ವಿಶ್ವದ ಮೊದಲ ಸೋಲಾರ್ ಕಾರ್ ಲೈಟ್‌ಇಯರ್ 0 ಉತ್ಪಾದನೆ ಆರಂಭ: ಎಂತಹ ಫೀಚರ್‌ಗಳಿವೆ ಗೊತ್ತಾ?

ವಿಶ್ವಾದ್ಯಂತ ವಾಹನ ತಯಾರಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ. ಹೆಚ್ಚಳವಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯು ಎಲೆಕ್ಟ್ರಿಕ್ ಹಾಗೂ ಸೌರಶಕ್ತಿ ಚಾಲಿತ ವಾಹನಗಳತ್ತ ಮುಖಮಾಡುವಂತೆ ಮಾಡಿದೆ. ಅದೇರೀತಿ ವಾಹನ ತಯಾರಿಕ ಕಂಪನಿಗಳು ಸಹ ಇತಂಹ ವಾಹನ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸದ್ಯ ವಿಶ್ವದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಶುರುವಾಗಿದೆ.

ಜೂನ್ 2022ರಲ್ಲಿ, ಡಚ್ ಮೊಬಿಲಿಟಿ ಸ್ಟಾರ್ಟ್-ಅಪ್ ಆಗಿರುವ ಲೈಟ್‌ಇಯರ್, ತನ್ನ ಮೊದಲ ಸೌರಶಕ್ತಿಯಿಂದ ಚಲಿಸಬಲ್ಲ ಕಾರನ್ನು ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸುವುದಾಗಿ ಘೋಷಿಸಿತ್ತು. ಈ ವರ್ಷದ ನವೆಂಬರ್‌ನಲ್ಲಿಯೇ ಯುರೋಪಿಯನ್ ಗ್ರಾಹಕರಿಗೆ ತಲುಪಿಸುವುದಾಗಿ ಸಮಯವನ್ನು ನಿಗದಿಪಡಿಸಿ, ಸೆಪ್ಟೆಂಬರ್‌ನಲ್ಲಿ ಕಾರಿನ ಉತ್ಪಾನೆಯನ್ನು ಪ್ರಾರಂಭಿಸುವುದಾಗಿ ಕಂಪನಿ ಹೇಳಿಕೆ ನೀಡಿತ್ತು. ಆದಾಗ್ಯೂ,ಇತ್ತೀಚೆಗೆ ಅಧಿಕೃತವಾಗಿ 'ಲೈಟ್‌ಇಯರ್ 0' ಎಂದು ಕರೆಯಲ್ಪಡುವ ವಿಶ್ವದ ಮೊದಲ ಸೋಲಾರ್ ಕಾರ್ ಮಾದರಿಯ ಉತ್ಪಾದನೆಯನ್ನು ಕಂಪನಿ ಪ್ರಾರಂಭ ಮಾಡಿದೆ.

ವಿಶ್ವದ ಮೊದಲ ಸೋಲಾರ್ ಕಾರ್ ಲೈಟ್‌ಇಯರ್ 0 ಉತ್ಪಾದನೆ ಆರಂಭ: ಎಂತಹ ಫೀಚರ್‌ಗಳಿವೆ ಗೊತ್ತಾ?

ಪ್ರಸ್ತುತ, ಈ ಕಾರು $259,000 (ರೂ. 2.11 ಕೋಟಿ) ಆರಂಭಿಕ ಬೆಲೆಯನ್ನು ಹೊಂದಿದ್ದು, ಈಗಾಗಲೇ ಸುಮಾರು 150 ಮುಂಗಡ-ಆರ್ಡರ್‌ಗಳನ್ನು ಪಡೆದುಕೊಂಡಿದ್ದು, ಸುಮಾರು 625 ಕಿ.ಮೀ ವರೆಗೆ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರಕಟಣೆಯ ಪ್ರಕಾರ, ಮೊದಲ 1,000 ಲೈಟ್‌ಇಯರ್ 0 ಕಾರುಗಳನ್ನು ಫಿನ್‌ಲ್ಯಾಂಡ್‌ನ ವಾಲ್ಮೆಟ್ ಆಟೋಮೋಟಿವ್ ಓಯ್ಜ್ ಪ್ಲಾಂಟ್ ನಲ್ಲಿ ಉತ್ಪಾದಿಸಲಾಗುತ್ತದೆ. ಪ್ರತಿ ವಾರ ಒಂದು ಲೈಟ್‌ಇಯರ್ 0 ಕಾರನ್ನು ಉತ್ಪಾದಿಸುವ ಗುರಿಯನ್ನು ಕಂಪನಿ ಇಟ್ಟುಕೊಂಡಿದೆ.

'ಲೈಟ್‌ಇಯರ್ 0' ರೂಫ್ ಮೇಲೆ ಸೋಲಾರ್ ಪಾನೆಲ್ಸ್ ಅನ್ನು ಅಳವಡಿಕೆ ಮಾಡಲಾಗಿದೆ. ಇದರಿಂದ ಕಾರು ಚಲಿಸುವಾಗ ಅಥವಾ ಪಾರ್ಕಿಂಗ್ ಮಾಡಿದಾಗ ರಿಚರ್ಚ್ ಮಾಡುವುದು ಸುಲಭವಾಗುತ್ತದೆ. ಲೈಟ್‌ಇಯರ್‌ನ ಪ್ರಕಾರ, ಸೂರ್ಯ ಬೆಳಕಿನಲ್ಲಿ ಒಂದು ಗಂಟೆ 'ಲೈಟ್‌ಇಯರ್ 0' ಕಾರು ಇದ್ದರೆ ಸುಮಾರು 10 ಕಿಮೀ ಓಡವಷ್ಟು ಚಾರ್ಜ್ ಆಗಲಿದೆ. ಬೇಸಿಗೆಯಲ್ಲಿ ನೆದರ್ಲ್ಯಾಂಡ್ಸ್ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಚಾರ್ಜ್ ಮಾಡದೆಯೇ 2 ತಿಂಗಳವರೆಗೆ ಕಾರು ಓಡಬಹುದು. 35 ಕಿ.ಮೀಗಿಂತ ಪ್ರಯಾಣದ ದೂರ ಕಡಿಮೆಯಿದ್ದರೆ ಪೋರ್ಚುಗಲ್‌ನ ಹವಾಮಾನದಲ್ಲಿ 7 ತಿಂಗಳವರೆಗೆ ಕಾರು ಓಡಲಿದೆ.

ಪ್ರಸ್ತುತ ಎಲೆಕ್ಟ್ರಿಕ್ ಕಾರು ತಯಾರಕರಿಗೆ 'ಲೈಟ್‌ಇಯರ್ 0' ಕಾರು ತೀವ್ರ ಪೈಪೋಟಿ ನೀಡಲಿದೆ ಎಂದು ವಿಶೇಷಣೆಗಳು ಹೇಳುತ್ತಿವೆ. ವರ್ಡ್ ವೈಡ್ ಹಾರ್ಮೋನೈಸ್ಡ್ ಲೈಟ್ ವೆಹಿಕಲ್ ಟೆಸ್ಟ್ (WLTP) ಮಾನದಂಡಗಳ ಪ್ರಕಾರ, 'ಲೈಟ್‌ಇಯರ್ 0' ಕಾರು ಬರೋಬ್ಬರಿ 625 ಕಿಮೀ ವರೆಗೆ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಈ ಕಾರಿನಲ್ಲಿರುವ ಸ್ಮಾರ್ಟ್ ಸೋಲಾರ್ ಪ್ಯಾನೆಲ್ ವಿನ್ಯಾಸವು ಅತ್ಯುತ್ತಮವಾಗಿದ್ದು. 'ಲೈಟ್‌ಇಯರ್ 0' ದಿನಕ್ಕೆ 70 ಕಿ.ಮೀ ಅಥವಾ ವರ್ಷಕ್ಕೆ 11,000 ಕಿ.ಮೀ. ಓಡಲಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕೊಂಚ ಪೆಟ್ಟು ಬೀಳಬಹುದು ಎಂದು ಅಂದಾಜಿಸಲಾಗಿದೆ.

ಲೈಟ್‌ಇಯರ್ 0ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ 60 kWh ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. ಫಾಸ್ಟ್ ಚಾರ್ಜಿಂಗ್ ತಂತ್ರಜಾನದ ಸಹಾಯದಿಂದ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳಲ್ಲಿ 1-ಗಂಟೆ ಚಾರ್ಜ್ ಮಾಡಿದ್ದರೆ ಬರೋಬ್ಬರಿ 200 ಕಿ.ಮೀ. ಮನೆಯಲ್ಲಿನ ನಿಧಾನಗತಿಯ ಪವರ್‌ನಿಂದ 1 ಗಂಟೆ ಚಾರ್ಜ್ ಮಾಡಿದರೆ 32 ಕಿ.ಮೀ ದೂರದವರೆಗೆ ಪ್ರಯಾಣಿಸಬಹುದು. ಸದ್ಯ ಈ ಕಾರಣಗಳಿಂದಲೇ ಸೋಲಾರ್, ಎಲೆಕ್ಟ್ರಿಕ್ ಕಾರು ಆಗಿರುವ ಲೈಟ್‌ಇಯರ್ 0 ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.

ಇದರ ಜೊತೆಗೆ, ಕಂಪನಿಯ CEO, ಲೈಟ್‌ಇಯರ್ 0ನಲ್ಲಿನ ಪವರ್‌ಟ್ರೇನ್ ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಎಂದು ಹೇಳಿಕೊಂಡಿದ್ದಾರೆ. ಕಾರಿನ ಏರೋಡೈನಾಮಿಕ್ ಆಕಾರ ಮತ್ತು ನಾಲ್ಕು ವೀಲ್‌ಗಳಲ್ಲಿನ ನಾಲ್ಕು ಎಲೆಕ್ಟ್ರಿಕ್ ಮೋಟರ್‌ಗಳಿದೆ. ಅಲ್ಲದೆ, ಈ ಲೈಟ್‌ಇಯರ್ ಕಾರು, ಕೇವಲ 1,575 ಕೆಜಿ ಮಾತ್ರ ತೂಕವಿದ್ದು, ಹಗುರವಾಗಿದೆ ಎಂದು ಹೇಳಬಹುದು. ಲೈಟ್‌ಇಯರ್ 0 ನಂತರ ಲೈಟ್‌ಇಯರ್ 2 ಅನ್ನು ಕಂಪನಿಯು ಅಭಿವೃದ್ಧಿಪಡಿಸುತ್ತಿದ್ದು, 2025ರಲ್ಲಿ ಆ ಕಾರಿನ ಉತ್ಪಾದನೆ ಪ್ರಾರಂಭವಾಗಬಹುದು ಎಂಬುದನ್ನು ನಿರೀಕ್ಷಿಸಲಾಗಿದೆ.

ಸದ್ಯ, ವಾರಕ್ಕೆ ಒಂದು ಕಾರನ್ನು ಉತ್ಪಾದಿಸುವ ಗುರಿ ಹೊಂದಿರುವ ಕಂಪನಿ 2023ರ ಅಂತ್ಯದ ವೇಳೆಗೆ ಆ ಸಂಖ್ಯೆಯನ್ನು ವಾರಕ್ಕೆ ಐದಕ್ಕೆ ಹೆಚ್ಚಿಸುವ ವಿಶ್ವಾಸದಲ್ಲಿದೆ. ವಿಶ್ವಾದ್ಯಂತ ಭಾರತದ ವಾಹನ ತಯಾರಿಕಾ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ತಯಾರಿಕೆಗೆ ಮುಂದಾಗಿದ್ದು, ಇದೀಗ ಡಚ್ ಸ್ಟಾರ್ಟ್-ಅಪ್ 'ಲೈಟ್‌ಇಯರ್' ಒಂದು ಹೆಜ್ಜೆ ಮುಂದೆ ಹೋಗಿ ಸೋಲಾರ್ ಎಲೆಕ್ಟ್ರಿಕ್ ಕಾರು ತಯಾರಿಕೆಯನ್ನು ಆರಂಭ ಮಾಡಿದೆ. ಆದರೆ, ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಮಾಹಿತಿಯಿಲ್ಲ.

Most Read Articles

Kannada
English summary
Worlds first solar car lightyear goes into production
Story first published: Monday, December 5, 2022, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X