ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು ಗ್ಲಾಂಝಾ ಹ್ಯಾಚ್‌ಬ್ಯಾಕ್ ಮತ್ತು ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಬೆಲೆಗಳನ್ನು ಹೆಚ್ಚಿಸಲು ಟೊಯೊಟಾ ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಆಫ್-ಸೆಟ್ ಮಾಡಲು ಬೆಲೆಗಳ ಹೆಚ್ಚಳವು ಅಗತ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಖರೀದಿದಾರರ ಮೇಲಿನ ಪ್ರಭಾವವನ್ನು ಪರಿಗಣಿಸಿ ಒಟ್ಟಾರೆ ಬೆಲೆ ಹೆಚ್ಚಳವನ್ನು ಕಡಿಮೆ ಮಾಡಲಾಗಿದೆ. ಅಧಿಕೃತ ಹೇಳಿಕೆಯು ಹೆಚ್ಚಳದ ಪ್ರಮಾಣವನ್ನು ಉಲ್ಲೇಖಿಸದಿದ್ದರೂ, ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ ಬೆಲೆಗಳ ಹೆಚ್ಚಳವು ರೂ.2 ವರೆಗೆ ಇರುತ್ತದೆ ಎಂದು ಟೊಯೋಟಾ ನಮಗೆ ತಿಳಿಸಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಬೆಲೆಗಳನ್ನು ಪರಿಷ್ಕರಿಸಲು ಯೋಜಿಸುತ್ತಿದೆ ಎಂದು ಸೂಚಿಸಿದೆ, ಇದು ಮೇ 1, 2022 ರಿಂದ ಜಾರಿಗೆ ಬರುತ್ತದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ಹೆಚ್ಚಳದ ಅಗತ್ಯವಿದೆ. ನಮ್ಮ ಮೌಲ್ಯಯುತ ಗ್ರಾಹಕರ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸಿ ಒಟ್ಟಾರೆ ಬೆಲೆ ಏರಿಕೆಯನ್ನು ಕಡಿಮೆ ಮಾಡಲಾಗಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇದು ಎರಡು ತಿಂಗಳಲ್ಲಿ ಟೊಯೊಟಾದ ಎರಡನೇ ಬೆಲೆ ಏರಿಕೆ ಘೋಷಣೆಯಾಗಿದೆ. ಕಂಪನಿಯು ಕಳೆದ ತಿಂಗಳು ಹೊಸ ಹಣಕಾಸು ವರ್ಷದ ಆರಂಭದಿಂದ ತನ್ನ ಶ್ರೇಣಿಯ ಕಾರುಗಳ ಮೇಲೆ 4% ವರೆಗೆ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಈ ಟೊಯೊಟಾ ಗ್ಲಾಂಝಾ ಕಾರಿನ ಬಗ್ಗೆ ಹೆಳುವುದಾದರೆ, ಇದು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ.ಮುಂಭಾಗದ ಹೊಸ ವಿನ್ಯಾಸ ಶೈಲಿಯೊಂದಿಗೆ ಬಂದಿದೆ. ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನು ಒಳಗೊಂಡಿದೆ. ಈ ಟೊಯೊಟಾ ಗ್ಲಾಂಝಾ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್‌ಗಾಗಿ ಹೊಸ ಇನ್‌ಸರ್ಟ್‌ಗಳೊಂದಿಗೆ ಬರುತ್ತದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇದು ಹೊಸದಾಗಿ ವಿನ್ಯಾಸಗೊಳಿಸಲಾದ 16-ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಗ್ಲಾಂಝಾ ಕಾರು ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ಟೊಯೊಟಾ ಗ್ಲಾಂಝಾ ಹ್ಯಾಚ್‌ಬ್ಯಾಕ್ ಕಾರಿನ ಕ್ಯಾಬಿನ್ ಹೊಸ ಬಲೆನೊ ಮಾದರಿಗೆ ಹೋಲುವಂತಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇದು ಬಲೆನೊದಲ್ಲಿ ನೀಡಲಾಗುವ ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಬದಲಿಗೆ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಯೋಜನೆಯೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಗ್ಲಾಂಝಾ ಮಲ್ಟಿ-ಫಂಕ್ಷನಲ್ ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್, ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಏರ್-ಕಾನ್ ವೆಂಟ್‌ಗಳು ಮತ್ತು ಹಿಂಭಾಗ ಆಟೋಮ್ಯಾಟಿಕ್ ಎಸಿ ಹೊಂದಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಇನ್ನು Apple CarPlay ಮತ್ತು Android Auto, ನ್ಯಾವಿಗೇಶನ್ ಮತ್ತು ವಾಯ್ಸ್ ಕಾಮೆಂಡ್ ಗಳೊಂದಿಗೆ ದೊಡ್ಡ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬಂದಿದೆ. ಈ ಕಾರಿನಲ್ಲಿ ಹೊಸದಾಗಿ 360-ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಾಯ್ಸ್ ಅಸಿಸ್ಟ್ ಫೈಂಡ್ ಮೈ ಕಾರ್ ವೈಶಿಷ್ಟ್ಯ ಮತ್ತು ರಿಮೋಟ್ ಲಾಕ್ ಮತ್ತು ಅನ್‌ಲಾಕ್ ಕಾರ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನದೊಂದಿಗೆ ಬಂದಿದೆ,

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಈ ಹೊಸ ಟೊಯೊಟಾ ಗ್ಲಾಂಝಾ ಹ್ಯಾಚ್‌ಬ್ಯಾಕ್ ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಇಬಿಡಿಯೊಂದಿಗೆ ಎಬಿಎಸ್ ಇತ್ಯಾದಿಗಳಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ,

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಈ ಹೊಸ ಟೊಯೊಟಾ ಗ್ಲಾಂಝಾ ಕಾರಿನಲ್ಲಿ 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಟೊಯೊಟಾ ಗ್ಲಾಂಝಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಹೋಂಡಾ ಜಾಝ್ ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳುಗೆ ಪೈಪೋಟಿ ನೀಡುತ್ತದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಅರ್ಬನ್ ಕ್ರೂಸರ್ ಕಾರು ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ರೂಪಾಂತರದಲ್ಲಿ ಲಭ್ಯವಿದೆ. ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆಯೊಂದಿಗೆ ಎರಡು ಸ್ಲಾಟ್ ಹೊಂದಿರುವ ಫ್ರಂಟ್ ಗ್ರಿಲ್, ಎರಡು ತುದಿಗಳಲ್ಲೂ ಬೋಲ್ಡ್ ಕ್ರೊಮ್ ಹೊಂದಿದೆ. ಅರ್ಬನ್ ಕ್ರೂಸರ್ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಫ್ರಂಟ್ ಗ್ರಿಲ್‌, ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದ್ದು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹಿಂಬದಿ ವಿನ್ಯಾಸದಲ್ಲೂ ಗಮನಸೆಳೆಯುತ್ತದೆ. ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಕನಿಷ್ಠ ಮಟ್ಟದ ವಿನ್ಯಾಸ ಗುಣಲಕ್ಷಣಗಳಿದ್ದರೂ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಈ ಅರ್ಬನ್ ಕ್ರೂಸರ್ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಫ್ರಂಟ್ ಗ್ರಿಲ್‌, ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದ್ದು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹಿಂಬದಿ ವಿನ್ಯಾಸದಲ್ಲೂ ಗಮನಸೆಳೆಯುತ್ತದೆ. ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಕನಿಷ್ಠ ಮಟ್ಟದ ವಿನ್ಯಾಸ ಗುಣಲಕ್ಷಣಗಳಿದ್ದರೂ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ.

ದುಬಾರಿಯಾಗಲಿವೆ ಟೊಯೊಟಾ ಅರ್ಬನ್ ಕ್ರೂಸರ್ ಮತ್ತು ಗ್ಲಾಂಝಾ ಕಾರುಗಳು

ಟೊಯೊಟಾ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಂತೆ ಎಂಜಿನ್ ಆಯ್ಕೆ ಹೊಂದಿದೆ. ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104 ಬಿಎಚ್‌ಪಿ ಮತ್ತು 138 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota hikes prices of glanza and urban cruiser from may 2022 details
Story first published: Friday, April 29, 2022, 19:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X