Auto Expo 2023: 700 km ಮೈಲೇಜ್ ನೀಡುವ BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಪ್ರದರ್ಶನ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಖರೀದಿಯತ್ತ ಗ್ರಾಹಕರು ಮನಸ್ಸು ಮಾಡುತ್ತಿದ್ದಾರೆ. ಚೀನಾದ ಪ್ರಮುಖ ಇವಿ ದೈತ್ಯ BYD (ಬಿಲ್ಡ್ ಯುವರ್ ಡ್ರೀಮ್ಸ್) ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ರಲ್ಲಿ ಭಾಗವಹಿಸಿದ್ದು, ತನ್ನ ಹೊಸ 'ಸೀಲ್' ಎಲೆಕ್ಟ್ರಿಕ್ ಸೆಡಾನ್ ಅನ್ನು ಪ್ರದರ್ಶಿಸಿದೆ.

ನೂತನ ಸೀಲ್ ಸೆಡಾನ್, ಅಮೆರಿಕ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಟೆಸ್ಲಾ ಮಾಡೆಲ್ 3 ಕಾರಿಗೆ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಬಹುದು. BYD ಈ ವರ್ಷಾಂತ್ಯದೊಳಗೆ ಸೀಲ್‌ ಎಲೆಕ್ಟ್ರಿಕ್ ಸೆಡಾನ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಸದ್ಯ ಮಾಹಿತಿ ಲಭ್ಯವಾಗಿದ್ದು, ಅದೇ ಸಮಯದಲ್ಲಿ ವಿತರಣೆಗಳು ಸಹ ಆರಂಭವಾಗಲಿದೆ. ಸೀಲ್ 4,800 ಎಂಎಂ ಉದ್ದ, 1,875 ಎಂಎಂ ಅಗಲ ಮತ್ತು 1,460 ಎಂಎಂ ಎತ್ತರವನ್ನು ಹೊಂದಿದೆ.

700 km ಮೈಲೇಜ್ ನೀಡುವ BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಪ್ರದರ್ಶನ

BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಓಷನ್ ಎಕ್ಸ್ ಪರಿಕಲ್ಪನೆಯನ್ನು ಆಧರಿಸಿದ್ದು, ಕೂಪ್ ತರಹದ ಗಾಜಿನ ಮೇಲ್ಛಾವಣಿ, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, 4 ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ ಮತ್ತು ಹಿಂಭಾಗದಲ್ಲಿ ಫುಲ್ - ವಿಡ್ತ್ ಎಲ್ಇಡಿ ಲೈಟ್ ಬಾರ್‌ನಂತಹ ವಿನ್ಯಾಸವನ್ನು ಪಡೆದುಕೊಂಡಿದೆ. ನೋಡಲು ಈ ಕಾರು, ಅತ್ಯಾಕರ್ಷಕವಾಗಿದ್ದು, ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.

Atto 3 ಮತ್ತು e6ನಂತೆ, BYD ಸೀಲ್, ಸೆಂಟ್ರಲ್ ಕನ್ಸೋಲ್‌ನಲ್ಲಿ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಹೊಂದಿದ್ದು, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ಪ್ಲೇಯನ್ನು ಪಡೆದಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಂಟ್ರಲ್ AC ವೇಟ್ ಗಳಿಂದ ಸುತ್ತುವರೆದಿದ್ದು, ಡ್ರೈವ್ ಸೆಲೆಕ್ಟರ್ ಮತ್ತು ಅದರ ಕೆಳಗಿನ ವಿವಿಧ ಡ್ರೈವ್ ಮೋಡ್‌ಗಳನ್ನು ಆಯ್ಕೆ ಮಾಡಲು ಸ್ಕ್ರಾಲ್ ವೀಲ್ ಹೊಂದಿದೆ. ಸೆಂಟರ್ ಕನ್ಸೋಲ್ ಬಿಸಿಯಾದ ವಿಂಡ್‌ಸ್ಕ್ರೀನ್, ಆಡಿಯೊ ಸಿಸ್ಟಮ್‌ಗಾಗಿ ವಾಲ್ಯೂಮ್ ಕಂಟ್ರೋಲ್ ಹಾಗೂ ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ನಂತಹ ಒಳಭಾಗದ ವೈಶಿಷ್ಟ್ಯವನ್ನು ಹೊಂದಿದೆ.

700 km ಮೈಲೇಜ್ ನೀಡುವ BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಪ್ರದರ್ಶನ

ಸೀಲ್ ಎಲೆಕ್ಟ್ರಿಕ್ ಸೆಡಾನ್ ನಲ್ಲಿ BYDಯ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಾಗಿದೆ. ಇದನ್ನು ಭಾರತದಲ್ಲಿ ಹೆಚ್ಚಿನ ಇವಿಗಳಲ್ಲಿ ಉಪಯೋಗಿಸಲಾಗುತ್ತದೆ. ಸೀಲ್ BYDಯ ಇ-ಪ್ಲಾಟ್‌ಫಾರ್ಮ್ 3.0 ಅನ್ನು ಆಧರಿಸಿದ್ದು, ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೇ, 61.4kWh ಯುನಿಟ್ ಮತ್ತು 82.5kWh ಯುನಿಟ್. ಮೊದಲ ಬ್ಯಾಟರಿ ಪ್ಯಾಕ್ 550 km ಹಾಗೂ ಎರಡನೇ ಬ್ಯಾಟರಿ ಪ್ಯಾಕ್ ಸರಿ ಸುಮಾರು 700 km ರೇಂಜ್ ನೀಡಲಿದೆ.

ಸೀಲ್ ಸೆಡಾನ್, ಸಿಂಗಲ್-ಮೋಟರ್ ಮತ್ತು ಡ್ಯುಯಲ್-ಮೋಟಾರ್ ಎಂಬ ಪವರ್‌ಟ್ರೇನ್‌ಗಳ ಆಯ್ಕೆಗಳನ್ನು ಹೊಂದಿದೆ. ಸಿಂಗಲ್ ಮೋಟರ್ ಅನ್ನು ಎರಡು ಬ್ಯಾಟರಿಗಳಿಗೆ ಜೋಡಿಸಬಹುದಾದರೂ, ಎರಡನೆಯದನ್ನು ದೊಡ್ಡ ಬ್ಯಾಟರಿಯೊಂದಿಗೆ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ. ರೇರ್-ವೀಲ್ ಡ್ರೈವ್, ಸಿಂಗಲ್-ಮೋಟಾರ್ ಹೊಂದಿರುವ ಸೀಲ್, 204hp ಪವರ್ ಉತ್ಪಾದಿಸುತ್ತದೆ. ಚಿಕ್ಕ ಬ್ಯಾಟರಿ, 5.7 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆಯಲಿದೆ. ದೊಡ್ಡ ಬ್ಯಾಟರಿ ಇರುವ ಕಾರು, 312hp ಪವರ್ ಉತ್ಪಾದಿಸುತ್ತದೆ. 5.9 ಸೆಕೆಂಡ್ ಗಳಲ್ಲಿ 0-100kph ಸ್ವೀಡ್ ಪಡೆದುಕೊಳ್ಳಲಿದೆ.

BYD ಸೀಲ್ ಎಲೆಕ್ಟ್ರಿಕ್ ಸೆಡಾನ್, ಡ್ಯುಯಲ್-ಮೋಟಾರ್ ರೂಪಾಂತರವು ಆಲ್-ವೀಲ್ ಡ್ರೈವ್ ಸೆಟ್-ಅಪ್ ಹೊಂದಿದೆ. ಮುಂಭಾಗದಲ್ಲಿ ಅಳವಡಿಸಲಾದ ಮೋಟಾರ್ 218 hp ಗರಿಷ್ಠ ಪವರ್ ಉತ್ಪಾದಿಸುತ್ತದೆ. ಹಿಂಭಾಗದಲ್ಲಿ 312 hp ಗರಿಷ್ಠ ಪವರ್ ಉತ್ಪಾದಿಸಲಿದೆ. ಇದು 3.8 ಸೆಕೆಂಡ್‌ಗಳಲ್ಲಿ 0-100kph ವೇಗವನ್ನು ಪಡೆಯಲಿದ್ದು, ಈ ಸೆಟ್ಅಪ್ ಹೊಂದಿರುವ 82.5kWh ಬ್ಯಾಟರಿಯು ಬರೋಬ್ಬರಿ 650 km ರೇಂಜ್ ನೀಡಲಿದೆ. ಇದರಿಂದ ಈ ಕಾರಿಗೆ ಎಲ್ಲೆಡೆ ಭಾರೀ ಬೇಡಿಕೆಯಿದೆ ಎಂದು ಹೇಳಬಹುದು.

BYD ಕಂಪನಿ, ATTO 3 ಕಾರಿನ ಸೀಮಿತ ಆವೃತ್ತಿಗೆ ಹೊಸ ಬಣ್ಣವನ್ನು ಘೋಷಿಸಿದೆ. 'ಫಾರೆಸ್ಟ್ ಗ್ರೀನ್' ಕಲರ್ ATTO 3 ಕಾರಿನೊಂದಿಗೆ ಲಭ್ಯವಿರುವ ಐದನೇ ಕಲರ್ ಆಯ್ಕೆಯಾಗಿದೆ. ಇದು ಕೇವಲ 1,200 ಯುನಿಟ್ ಗಳಿಗೆ ಸೀಮಿತವಾಗಿದ್ದು, ATTO 3 ಸೀಮಿತ ಆವೃತ್ತಿಯ ಬೆಲೆಯನ್ನು 34.49 ಲಕ್ಷ (ಎಕ್ಸ್ ಶೋರೂಂ) ನಿಗದಿಪಡಿಸಿದೆ. Atto 3 ಸಂಪೂರ್ಣ ಚಾರ್ಜ್ ನಲ್ಲಿ 521 km ರೇಂಜ್ ನೀಡಲಿದ್ದು, ಸ್ಟೇಜ್ 2 ADAS ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ 33.99 ಲಕ್ಷ ರೂ. ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ಸ್‌ ವಿಭಾಗದ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಅವರು, 'ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ BYD ಸೀಲ್ ಅನ್ನು ಪ್ರದರ್ಶಿಸಲಾಗಿದೆ. ಭವಿಷ್ಯದ ಇವಿ ತಂತ್ರಜ್ಞಾನಗಳೊಂದಿಗೆ ಭಾರತೀಯ ಎಲೆಕ್ಟ್ರಿಕ್ ವಾಹನ ವಿಭಾಗದ ಬೆಳವಣಿಗೆಗೆ ಕೊಡುಗೆ ನೀಡುವ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ. ಸದ್ಯ ಅತಿಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವ BYD ಕಾರುಗಳು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿವೆ.

Most Read Articles

Kannada
English summary
Auto expo 2023 byd seal electric sedan showcased 700 km range details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X