ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ (Volkswagen) ತನ್ನ ಪೊಲೊ ಕಾರನ್ನು ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಶೀಘ್ರದಲ್ಲೇ ಪೊಲೊ ಹ್ಯಾಚ್‌ಬ್ಯಾಕ್ ಉತ್ಪಾದನೆಯನ್ನು ಕೊನೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಜನಪ್ರಿಯ ಪೊಲೊ ಹ್ಯಾಚ್‌ಬ್ಯಾಕ್ ಅನ್ನು ಸ್ಥಗಿತಗೊಳಿಸುವ ಮೊದಲು, ಫೋಕ್ಸ್‌ವ್ಯಾಗನ್ ಇಂಡಿಯಾ ಪೊಲೊ ಹ್ಯಾಚ್‌ಬ್ಯಾಕ್‌ನ ವಿಶೇಷ ವಿದಾಯ ಆವೃತ್ತಿಯನ್ನು (ಫೇರ್‌ವೆಲ್‌ ಎಡಿಷನ್) ಬಿಡುಗಡೆ ಮಾಡಲಿದೆ. ಫೋಕ್ಸ್‌ವ್ಯಾಗನ್ ಬ್ರಾಂಡ್ ನಿರ್ದೇಶಕ ಆಶಿಶ್ ಗುಪ್ತಾ ಅವರು ಸೀಮಿತ ಆವೃತ್ತಿಯನ್ನು ಏಪ್ರಿಲ್ 2022 ರಲ್ಲಿ ಪ್ರಾರಂಭಿಸಲಾಗುವುದು ಎಂದು ದೃಢಪಡಿಸಿದ್ದಾರೆ. ಈ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್ (Volkswagen Polo Farewell Edition) ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಈ ಸೀಮಿತ ಆವೃತ್ತಿಯು ಬಾಡಿ ಗ್ರಾಫಿಕ್ಸ್, ಬ್ಯಾಡ್ಜ್‌ಗಳು ಮತ್ತು ಬಹುಶಃ ಬೆಸ್ಪೋಕ್ ಅಲಾಯ್ ವ್ಹೀಲ್ ಗಳೊಂದಿಗೆ ಬರುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಈ ಸ್ಪೆಷಲ್ ಎಡಿಷನ್ ಕ್ಯಾಬಿನ್ ಒಳಗೆ, ಹ್ಯಾಚ್‌ಬ್ಯಾಕ್ ಅನನ್ಯ ಸೀಟ್ ಕವರ್‌ಗಳನ್ನು ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಬಹುದು. ಈ ಫೋಕ್ಸ್‌ವ್ಯಾಗನ್ ಪೊಲೊವನ್ನು 2 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು 1.0-ಲೀಟರ್ 3-ಸಿಲಿಂಡರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಆಗಿದೆ. ಇದರಲ್ಲಿ ಮೊದಲ ಎಂಜಿನ್ 76 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಇನ್ನು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕಾರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಫೋಕ್ಸ್‌ವ್ಯಾಗನ್ ಪೊಲೊ ಸ್ಪೆಷಲ್ ಎಡಿಷನ್ 6ಎಂಟಿ ಮತು 6ಎಟಿ ಜೊತೆಗೆ ಸಿಂಗಲ್ TSI ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಬಹುದು ಎಂದು ನಾವು ನಂಬುತ್ತೇವೆ.ನ್ಯೂ ಜನರೇಷನ್ ಫೋಕ್ಸ್‌ವ್ಯಾಗನ್ ಪೊಲೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ ಎಂದು ಕೆಲವು ವರದಿಗಳಾಗಿದೆ. ಆದರೆ ಪೊಲೊ ಸ್ಥಗಿತಗೊಂಡ ಬಳಿಕ ಮತ್ತೆ ಹೊಸ ರೂಪದಲ್ಲಿ ಮರಳಿ ಬರಲಿದೆಯೇ ಎಂಬ ಮಾಹಿತಿಗಳು ಬಹಿರಂಗವಾಗಿಲ್ಲ,

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್ 2010 ರಲ್ಲಿ ತನ್ನ ಅಧಿಕೃತ ಚೊಚ್ಚಲ ಪ್ರವೇಶವನ್ನು ಮಾಡಿತು ಮತ್ತು ಅದೇ ವರ್ಷ ಫೆಬ್ರವರಿಯಲ್ಲಿ ಮಾರಾಟವಾಯಿತು. ಇದು ಇಲ್ಲಿಯವರೆಗೆ 2.5 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಪರಿಮಾಣದ ದೃಷ್ಟಿಯಿಂದ ಭಾರತದಲ್ಲಿ ಜರ್ಮನ್ ಬ್ರಾಂಡ್‌ನ ಅತ್ಯಂತ ಯಶಸ್ವಿ ಉತ್ಪನ್ನವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಫೋಕ್ಸ್‌ವ್ಯಾಗನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಆರನೇ ತಲೆಮಾರಿನ ಪೊಲೊ ಕಾರಿನ ಫೇಸ್‌ಲಿಫ್ಟೆಡ್ ಮಾದರಿಯನ್ನು ಪರಿಚಯಿಸಲಾಗಿದೆ. ಈ ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ಕಾರಿನ ಹೊರ ಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಪೊಲೊ ಎಂಕ್ಯೂಬಿ ಎಒ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಇದೇ ಪ್ಲಾಟ್ ಫಾರ್ಮ್ ಅಡಿಯಲ್ಲಿ ನ್ಯೂ ಜನರೇಷನ್ ಸ್ಕೋಡಾ ಫ್ಯಾಬಿಯಾ ಕಾರನ್ನು ಉತ್ಪಾದಿಸಲಾಗುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ದೊಡ್ಡ ಗಾಲ್ಫ್ ಮಾದರಿಯ ವಿನ್ಯಾಸದೊಂದಿಗೆ ಹೋಲುವಂತಿದೆ.ಫೇಸ್‌ಲಿಫ್ಟೆಡ್ ಟಿಗ್ವಾನ್ ಮತ್ತು ಗಾಲ್ಫ್‌ನಂತೆ ಇದು ಹೊಸ ಎಲ್‌ಇಡಿ ಲೈಟಿಂಗ್ ಬಾರ್ ಅನ್ನು ಪಡೆಯುತ್ತದೆ ಮತ್ತು ಸ್ಟ್ಯಾಂಡರ್ಡ್ ಎಲ್ಇಡಿ ಕಿರಣಗಳೊಂದಿಗೆ ಹೆಡ್‌ಲ್ಯಾಂಪ್‌ಗಳು ಮೊದಲಿಗಿಂತ ತೀಕ್ಷ್ಣವಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಹೈ-ಎಂಡ್ ರೂಪಾಂತರಗಳು ಮೊದಲ ಬಾರಿಗೆ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‌ಗಳು ಪ್ಯಾಕೇಜಿನ ಭಾಗವಾಗಿದೆ. ಹಿಂಭಾಗದಲ್ಲಿ, ನವೀಕರಿಸಿದ ವಿಡಬ್ಲ್ಯೂ ಗಾಲ್ಫ್‌ ಮಾದರಿಯಲ್ಲಿರುವಂತೆ ಸಿ-ಆಕಾರದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಕ್ಡೂಡ ಮರುವಿನ್ಯಾಸಗೊಳಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಇನ್ನು ಫೋಕ್ಸ್‌ವ್ಯಾಗನ್ ತನ್ನ ಪೊಲೊ ಫೇಸ್‌ಲಿಫ್ಟ್ ಕಾರನ್ನು ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರೀಷ್ಠ ರೇಟಿಂಗ್ ಅನ್ನು ಪಡೆದುಕೊಂಡಿದೆ. ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ, ಪೊಲೊ ಫೇಸ್‌ಲಿಫ್ಟ್ ಕಾರಿನ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 38 ಅಂಕಗಳಲ್ಲಿ 35.9 ಅಂಕಗಳನ್ನು ಗಳಿಸಿದೆ, ಈ ಸ್ಕೋರ್ ಸರಿಸುಮಾರು 94.5 ಪ್ರತಿಶತಕ್ಕೆ ಅನುವಾದಿಸುತ್ತದೆ. ಅದರ ಜೊತೆಗೆ, ಮಕ್ಕಳ ರಕ್ಷಣೆಗಾಗಿ ಹ್ಯಾಚ್‌ಬ್ಯಾಕ್ 49 ಅಂಕಗಳಲ್ಲಿ 39.5 ಅಂಕಗಳನ್ನು ಗಳಿಸಿದೆ. ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ,

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಹೊಸ 2022ರ ಫೋಕ್ಸ್‌ವ್ಯಾಗನ್ ಪೊಲೊ ಮುಂಭಾಗದ ಪರಿಣಾಮ ಗರಿಷ್ಠ ಸ್ಕೋರ್ ಮಾಡಬಹುದಾದ 16 ಅಂಕಗಳಲ್ಲಿ 14.1 ಅಂಕಗಳನ್ನು ಗಳಿಸಿದೆ. ಆದರೆ ಲ್ಯಾಟರಲ್ ಇಂಪ್ಯಾಕ್ಟ್ ಪರೀಕ್ಷೆಗಾಗಿ ಜರ್ಮನ್ ಹ್ಯಾಚ್‌ಬ್ಯಾಕ್ ಗರಿಷ್ಠ ಅಂಕಗಳನ್ನು ಗಳಿಸಿತು. ಹಿಂಭಾಗದ ಪರಿಣಾಮ ಪರೀಕ್ಷೆಗಾಗಿ 4 ರಲ್ಲಿ 3.7 ಅಂಕಗಳನ್ನು ಗಳಿಸಿದೆ. ಅದರ ಹೊರತಾಗಿ, ಹೊಸ 2022ರ ಫೋಕ್ಸ್‌ವ್ಯಾಗನ್ ಪೊಲೊ 6 ರಿಂದ 10 ವರ್ಷ ವಯಸ್ಸಿನ ಮಕ್ಕಳ ಮುಂಭಾಗ ಮತ್ತು ಅಡ್ಡ ಪರಿಣಾಮವನ್ನು ಒಳಗೊಂಡಿರುವ ಕ್ರ್ಯಾಶ್ ಟೆಸ್ಟ್ ಕಾರ್ಯಕ್ಷಮತೆಯಲ್ಲಿ ಲಭ್ಯವಿರುವ 24 ಗರಿಷ್ಠ ಅಂಕಗಳಲ್ಲಿ 19.5 ಅಂಕಗಳನ್ನು ಗಳಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ ಫೇರ್‌ವೆಲ್ ಎಡಿಷನ್

ಇನ್ನು ಇನ್ನು ದಶಕಗಳಷ್ಟು ಹಳೆಯದಾದ ಪೋಲೊ ಗಮನಾರ್ಹವಾದ ನವೀಕರಣವನ್ನು ಪಡೆಯುವುದನ್ನು ನೋಡಲು ರೋಮಾಂಚನಕಾರಿಯಾಗಿದೆ. ಫೋಕ್ಸ್‌ವ್ಯಾಗನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಫೋಕ್ಸ್‌ವ್ಯಾಗನ್ ಪಲೊ ಕಾರು ಬಿಡುಗಡೆಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Volkswagen to be introduce farewell special edition for polo premium hatchback details
Story first published: Thursday, March 10, 2022, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X