ಭಾರತದಲ್ಲಿನ ಟಾಪ್ 7 ಸೇಫ್ಟಿ ಎಸ್‌ಯುವಿಗಳು: ಮಹೀಂದ್ರಾ ಸ್ಕಾರ್ಪಿಯೊ Nಗೆ ರೇಟಿಂಗ್ ಎಷ್ಟು?
ಪ್ರತಿಯೊಬ್ಬ ಹೊಸ ಕಾರು ಖರೀದಿ ಮಾಡುವವರೂ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಗ್ಲೋಬಲ್ ಎನ್‌ಸಿಎಪಿಯು ಕಾರುಗಳ ಸುರಕ್ಷತೆಗೆ ಸ್ಟಾರ್ ರೇಟಿಂಗ್ ನೀಡುವ ಮೂಲಕ ತಯಾರಕರು ಹಾಗೂ ಗ್ರಾಹಕರಿಗೆ ಕಣ್ಣು ತೆರೆಸುತ್ತದೆ. ಪ್ರಸ್ತುತ ಸ್ಕೋರ್ ಚಾರ್ಟ್‌ನಲ್ಲಿ ಮೇಡ್-ಇನ್-ಇಂಡಿಯಾ ಕಾರುಗಳು ಮುಂಚೂಣಿಯಲ್ಲಿದ್ದು, ದೇಶದಲ್ಲಿ ಲಭ್ಯವಿರುವ ಟಾಪ್ 7 ಸೇಫ್ಟಿ ಎಸ್‌ಯುವಿಗಳ ಬಗ್ಗೆ ತಿಳಿದುಕೊಳ್ಳೋಣ.
ವೋಕ್ಸ್‌ವ್ಯಾಗನ್ ಟೈಗನ್:
ಈ ಪಟ್ಟಿಯಲ್ಲಿರುವ ಮೊದಲ ಎಸ್‌ಯುವಿ ವೋಕ್ಸ್‌ವ್ಯಾಗನ್ ಟೈಗನ್ ಆಗಿದೆ. ಇದು ವಯಸ್ಕರ ರಕ್ಷಣೆ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಗರಿಷ್ಠ 34 ಅಂಕಗಳಿಗೆ 29.64 ಅಂಕಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 42 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಸೀಟ್ ಬೆಲ್ಟ್‌ಗಳು, ಮುಂಭಾಗದ ಸೀಟ್‌ಗಳಿಗೆ ಸೀಟ್-ಬೆಲ್ಟ್ ರಿಮೈಂಡರ್, ಆರು ಏರ್‌ಬ್ಯಾಗ್, ರೋಲ್-ಓವರ್ ಪ್ರೊಟೆಕ್ಷನ್, ಮಕ್ಕಳ ರಕ್ಷಣೆಗಾಗಿ ISOFIX, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಕೋಡಾ ಕುಶಾಕ್:
ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಸ್ಕೋಡಾ ಕುಶಾಕ್ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 34 ಅಂಕಗಳಿಗೆ 29.64 ಅಂಕಗಳನ್ನು ಗಳಿಸಿದೆ. ಈ ಎಸ್‌ಯುವಿ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 42 ಅಂಕಗಳನ್ನು ಗಳಿಸಿದೆ. ಮುಂಭಾಗದ ಆಸನಗಳಿಗೆ ಸೀಟ್-ಬೆಲ್ಟ್ ರಿಮೈಂಡರ್, ಆರು ಏರ್‌ಬ್ಯಾಗ್, ರೋಲ್-ಓವರ್ ಪ್ರೊಟೆಕ್ಷನ್, ಮಕ್ಕಳ ರಕ್ಷಣೆಗಾಗಿ ISOFIX, ಎಬಿಎಸ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಸಿಸ್ಟಮ್, ಮಲ್ಟಿ ಕೊಲಿಶನ್ ಬ್ರೇಕಿಂಗ್ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೊ ಎನ್:
ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿ 5 ಸ್ಟಾರ್ ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರಮವಾಗಿ 29.25/34 ಮತ್ತು 28.93/49 ಅಂಕಗಳನ್ನು ಗಳಿಸಿದೆ. ಸುರಕ್ಷತಾ ವಿಚಾರಕ್ಕೆ ಬಂದರೆ ನಾಲ್ಕು ಡಿಸ್ಕ್ ಬ್ರೇಕ್‌ಗಳು, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, 360-ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲ್ಲಾ 4 ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಮಹೀಂದ್ರಾ XUV 700:
ಈ ಮಹೀಂದ್ರಾ XUV 700 ವಯಸ್ಕರ ರಕ್ಷಣೆ ವಿಭಾಗದಲ್ಲಿ ಐದು ಸ್ಟಾರ್ (16.03/17) ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ (41.66/49) ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಸುರಕ್ಷತಾ ವಿಚಾರಕ್ಕೆ ಬಂದರೆ ABS ಜೊತೆಗೆ EBD ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್, ಏರ್‌ಬ್ಯಾಗ್‌ಗಳು (ಒಟ್ಟು 7), ESP, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಜೊತೆಗೆ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ ಎಂದು ಹೇಳಬಹುದು.
ಮಹೀಂದ್ರಾ XUV 300:
ಇದು ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದ ಮಹೀಂದ್ರಾ ಕಂಪನಿಯ ಮೊದಲ ಸಬ್-4-ಮೀಟರ್ ಎಸ್‌ಯುವಿ ಆಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಐದು ಸ್ಟಾರ್ (ಸ್ಕೋರಿಂಗ್ 16.42/17) ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ ನಾಲ್ಕು ಸ್ಟಾರ್ (ಸ್ಕೋರಿಂಗ್ (37.44/49) ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ, XUV 300 ಆರು ಏರ್‌ಬ್ಯಾಗ್‌ಗಳು, ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್, EBD, ಮುಂಭಾಗ ಮತ್ತು ಹಿಂಭಾಗದ ಫಾಗ್ ಲೈಟ್ಸ್ ಅನ್ನು ಹೊಂದಿದ್ದು, ರೂ 8.41 ಲಕ್ಷ ಆರಂಭಿಕ ಬೆಲೆಯಿದೆ.
ಟಾಟಾ ನೆಕ್ಸಾನ್:
ಟಾಟಾದ ಮೊದಲ ಎಸ್‌ಯುವಿ ಗ್ಲೋಬಲ್ NCAPಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ ಮೊದಲ ಮೇಡ್ ಇನ್ ಇಂಡಿಯಾ ಕಾರ್ ನೆಕ್ಸಾನ್ ಆಗಿದೆ. ಅದು ವಯಸ್ಕರ ರಕ್ಷಣೆ ವಿಭಾಗದಲ್ಲಿ (16.06/17) ಪಡೆದುಕೊಂಡು ಐದು ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಆದರೆ, ನೆಕ್ಸಾನ್ ಮಕ್ಕಳ ರಕ್ಷಣೆ ವಿಭಾಗದಲ್ಲಿ ಉತ್ತಮ ಸ್ಕೋರ್ ಮಾಡಲಿಲ್ಲ. ಕೇವಲ ಮೂರು ಸ್ಟಾರ್ (25/49) ಪಡೆದುಕೊಂಡಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎರಡು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್, ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, ರೂ.7.70 ಲಕ್ಷ ಆರಂಭಿಕ ಬೆಲೆ ಇದೆ.
ಮಹೀಂದ್ರಾ ಥಾರ್:
ಈ ಎಸ್‌ಯುವಿ ವಯಸ್ಕರ ರಕ್ಷಣೆ ವಿಭಾಗದಲ್ಲಿ ನಾಲ್ಕು ಸ್ಟಾರ್ (ಸ್ಕೋರಿಂಗ್ 12.52/17) ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ ನಾಲ್ಕು ಸ್ಟಾರ್ (ಸ್ಕೋರಿಂಗ್ (41.11/49) ಪಡೆದುಕೊಂಡಿದೆ. ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕ್ರ್ಯಾಶ್- ಸುರಕ್ಷತಾ ಕಂಪ್ಲೈಂಟ್ ಬಾಡಿ ಮತ್ತು ಚಾಸಿಸ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್, ಪ್ಯಾನಿಕ್ ಬ್ರೇಕಿಂಗ್ ಸಿಗ್ನಲ್, ರೋಲ್-ಕೇಜ್ ಪ್ರೊಟೆಕ್ಷನ್, ಓವರ್-ಸ್ಪೀಡ್ ವಾರ್ನಿಂಗ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿದೆ ಎಂದು ಹೇಳಬಹುದು.


Click it and Unblock the Notifications








