Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Sports
ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್ಗೆ ವೈಟ್ವಾಶ್ ಮುಖಭಂಗ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಬೆಲೆ ಏರಿಕೆ- ಜನಪ್ರಿಯ ಎಂಪಿವಿ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿ ಮತ್ತಷ್ಟು ದುಬಾರಿ!
ಟೊಯೊಟಾ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದ್ದು, ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಮಾದರಿಯ ಬೆಲೆಯಲ್ಲೂ ಕೂಡಾ ಸಾಕಷ್ಟು ಹೆಚ್ಚಳವಾಗಿದೆ.

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯನ್ನು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.1ರಿಂದ ಶೇ.3 ರಷ್ಟು ಬೆಲೆ ಹೆಚ್ಚಿಸಿದ್ದು, ಹೊಸ ದರಪಟ್ಟಿಯಲ್ಲಿ ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯು ಮತ್ತಷ್ಟು ದುಬಾರಿಯಾಗಿ ಪರಿಣಮಿಸಿದೆ

ಹೊಸ ವರ್ಷದ ಆರಂಭದಲ್ಲಿ ಈಗಾಗಲೇ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ಈ ವರ್ಷದ ಎರಡನೇ ಬೆಲೆ ಏರಿಕೆ ಘೋಷಣೆ ಮಾಡಿದ್ದು, ಹೊಸ ಕಾರಿನ ಬೆಲೆ ಹೆಚ್ಚಳದೊಂದಿಗೆ ಕಂಪನಿಯು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಹೊಸ ವೆರಿಯೆಂಟ್‌ವೊಂದನ್ನು ಬಿಡುಗಡೆ ಮಾಡಿದೆ.

ಹೊಸ ದರಪಟ್ಟಿಯಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.1.50 ರಿಂದ ಶೇ.3.30 ರಷ್ಟು ಬೆಲೆ ಹೆಚ್ಚಿಸಲಾಗಿದ್ದು, ದರ ಏರಿಕೆ ನಂತರ ಹೊಸ ಕಾರಿನ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 36 ಸಾವಿರದಿಂದ ರೂ. 56 ಸಾವಿರದಷ್ಟು ದುಬಾರಿಯಾಗಿದೆ.

ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯು ದರ ಹೆಚ್ಚಳ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.45 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯು ರೂ. 25.60 ಲಕ್ಷ ಬೆಲೆ ಪಡೆದುಕೊಂಡಂತಾಗಿದೆ.

ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಜೆಡ್ಎಕ್ಸ್ ಮಾದರಿಯನ್ನು ಆಧರಿಸಿ ಟಾಪ್ ಎಂಡ್ ಮಾದರಿಯಲ್ಲಿ ಹೊಸದಾಗಿ 7 ಸೀಟರ್ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಜೆಡ್ಎಕ್ಸ್ 7 ಸೀಟರ್ ಆಟೋಮ್ಯಾಟಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 23.83 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ ಹೈ ಎಂಡ್ ಮಾದರಿಯಾಗಿ ಹೊಸ ಆವೃತ್ತಿಯು ಮಾರಾಟಗೊಳ್ಳಲಿದೆ.

ಬೆಲೆ ಏರಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಕಡ್ಡಾಯ ಸೇಫ್ಟಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರಿನ ದರ ಹೆಚ್ಚಿಸಲಾಗಿದೆ.

ಇನ್ನು ಹೊಸ ಕಾರಿನಲ್ಲಿ ಬಿಎಸ್-6 ಎಮಿಷನ್ ಜಾರಿ ನಂತರ ಪರಿಚಯಿಸಲಾದ ಎಂಜಿನ್ ಮಾದರಿಯೇ ಇದೀಗ 2022ರ ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇನೋವಾ ಕ್ರಿಸ್ಟಾ ಕಾರಿನಲ್ಲಿ ಗ್ರಾಹಕರು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಈ ತನಕವು ಎಂಪಿವಿ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಸದ್ಯ ಹೊಸ ತಲೆಮಾರಿನೊಂದಿಗೆ ಮಾರಾಟವಾಗುತ್ತಿರುವ ಇನೋವಾ ಕ್ರಿಸ್ಟಾ ಕಾರು 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹಳೆಯ ಆವೃತ್ತಿಗಿಂತಲೂ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಫೇಸ್‌ಲಿಫ್ಟ್ ಕಾರಿನ ಮುಂಭಾಗದ ವಿನ್ಯಾಸ ಮತ್ತು ಒಳಭಾಗದಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಕಾರಿನ ಹಿಂಭಾಗದ ವಿನ್ಯಾಸವನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಎಂಜಿನ್ ಆಯ್ಕೆಯು ಕೂಡಾ ಯಾವುದೇ ಬದಲಾವಣೆ ಪಡೆದುಕೊಂಡಿಲ್ಲ.