Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಇನೋವಾ ಎಲೆಕ್ಟ್ರಿಕ್ ಎಂಪಿವಿ ಅನಾವರಣಗೊಳಿಸಿದ ಟೊಯೊಟಾ
ವಿಶ್ವಾದ್ಯಂತ ಇವಿ ವಾಹನಗಳ ಉತ್ಪಾದನೆ ಮೇಲೆ ಪ್ರಮುಖ ಕಾರು ತಯಾರಕ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಮುಂಚೂಣಿ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾರು ಕಂಪನಿಗಳು ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಅಂತಿಮ ಹಂತದ ಸಿದ್ದತೆಯಲ್ಲಿವೆ.

2030ರ ವೇಳೆಗೆ ಪ್ರಮುಖ ಕಾರು ತಯಾರಕ ಕಂಪನಿಗಳು ಕನಿಷ್ಠ ಶೇ.50 ರಷ್ಟು ಇವಿ ಮಾದರಿಗಳ ಮಾರಾಟ ಹೊಂದುವತ್ತ ಗಮನಹರಿಸುತ್ತಿದ್ದು, ವಿಶ್ವದ ನಂ.1 ಕಾರು ಉತ್ಪಾದನಾ ಕಂಪನಿಯಾಗಿರುವ ಟೊಯೊಟಾ ಕಂಪನಿಯು ಕೂಡಾ ಶೀಘ್ರದಲ್ಲಿಯೇ ತನ್ನ ಪ್ರಮುಖ ಇವಿ ಮಾದರಿಗಳನ್ನು ರಸ್ತೆಗಿಳಿಸುವ ಸಿದ್ದತೆಯಲ್ಲಿದೆ.

ಟೊಯೊಟಾ ಕಂಪನಿಯು ಸದ್ಯ ಪ್ರಮುಖ ಮೂರು ಕಾರು ಮಾದರಿಗಳ ಇವಿ ಆವೃತ್ತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಮಾದರಿಯಲ್ಲೂ ಎಲೆಕ್ಟ್ರಿಕ್ ಆವೃತ್ತಿಯ ಬಿಡುಗಡೆಯನ್ನು ಖಚಿತಪಡಿಸಿದೆ.

ಇತ್ತೀಚೆಗೆ ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಇಂಟರ್‌ನ್ಯಾಷನಲ್ ಮೋಟಾರ್ ಶೋನಲ್ಲಿ ಟೊಯೊಟಾ ಕಂಪನಿಯು ಇನೋವಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರಿನ ಹೊರವಿನ್ಯಾಸದ ಹೊರತಾಗಿ ಕಂಪನಿಯು ಯಾವುದೇ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

ಅನಾವರಣಗೊಂಡಿರುವ ಇನೋವಾ ಇವಿ ಮಾದರಿಯು ಸಾಮಾನ್ಯ ಕಾರು ಮಾದಿರಿಯ ಹೋಲಿಕೆ ಹೊಂದಿದ್ದರೂ ವಿಭಿನ್ನವಾದ ತಾಂತ್ರಿಕ ಅಂಶಗಳು ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಅವಳವಡಿಕೆಯೊಂದಿಗೆ ಹೊಸ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಜನಪ್ರಿಯತೆಯನ್ನು ಸಾಧಿಸಲಿದೆ.

ಸಾಮಾನ್ಯ ಇನೋವಾ ಮಾದರಿಯೊಂದಿಗೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಟೊಯೊಟಾ ಕಂಪನಿಯು ಕಾಲ ಚಕ್ರಕ್ಕೆ ಅನುಗುಣವಾಗಿ ಇದೀಗ ಎಲೆಕ್ಟ್ರಿಕ್ ಮಾದರಿಯೊಂದಿಗೆ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಇನೋವಾ ಇವಿ ಅನಾವರಣಕ್ಕೂ ಮುನ್ನ ಟೊಯೊಟಾ ಕಂಪನಿಯು ಈ ಬಾರಿ ಇನೋವಾ ಹೈಬ್ರಿಡ್ ಮಾದರಿಯನ್ನು ಅನಾವರಣಗೊಳಿಸಲಿದೆ ಎನ್ನಲಾಗಿತ್ತು. ಆದರೆ ಕಂಪನಿಯು ಅಂತಿಮವಾಗಿ ಇನೋವಾ ಪ್ಯೂರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.

ಹೊಸ ಕಾರಿನ ವಿನ್ಯಾಸ ಮತ್ತು ಸ್ಟೈಲಿಂಗ್ ವಿಷಯದಲ್ಲಿ ಇದು ಸ್ಟ್ಯಾಂಡರ್ಡ್ ಇನ್ನೊವಾ ಕ್ರಿಸ್ಟಾಗೆ ಹೋಲಿಕೆಯಾದರೂ ಸಾಮಾನ್ಯ ಮಾದರಿಯಿಂದ ಇವಿ ಮಾದರಿಗಾಗಿ ಪ್ರತ್ಯೇಕಿಸಲು ಕೆಲವು ಸ್ಪಷ್ಟವಾದ ಬದಲಾವಣೆಗಳನ್ನು ನೀಡಲಾಗಿದೆ.

ಹೊಸ ಕಾರಿನ ಮುಂಭಾಗದಲ್ಲಿ ನಯವಾದ ಸರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಸಾಮಾನ್ಯ ಮಾದರಿಯಲ್ಲಿಯೇ ಪ್ರಮುಖ ವಿನ್ಯಾಸಗಳನ್ನು ಹೊಂದಿದ್ದು, ಗ್ರಿಲ್ ಮತ್ತು ಮುಂಭಾಗದ ಬಂಪರ್ ಪ್ರಮುಖ ಆಕರ್ಷಕ ವಿನ್ಯಾಸಗಳಾಗಿವೆ.

ಮುಖ್ಯವಾಗಿ ಹೊಸ ಇವಿ ಕಾರಿನ ಮುಂಭಾಗದಲ್ಲಿ ರೇಡಿಯೇಟರ್ ಇಲ್ಲದಿರುವುದು ಪ್ರಮುಖವಾಗಿದ್ದು, ಇದು ಕಡಿಮೆ ವಾಯುಬಲವೈಜ್ಞಾನಿಕ ಗ್ರಿಲ್ ಅನ್ನು ಹೊಂದಿರುವುದು ಸ್ಪಷ್ಟವಾಗಿದೆ. ಎಂಯುವಿಯ ನಾಮಫಲಕವನ್ನು 'ಇನೋವಾ ಇವಿ' ಎಂದು ಬರೆಯಲಾಗಿದ್ದು, ಮೋಟಾರ್ ಮತ್ತು ಬ್ಯಾಟರಿಗೆ ಸಂಬಂಧಿಸಿದ ನಿಖರವಾದ ವಿವರಗಳು ಶೀಘ್ರದಲ್ಲಿಯೇ ಬಿಡುಗಡೆಯಾಗಲಿವೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಇನೋವಾ ಇವಿ?
ಸದ್ಯ ಕಾನ್ಸೆಪ್ಟ್ ಮಾದರಿಯನ್ನು ಮಾತ್ರ ಅನಾವರಣಗೊಳಿಸಿರುವ ಟೊಯೊಟಾ ಕಂಪನಿಯು ಖಂಡಿತವಾಗಿಯೂ ಭಾರತ ಸೇರಿದಂತೆ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಆದರೆ ಸದ್ಯಕ್ಕೆ ಅನಾವರಣಗೊಳಿಸಿರುವ ಹೊಸ ಮಾದರಿಯ ಮೇಲೆ ಇನ್ನು ಹಲವು ಅಧ್ಯಯನ್ನ ಕೈಗೊಳ್ಳಬಹುದಾಗಿದ್ದು, ಇನೋವಾ ಸೇರಿದಂತೆ ಇನ್ನು ಹಲವು ಇವಿ ಮಾದರಿಗಳ ಮೇಲೆ ಟೊಯೊಟಾ ಕಾರ್ಯ ನಿರ್ವಹಿಸುತ್ತಿದೆ.

ಹೊಸ ಎಲೆಕ್ಟ್ರಿಕ್ ಬಿಡುಗಡೆಗಾಗಿ ಯಾವುದೇ ಅವಸರದ ನೀತಿಯನ್ನು ಅನುಸರಿಸದ ಟೊಯೊಟಾ ಕಂಪನಿಯು ಹೊಸ ಉತ್ಪನ್ನಗಳ ಬಿಡುಗಡೆಗೂ ಮುನ್ನ ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಿದ್ದು, ಹೊಸ ಉತ್ಪನ್ನವು ಗುಣಮಟ್ಟ, ಸುರಕ್ಷತೆ ಮತ್ತು ದಕ್ಷತೆ ವಿಚಾರದಲ್ಲಿ ಪರಿಪೂರ್ಣಗೊಂಡ ಮಾದರಿಗಳನ್ನು ಮಾತ್ರವೇ ಬಿಡುಗಡೆ ಮಾಡಲಿದೆ.

ಹೀಗಾಗಿ ಹೊಸ ಕಾರು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಬಹುದಾದ ಸಾಧ್ಯತೆ ಕಡಿಮೆಯಿದ್ದು, ಒಟ್ಟಿನಲ್ಲಿ ಹೊಸ ಕಾರು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತವು ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಹೊಸ ಅಧ್ಯಾಯ ಆರಂಭಿಸುವ ತನಕದಲ್ಲಿದೆ.