನೊಂದಿಗೆ ದೊರೆಯಲಿದೆ. ಇಷ್ಟೇ ಅಲ್ಲದೆ, ಹ್ಯುಂಡೈ ಕಂಪನಿ, ವೆನ್ಯೂ ಮತ್ತು ಅಲ್ಕಾಜರ್ ಎಸ್‌ಯುವಿಗಳ ಸಿಎನ್‌ಜಿ ಆವೃತ್ತಿಗಳನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.

ಕಿಯಾ ಸೊನೆಟ್/ಕ್ಯಾರೆನ್ಸ್ (CNG):
ಕಿಯಾ ಇಂಡಿಯಾವು 2023ರಲ್ಲಿ ಸೋನೆಟ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಕ್ಯಾರೆನ್ಸ್ ಎಂವಿಪಿಯನ್ನು ಸಿಎನ್‌ಜಿ ರೂಪಾಂತರದರಲ್ಲಿ ತರಬಹುದು. ಸೋನೆಟ್ ಕಾರನ್ನು 1.0L ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಬಹುದಾದರೂ, ಕ್ಯಾರೆನ್ಸ್ ಎಂವಿಪಿ 1.5L ಟರ್ಬೊ ಪೆಟ್ರೋಲ್ ಮೋಟಾರ್‌ನೊಂದಿಗೆ ಬರಬಹುದು. ಎರಡು ಮಾದರಿಗಳು ಪ್ರಸ್ತುತ ತಮ್ಮ ಪರೀಕ್ಷಾ ಹಂತದಲ್ಲಿವೆ. ಮುಂಬರುವ ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಸಿಎನ್‌ಜಿ ರೂಪಾಂತರಗಳ ವಿರುದ್ಧ ಸೋನೆಟ್ ಸಿಎನ್‌ಜಿ ಪ್ರತಿಸ್ಪರ್ಧಿ ಆಗಿ ನಿಲ್ಲಬಹುದು. ಕ್ಯಾರೆನ್ಸ್ ಸಿಎನ್‌ಜಿ, ಮಾರುತಿ ಎರ್ಟಿಗಾ ಸಿಎನ್‌ಜಿಗೆ ಪೈಪೋಟಿ ನೀಡಬಹುದು.

ಟೊಯೊಟಾ ಇನ್ನೋವಾ ಕ್ರಿಸ್ಟಾ (CNG):
ಮುಂದಿನ ವರ್ಷದಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ ನವೀಕರಣವನ್ನು ಪಡೆಯಲು ಸಿದ್ಧವಾಗಿದೆ. ಮಿಡ್-ಲೈಫ್ ಅಪ್‌ಡೇಟ್‌ನೊಂದಿಗೆ, ಕಾರು ತಯಾರಕರು 2.7L, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಿಎನ್‌ಜಿ ಕಿಟ್‌ನೊಂದಿಗೆ ಪರಿಚಯಿಸಬಹುದು. ಇದರಿಂದ ಖರೀದಿದಾರರನ್ನು ಆಕರ್ಷಿಸಬಹುದು ಎಂಬ ಉದ್ದೇಶವನ್ನು ಕಂಪನಿ ಹೊಂದಿದೆ. ಫೆಬ್ರವರಿ 2023ರಿಂದ ತಿಂಗಳಿಗೆ ಸುಮಾರು 2,000-2,500 ಹೊಸ ಇನ್ನೋವಾ ಕ್ರಿಸ್ಟಾವನ್ನು ತಯಾರಿಸುವ ಗುರಿಯನ್ನು ಟೊಯೊಟಾ ಕಂಪನಿ ಹೊಂದಿದೆ ಎಂದು ವರದಿಯಾಗಿದೆ.

ಸಿಟ್ರೋನ್ ಸಿ3 (CNG):
ಇತ್ತೀಚೆಗಷ್ಟೇ ಪರೀಕ್ಷೆ ನಡೆಸುವಾಗ ಕಂಡು ಬಂದಿದ್ದ ಸಿಟ್ರೋನ್ ಸಿ3 ಸಿಎನ್‌ಜಿ 2023ರ ಆರಂಭದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾದರಿಯು 1.2L ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಕಿಟ್‌ನೊಂದಿಗೆ ಬರಲಿದೆ. ಇದರ ಪವರ್ ಮತ್ತು ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಅದರ ICE-ಚಾಲಿತ ಆವೃತ್ತಿಗಿಂತ ಸ್ವಲ್ಪ ಕಡಿಮೆ ಇರುತ್ತದೆ. ಒಮ್ಮೆ ಈ ಸಿಟ್ರೋನ್ ಸಿ3 ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಟಾಟಾ ಟಿಯಾಗೋ ಸಿಎನ್‌ಜಿಗೆ ಭಾರೀ ಪೈಪೋಟಿ ನೀಡಲಿದೆ.

ಸ್ಕೋಡಾ ಕುಶಾಕ್ (CNG):
ಸ್ಕೋಡಾ ಇಂಡಿಯಾ ದೇಶದಲ್ಲಿ 'ಕುಶಾಕ್' ಸಿಎನ್‌ಜಿ ಪರೀಕ್ಷೆಯನ್ನು ಪ್ರಾರಂಭಿಸಿದೆ. ಅದರ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಈ ಮಾದರಿಯು 2023ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇದು ಶೀಘ್ರದಲ್ಲೇ ಲಾಂಚ್ ಆಗಲಿರುವ ಮಾರುತಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಲಿದೆ. ಸ್ಕೋಡಾ ಕುಶಾಕ್ ಸಿಎನ್‌ಜಿ 1.0L ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಸಾಧ್ಯತೆಯಿದ್ದು, ಪೆಟ್ರೋಲ್ ಮಾದರಿ ಬೆಲೆಗಿಂತ ಸುಮಾರು 1 ಲಕ್ಷ ರೂ. ಹೆಚ್ಚಿರಬಹುದು.

Most Read Articles

Kannada
English summary
Top 12 cng cars to be launched in 2023
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X