Auto Expo 2023: ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಅನಾವರಣ.. ಬುಕಿಂಗ್ ಆರಂಭ

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ, ಬಹುನೀರಿಕ್ಷಿತ ಜಿಮ್ನಿ 5-ಡೋರ್ ಅನ್ನು ಅನಾವರಣ ಮಾಡಿದೆ. ಇದು ಮೇ ತಿಂಗಳಿನಿಂದ ಭಾರತದಲ್ಲಿ ಗ್ರಾಹಕರಿಗೆ ಸಿಗಬಹುದು. ಇಂದಿನಿಂದ ಜಿಮ್ನಿಗಾಗಿ ಬುಕಿಂಗ್ ಕೂಡ ಆರಂಭವಾಗಿದ್ದು, ಈ ಆಫ್-ರೋಡ್ ವಾಹನಕ್ಕೆ ಖರೀದಿದಾರರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ 5-ಡೋರ್ ರೆಡಿಯಾಗುತ್ತಿದ್ದು, ಅಲ್ಲಿಂದಲೇ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಜಿಮ್ನಿ 5-ಡೋರ್, ಉದ್ದವಾದ ವೀಲ್‌ಬೇಸ್ ಹೊಂದಿರುವ ಎಸ್‌ಯುವಿಯಾಗಿದ್ದು, ಬಹುತೇಕ 3-ಡೋರ್ ಜಿಮ್ನಿಗೆ ಹೋಲುತ್ತದೆ. ಹೊಸ ಜಿಮ್ನಿ, ಎರಡು ಹೆಚ್ಚುವರಿ ಬಾಗಿಲುಗಳು ಹಾಗೂ ಮರುವಿನ್ಯಾಸಗೊಳಿಸಲಾದ ರೇರ್ ಕ್ವಾರ್ಟರ್‌ ಅನ್ನು ಹೊಂದಿದೆ. ಜೊತೆಗೆ ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕ್ ಆಫ್-ರೋಡ್ ಟೈರ್‌ಗಳು ಮತ್ತು ಫ್ಲೇರ್ಡ್ ವೀಲ್ ಆರ್ಚ್‌ನಂತಹ ವಿನ್ಯಾಸದ ವೈಶಿಷ್ಟ್ಯಗಳನ್ನು ಪಡೆದಿದೆ.

3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್‌ಬೇಸ್ ನೊಂದಿಗೆ ಜಿಮ್ನಿ 5-ಡೋರ್, ವೀಲ್‌ಬೇಸ್ 3-ಡೋರ್ ಜಿಮ್ನಿ ಮಾದರಿಗಿಂತ 340 ಎಂಎಂ ಉದ್ದವಾಗಿದ್ದು, 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರವನ್ನು ಹೊಂದಿದೆ. ಹೊಸದಾಗಿ ಡಿಸೈನ್ ಮಾಡಿರುವ ರೇರ್ ಡೋರ್ ಆಕರ್ಷಕವಾಗಿ ಕಾಣಲಿದ್ದು, ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಖರೀದಿಗೆ ಆಸಕ್ತಿ ತೋರಬಹುದು. ಅಲ್ಲದೆ, ಜಿಮ್ನಿ 5-ಡೋರ್ ಹಿಂಭಾಗದಲ್ಲಿ ಯಾವುದೇ ಪ್ರಮುಖ ಸ್ಟೈಲಿಂಗ್ ಬದಲಾವಣೆಗಳು ಆಗಿಲ್ಲ ಎಂದು ಹೇಳಬಹುದು.

ಹೊಸ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಎಕ್ಪೋಸ್ಡ್ ಹಿಂಜ್‌ಗಳೊಂದಿಗೆ ಸಿಂಗಲ್ ಸೈಡ್ ತೆರೆಯುವ ಡೋರ್, ಬ್ಲ್ಯಾಕ್ ಕವರಿಂಗ್ ಡೋರ್-ಮೌಂಟೆಡ್ ಸ್ಪೇರ್ ಟೈರ್ ಮತ್ತು 3-ಡೋರ್ ಜಿಮ್ನಿಯಂತೆ ಬಂಪರ್-ಮೌಂಟೆಡ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. 195/80 ಸೆಕ್ಷನ್ ಟೈರ್‌ಗಳೊಂದಿಗೆ 15-ಇಂಚಿನ ಅಲಾಯ್ ವೀಲ್ಸ್ ಅನ್ನು ಜಿಮ್ನಿ 5-ಡೋರ್ ಪಡೆದಿದೆ. ಜಿಮ್ನಿ 5-ಡೋರ್ ಒಳಭಾಗವು 3-ಡೋರ್ ಜಿಮ್ನಿ ಮಾದರಿಯಂತೆ ಇದೆ ಎಂದು ಹೇಳಬಹುದು. ಡ್ಯಾಶ್‌ಬೋರ್ಡ್ ಸಂಪೂರ್ಣ-ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ.

ಇಷ್ಟೇಅಲ್ಲದೆ, ಹೈ - ಮೌಂಟೆಡ್ 9.0-ಇಂಚಿನ ಟಚ್‌ಸ್ಕ್ರೀನ್ ಟೇಕಿಂಗ್ ಸೆಂಟರ್ ಸ್ಟೇಜ್‌ನೊಂದಿಗೆ ನೂತನ ಜಿಮ್ನಿ 5-ಡೋರ್ ಸಾಕಷ್ಟು ರಗಡ್ ಆಗಿ ಕಾಣುತ್ತದೆ. HVAC ಕಂಟ್ರೋಲ್ ನೊಂದಿಗೆ ಸ್ಟೀರಿಂಗ್ ವೀಲ್ ಮತ್ತು ವೃತ್ತಾಕಾರದ ಡಯಲ್‌ಗಳಂತಹ ಕೆಲವು ಅಂಶಗಳನ್ನು ಸ್ವಿಫ್ಟ್‌ನಂತಹ ಇತರೆ ಮಾರುತಿ ಸುಜುಕಿ ಮಾದರಿಗಳಿಗೆ ಹೋಲುತ್ತದೆ. ಇದು ಪ್ಯಾಸೆಂಜರ್ ಸೈಡ್ ಡ್ಯಾಶ್‌ಬೋರ್ಡ್-ಮೌಂಟೆಡ್ ಗ್ರ್ಯಾಬ್ ಹ್ಯಾಂಡಲ್ ಮತ್ತು ರಗಡ್ ಅಪೀಲ್ ಆಡ್ ಮಾಡುವ ಫಾಕ್ಸ್ ಎಕ್ಸ್‌ಪೋಸ್ಡ್ ಬೋಲ್ಟ್‌ಗಳನ್ನು ಸಹ ಹೊಂದಿದೆ.

ವೈಶಿಷ್ಟ್ಯದ ವಿಚಾರಗಳ ಬಗ್ಗೆ ಹೇಳುವುದಾದರೆ, ಜಿಮ್ನಿ 5-ಡೋರ್ ಮಾರುತಿಯ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆರ್ಕಮಿಸ್ ಸೌಂಡ್ ಸಿಸ್ಟಮ್ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಿದ್ದು , 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ESP, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್-ವ್ಯೂ ಕ್ಯಾಮೆರಾ ಮತ್ತು EBD ಜೊತೆಗೆ ABS ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿರುವ ಜಿಮ್ನಿ 5-ಡೋರ್ ಹಿಂದಿನ ಮಾದರಿಯಂತೆ K15B ಎಂಜಿನ್‌ ಹೊಂದಿದ್ದು, 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಹೊಂದಿರಲಿದೆ. 3-ಡೋರ್ ಜಿಮ್ನಿಯಂತೆಯೇ ಇದರ ಎಂಜಿನ್ 105 hp ಗರಿಷ್ಠ ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು ಮಾರುತಿ ಸುಜುಕಿಯ ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆದಿರಲಿದೆ.

ಮಾರುತಿ ಸುಜುಕಿ 2023ರ ಮಧ್ಯದಲ್ಲಿ ಭಾರತದಲ್ಲಿ ಜಿಮ್ನಿ 5-ಡೋರ್ ಬೆಲೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಇದರ ಬೆಲೆ ಸುಮಾರು 12 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಇರಬಹುದು. ಇದೊಂದು ಆಫ್-ರೋಡ್ ವಾಹನವಾಗಿರುವುದರಿಂದ ಹೆಚ್ಚು ಖರೀದಿದಾದಾರನ್ನು ತನ್ನತ್ತ ಸೆಳೆಯಬಹುದು. ಜಿಮ್ನಿ ದೇಶದ ಖರೀದಿಗೆ ಸಿಗಲಿರುವ 5-ಡೋರ್ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದಂತಹ ಇತರ ರಗಡ್ 5-ಡೋರ್ ಆಫ್-ರೋಡರ್‌ ವಾಹನಗಳಿಗೆ ಭಾರೀ ಪೈಪೋಟಿ ನೀಡಲಿದೆ.

Most Read Articles

Kannada
English summary
Auto expo 2023 maruti suzuki jimny 5 door revealed booking open today details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X