India
YouTube

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇನೋವಾ ಕ್ರಿಸ್ಟಾ

ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ಕಾರು ಮಾರಾಟ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಹೊಂದಿದ್ದು, ಬಿಡುಗಡೆಗೊಂಡ 17 ವರ್ಷಗಳಲ್ಲಿ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿನೂತನ ಸೌಲಭ್ಯಗಳೊಂದಿಗೆ ಎಂಪಿವಿ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇದುವರೆಗೆ ಇದು ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಇನೋವಾ ಮಾದರಿಯುು ಹಲವಾರು ಬದಲಾವಣೆಗಳೊಂದಿಗೆ ಬೇಡಿಕೆ ಕಾಯ್ದುಕೊಂಡಿದ್ದು, ಇದೀಗ ಇನೋವಾ ಕ್ರಿಸ್ಟಾ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಇನೋವಾ ಎಂಪಿವಿ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 17 ವರ್ಷಗಳನ್ನು ಪೂರೈಸಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡಾಗ ಇದ್ದ ಬೇಡಿಕೆಯು ಇದುವರೆಗೂ ಕಡಿಮೆಯಾಗಿಲ್ಲ. ಕಾಲ ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಬದಲಾವಣೆಯೊಂದಿಗೆ ಮಾರಾಟವಾಗುತ್ತಿರುವ ಇನೋವಾ ಆವೃತ್ತಿಯು ಕಳೆದ 2016ರಿಂದ ಇನೋವಾ ಕ್ರಿಸ್ಟಾ ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಗಳಿಸುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಕೈಗೆಟುಕುವ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವುದೇ ಈ ಕಾರಿನ ಬೇಡಿಕೆಗೆ ಪ್ರಮುಖ ಕಾರಣವಾಗಿದ್ದು, ಬಿಡುಗಡೆಯ ದಿನದಿಂದ ಇದುವರೆಗೆ ಇದು ಪ್ರತಿ ತಿಂಗಳು ಸರಾಸರಿಯಾಗಿ 4,500ರಿಂದ 5 ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಕ್ವಾಲಿಸ್‌ ಕಾರಿಗೆ ಬದಲಿಯಾಗಿ ಭಾರತದಲ್ಲಿ ಇನೋವಾ ಎಂಪಿವಿ ಪರಿಚಯಿಸಿದ ಟೊಯೊಟಾ ಕಂಪನಿಯು ಇದುವರೆಗೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಮಧ್ಯಮ ಕ್ರಮಾಂಕದ ಐಷಾರಾಮಿ ಎಂಪಿವಿಯಾಗಿ ಗುರುತಿಸಿಕೊಂಡಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಆರಂಭಿಕವಾಗಿ ರೂ. 6.82 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.03 ಲಕ್ಷ ಬೆಲೆ ಹೊಂದಿತ್ತು.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ತದನಂತರ 2012ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಮೂಲಕ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಇನೋವಾ ಕಾರು ಎಕ್ಸ್‌‌ಶೋರೂಂ ಪ್ರಕಾರ ರೂ. 9.37 ಲಕ್ಷದಿಂದ ರೂ. 12.20 ಲಕ್ಷ ಬೆಲೆ ಹೊಂದಿತ್ತು.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

2013ರ ವೇಳೆ ಮೊದಲ ತಲೆಮಾರಿನ ಕಾರಿಗೆ 2ನೇ ಫೇಸ್‌ಲಿಫ್ಟ್ ಪರಿಚಯಿಸಿದ ಟೊಯೊಟಾ ಕಂಪನಿಯು ಆರಂಭಿಕವಾಗಿ ರೂ. 10.20 ಲಕ್ಷದಿಂದ ರೂ. 13.40 ಲಕ್ಷ ಬೆಲೆ ಹೆಚ್ಚಿಸಿತ್ತು. ಈ ವೇಳೆಗಾಗಲೇ ಇನೋವಾ ಕಾರು ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ಅಧಿಕಾರಿಗಳ ಅಧಿಕೃತ ಕಾರುಗಳ ವಿಭಾಗದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿತ್ತು.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ತದನಂತರ 2016ರ ವೇಳೆಗೆ ಇನೋವಾ ಮಾದರಿಗೆ ಮಹತ್ವದ ಬದಲಾವಣೆ ತಂದ ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಹೆಸರಿನೊಂದಿಗೆ ಹಲವಾರು ಹೊಸ ಫೀಚರ್ಸ್ ಗಳನ್ನು ಪರಿಚಯಿಸಿತು. ಈ ವೇಳೆ ಇನೋವಾ ಕ್ರಿಸ್ಟಾ ಎಂಪಿವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 13.84 ಲಕ್ಷದಿಂದ ರೂ. 20.78 ಲಕ್ಷ ಬೆಲೆ ಹೊಂದಿತ್ತು.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಇನೋವಾ ಕ್ರಿಸ್ಟಾ ಪರಿಚಯಿಸಿದ ನಂತರ ಕಂಪನಿಯು ಮಾರುಕಟ್ಟೆಯಲ್ಲಿ ಕಡ್ಡಾಯಗೊಂಡ ಹಲವಾರು ಸೇಫ್ಟಿ ಫೀಚರ್ಸ್ ಜೊತೆಗೆ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, 2021ರ ಕೊನೆಯಲ್ಲಿ ಫೇಸ್‌ಲಿಸ್ಟ್ ಮಾದರಿಯೊಂದಿಗೆ ಸದ್ಯ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಭಾರತದಲ್ಲಿ ಟೊಯಾಟೊ ಕಂಪನಿಯು ಇದುವರೆಗೆ ಮಾರಾಟಗೊಳಿಸಿರುವ 20 ಲಕ್ಷ ಕಾರುಗಳಲ್ಲಿ ಇನೋವಾ ಕಾರು ಮಾದರಿಯೇ ಸುಮಾರು 10 ಲಕ್ಷ ಯುನಿಟ್ ಮಾರಾಟ ದಾಖಲೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 26.54 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಬೆಲೆ ಏರಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಕಡ್ಡಾಯ ಸೇಫ್ಟಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರಿನ ದರದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಹೊಸ ಎಮಿಷನ್ ನಂತರ ಇನೋವಾ ಕ್ರಿಸ್ಟಾದಲ್ಲಿದ್ದ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು ಸದ್ಯ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯು 8 ಕಿ.ಮೀ ನಿಂದ 10 ಕಿ.ಮೀ ಮೈಲೇಜ್ ಹೊಂದಿದ್ದರೆ ಡೀಸೆಲ್ ಮಾದರಿಯು 10 ಕಿ.ಮೀ ನಿಂದ 12 ಕಿ.ಮೀ ಮೈಲೇಜ್ ಹೊಂದಿವೆ.

ಬಿಡುಗಡೆಗೊಂಡು 17 ವರ್ಷಗಳ ನಂತರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟೊ ಇನೋವಾ ಕ್ರಿಸ್ಟಾ

ಟೊಯೊಟಾ ಕಂಪನಿಯು ಮುಂಬರುವ ದಿನಗಳಲ್ಲಿ ಇನೋವಾ ಕ್ರಿಸ್ಟಾ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುವ ಯೋಜನೆ ರೂಪಿಸುತ್ತಿದ್ದು, ಹೊಸ ಇನೋವಾ ಕ್ರಿಸ್ಟಾ ಮಾದರಿಯು ಮತ್ತಷ್ಟು ಬದಲಾವಣೆಯೊಂದಿಗೆ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಸಹ ಪಡೆದುಕೊಳ್ಳುವ ಸಿದ್ದತೆಯಲ್ಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota innova crysta cross 10 lakh units sales unit in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X