ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. 2021ರ ವರ್ಷದ ಮಾರಾಟದ ಅಂಕಿ ಅಂಶಗಳನ್ನು ಟೊಯೊಟಾ ಕಂಪನಿಯು ಬಿಡುಗಡೆಗೊಳಿಸಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

2021ರಲ್ಲಿ ಟೊಯೊಟಾ ಕಂಪನಿಯು 10.5 ಮಿಲಿಯನ್ ವಾಹನಗಳ ಮಾರಾಟ ಮಾಡಲಾಗಿದೆ. ಟೊಯೊಟಾ ಕಂಪನಿಯು ಶೇಕಡಾ.10.1 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಟೊಯೊಟಾ ಹೈಲಕ್ಸ್ ಮತ್ತು ಟೊಯೊಟಾ ಕೊರೊಲ್ಲಾದಂತಹ ಅದರ ಕೆಲವು ಮಾದರಿಗಳು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಸ್ಟ್ ಸೆಲ್ಲರ್‌ಗಳಾಗಿವೆ. ಟೊಯೊಟಾದ ಕೆಲವು ಮಾದರಿಗಳು 180 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತವೆ ಮತ್ತು ಬಹುತೇಕ ಎಲ್ಲಾ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಈ ಮಾದರಿಗಳಲ್ಲಿ ಲ್ಯಾಂಡ್ ಕ್ರೂಸರ್, ಪ್ರಾಡೊ, ಹೈಲಕ್ಸ್, ಟಂಡ್ರಾ, ಟಕೋಮಾ, ವೆನ್ಜಾ, ಕೊರೊಲ್ಲಾ ಮುಂತಾದ ಕೆಲವು ಐಕಾನಿಕ್ ಹೆಸರುಗಳಿವೆ. ಈ ವಾಹನಗಳು ಮುಖ್ಯವಾಹಿನಿಯ ಕಾರುಗಳಾಗಿದ್ದರೂ ಸಹ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಭಾರತೀಯ ಮಾರುಕಟ್ಟೆಯಲ್ಲೂ ಟೊಯೊಟಾದ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಟೊಯೊಟಾ ಫಾರ್ಚುನರ್, ಇನೋವಾ, ಕ್ವಾಲಿಸ್, ಕೊರೊಲ್ಲಾ ಮತ್ತು ಕ್ಯಾಮ್ರಿ ಎಲ್ಲಾ ಐಕಾನಿಕ್ ಹೆಸರುಗಳಾಗಿವೆ ಮತ್ತು ಇವುಗಳು ಜನರು ಹೊಂದಲು ಬಯಸುವ ಬ್ರ್ಯಾಂಡ್‌ಗಳಾಗಿವೆ. ಈ ಕಾರುಗಳು ಮತ್ತೊಂದು ವಿಶೇಷವೆಂದರೆ, ಲಕ್ಷ ಕಿಲೋಮೀಟರ್‌ಗಳು ಓಡಿದರು ಯಾವುದೇ ಪ್ರಮುಖ ರಿಪೇರಿ ಆಗುತ್ತಿರಲಿಲ್ಲ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಸರಳವಾಗಿ, ಟೊಯೊಟಾ ಕಾರುಗಳು ಏಕೆ ಉತ್ತಮವಾಗಿ ಮಾರಾಟವಾಗುತ್ತವೆ ಎಂಬುದನ್ನು ನೋಡುವುದು ಸುಲಭ. ಟೊಯೊಟಾದ ಅಂಗಸಂಸ್ಥೆಗಳು ಮತ್ತು ಉಪ-ವಿಭಾಗಗಳು ಬರುತ್ತವೆ. Lexus, Ranz, Scion, Daihatsu ಮತ್ತು Hino ನಂತಹ ಬ್ರ್ಯಾಂಡ್‌ಗಳು ಟೊಯೊಟಾದ ಒಂದು ಭಾಗವಾಗಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಈ ಕಂಪನಿಗಳು ಮಾರಾಟ ಮಾಡಿದ ಕಾರುಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ ಮತ್ತು ಟೊಯೊಟಾವನ್ನು ವಿಶ್ವದ ಅತಿದೊಡ್ಡ ಕಾರು ತಯಾರಕರಾಗಲು ಸಹಾಯವಾಗಿದೆ, ಟೊಯೊಟಾ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಟೊಯೊಟಾ ಬ್ರ್ಯಾಂಡ್ ಫೋಕ್ಸ್‌ವ್ಯಾಗನ್ ಗ್ರೂಪ್'ಗೆ ಟಕ್ಕರ್ ನೀಡಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿ ಆಡಿ, ಡುಕಾಟಿ, ಲಂಬೋರ್ಗಿನಿ, ಸ್ಕೋಡಾ, ಸೀಟ್, ಬೆಂಟ್ಲಿ, ಸ್ಕಾನಿಯಾ, ಟ್ರಾಟನ್, ಇತ್ಯಾದಿ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ ಫೋಕ್ಸ್‌ವ್ಯಾಗನ್ ಸಮೂಹವು 8.9 ಮಿಲಿಯನ್ ವಾಹನಗಳ ಮಾರಾಟ ಸಂಖ್ಯೆಯನ್ನು ದಾಖಲಿಸಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಇದು ಟೊಯೊಟಾ ಮತ್ತು ಅದರ ಬ್ರ್ಯಾಂಡ್‌ಗಳು ಮತ್ತು ಫೋಕ್ಸ್‌ವ್ಯಾಗನ್ ಗ್ರೂಪ್ ನಡುವೆ ನಡೆಯುತ್ತಿರುವುದು ಮಿನಿ ಕೂಲ್ಡ್ ವಾರ್ ಆಗಿದೆ. 2016 ರಲ್ಲಿ, ಫೋಕ್ಸ್‌ವ್ಯಾಗನ್ ಕಂಪನಿಯು ಟೊಯೊಟಾವನ್ನು ಹಿಂದಿಕ್ಕಿ ಅತಿದೊಡ್ಡ ಕಾರು ತಯಾರಕ ಎಂಬ ಪಟ್ಟವನ್ನು ಪಡೆದುಕೊಂಡಿತ್ತು. ನಂತರ 2017, 2018 ಮತ್ತು 2019 ರಲ್ಲಿಯೂ ಈ ಸ್ಥಾನವನ್ನು ಉಳಿಸಿಕೊಂಡರು. 2020 ರಲ್ಲಿ ಮತ್ತು ಈಗ 2021ಕ್ಕೆ ಟೊಯೊಟಾ ಹಿಂಪಡೆಯಿತು.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಎರಡೂ ಆಟೋ ದೈತ್ಯರು 2022 ರಲ್ಲೂ ಪ್ರಬಲ ಹೋರಾಟವನ್ನು ನಡೆಸುವ ನಿರೀಕ್ಷೆಯಿದೆ. ಆದರೆ ಈ ವರ್ಷ ಎರಡೂ ಬ್ರಾಂಡ್‌ಗಳಿಗೆ ಸವಾಲಾಗಿರಬಹುದು.ಫೋಕ್ಸ್‌ವ್ಯಾಗನ್ ಮೊದಲ ಸ್ಥಾನದಲ್ಲಿ ಕಡಿಮೆ ಮಾರಾಟದೊಂದಿಗೆ ಪ್ರಾರಂಭಿಸಿದೆ. 8.9 ಮಿಲಿಯನ್ ವಾಹನಗಳ ಮಾರಾಟ ಸುಮಾರು 10 ವರ್ಷಗಳಲ್ಲಿ ಫೋಕ್ಸ್‌ವ್ಯಾಗನ್ ಗ್ರೂಪ್ ನೋಡಿದ ಅತ್ಯಂತ ಕಡಿಮೆ ಅಂಕಿ ಅಂಶವಾಗಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಮತ್ತೊಂದೆಡೆ, ಜಪಾನ್‌ನಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿ ಟೋಮೊಬೈಲ್ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಬ್ರ್ಯಾಂಡ್ ಜಪಾನ್‌ನಲ್ಲಿರುವ ತನ್ನ ಸ್ಥಾವರಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದು ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಜಾಗತಿಕವಾಗಿ ಎಲ್ಲಾ ವಾಹನ ತಯಾರಕರು ಎದುರಿಸುತ್ತಿರುವ ಕೆಲವು ಸಾಮಾನ್ಯ ಸವಾಲುಗಳಿವೆ. ಇದು ಸಾಂಕ್ರಾಮಿಕ-ಸಂಬಂಧಿತ ಕರ್ಫ್ಯೂಗಳು ಮತ್ತು ಲಾಕ್‌ಡೌನ್‌ಗಳನ್ನು ಒಳಗೊಂಡಿದೆ ಮತ್ತು ನಂತರ ಜಾಗತಿಕ ಚಿಪ್ ಕೊರತೆಯು ಎಲ್ಲಾ ಕಾರು ತಯಾರಕರ ಮೇಲೆ ಪರಿಣಾಮ ಬೀರಿದೆ.ಇವೆಲ್ಲದರ ಹೊರತಾಗಿಯೂ, ಟೊಯೋಟಾ ಮತ್ತು ವಿಡಬ್ಲ್ಯೂ ಎರಡೂ ತಮ್ಮ ಮಾರಾಟದ ಸಂಖ್ಯೆಯನ್ನು ಸುಧಾರಿಸಲು ನೋಡುತ್ತಿವೆ. ಈ ಎರಡೂ ಬ್ರಾಂಡ್‌ಗಳು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಬಿಡುಗಡೆ ಮಾಡಲು ಕೆಲವು ಅದ್ಭುತ ಕಾರುಗಳು ಸಾಲಾಗಿ ನಿಂತಿವೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾಸಿಕ ಮಾರಾಟದ ಅಂಕಿ ಅಂಶಗಳ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ವರದಿ ಪ್ರಕಾರ, ಟೊಯೊಟಾ ಕಂಪನಿಯು ಕಳೆದ ತಿಂಗಳು ಭಾರತದಲ್ಲಿ 10,832 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಟೊಯೊಟಾ ಕಂಪನಿಯು 7,487 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದ ಟೊಯೊಟಾ

2021ರ ವರ್ಷದಲ್ಲಿ ಜಪಾನಿನ ಕಾರು ತಯಾರಕರು ಭಾರತದಲ್ಲಿ 1,30,768 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇನ್ನು 2020ರ ವರ್ಷದಲ್ಲಿ 76,111 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಶೇ.72 ರಷ್ಟು ಬೆಳವಣಿಗೆಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota is worlds largest car manufacturer for 2021 over 10 5 million units sales details
Story first published: Saturday, January 29, 2022, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X