ಮಾರುತಿ ಸುಜುಕಿ ಜಿಮ್ನಿ Vs ಮಹೀಂದ್ರಾ ಥಾರ್ ಯಾವುದು ಉತ್ತಮ.. ಬೆಲೆ?

ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‌ಯುವಿಯನ್ನು ದೆಹಲಿ ಆಟೋ ಎಕ್ಸ್‌ಪೋ ಮೂಲಕ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ ಈ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಮಹೀಂದ್ರಾ ಥಾರ್ ಜೊತೆ ನೇರವಾಗಿ ಸ್ವರ್ಧಿಸಲಿದೆ. ಇಲ್ಲಿ ಇವೆರಡರ ಬೆಲೆ, ವೈಶಿಷ್ಟ್ಯ ಹಾಗೂ ಎಂಜಿನ್ ಸಾಮರ್ಥ್ಯದ ಬಗ್ಗೆ ಹೋಲಿಕೆ ಮಾಡಲಾಗಿದೆ.

ಸುತ್ತಳತೆ:
ಜಿಮ್ನಿ 3985 ಎಂಎಂ ಉದ್ದ, 1645 ಎಂಎಂ ಅಗಲ ಮತ್ತು 1720 ಎಂಎಂ ಎತ್ತರವನ್ನು ಹೊಂದಿದೆ. ಮಹೀಂದ್ರಾ ಥಾರ್ 3985 ಎಂಎಂ ಉದ್ದ, 1820 ಎಂಎಂ ಅಗಲ ಮತ್ತು 1850 ಎಂಎಂ ಎತ್ತರವಿದೆ. ಉದ್ದದ ವಿಚಾರದಲ್ಲಿ, ಎರಡು ಕಾರುಗಳು ಒಂದೇ ಸೈಜ್ ನಲ್ಲಿವೆ. ಥಾರ್ ಅಗಲ ಮತ್ತು ಎತ್ತರದಲ್ಲಿ ಸ್ವಲ್ಪ ದೊಡ್ಡ ಎಸ್‌ಯುವಿ ಎಂದು ಹೇಳಬಹುದು. ವೀಲ್‌ಬೇಸ್‌ಗೆ ಸಂಬಂಧಿಸಿದಂತೆ ಜಿಮ್ನಿ, ಥಾರ್‌ಗಿಂತ 145 ಎಂಎಂ ಉದ್ದವಾಗಿದೆ. ಗ್ರೌಂಡ್ ಕ್ಲಿಯರೆನ್ಸ್‌ನಲ್ಲಿ ಥಾರ್, 226 ಎಂಎಂ ಹೆಚ್ಚಿದೆ.

ಮಾರುತಿ ಸುಜುಕಿ ಜಿಮ್ನಿ Vs ಮಹೀಂದ್ರಾ ಥಾರ್ ಯಾವುದು ಉತ್ತಮ.. ಬೆಲೆ?

ಎಂಜಿನ್:

ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‌ಯುವಿ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ K15B ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 103 bhp ಗರಿಷ್ಠ ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟೆಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಕಾರಿನಲ್ಲಿ 4-ವೀಲ್ ಡ್ರೈವ್ ಆಯ್ಕೆಯು ಇದೆ.

ಮಹೀಂದ್ರಾ ಥಾರ್‌ ಎಂಜಿನ್ ಕಾರ್ಯವೈಖರಿ ಬಗ್ಗೆ ಮಾತನಾಡುವುದಾದರೆ, 1.5-ಲೀಟರ್ ಡೀಸೆಲ್, 2.0-ಲೀಟರ್ ಟರ್ಬೊ ಪೆಟ್ರೋಲ್ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 1.5-ಲೀಟರ್ ಡೀಸೆಲ್ ಎಂಜಿನ್‌ ಹೊಂದಿರುವ ಥಾರ್‌,113 bhp ಗರಿಷ್ಠ ಪವರ್ ಮತ್ತು 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುವ ರೇರ್ ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದೆ ಎಂದು ಹೇಳಬಹುದು.

ಮಹೀಂದ್ರಾ ಥಾರ್‌ 3 - ಡೋರ್, 2.2-ಲೀಟರ್ ಡೀಸೆಲ್ ಎಂಜಿನ್ 128 bhp ಪವರ್ ಮತ್ತು 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 148 bhp ಗರಿಷ್ಠ ಪವರ್ ಮತ್ತು 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇವುಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎರಡು ಆವೃತ್ತಿಗಳು 4-ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿವೆ.

ವೈಶಿಷ್ಟ್ಯಗಳು:

ಇವೆರಡೂ ಎಸ್‌ಯುವಿ ಒಂದೇ ರೀತಿ ವೈಶಿಷ್ಟ್ಯಗಳನ್ನು ಹೊಂದಿವೆ. ಕ್ರೂಸ್ ಕಂಟ್ರೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಅಸಿಸ್ಟ್ ಅನ್ನು ಪಡಿದಿವೆ. ಮಹೀಂದ್ರಾ ಥಾರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಅಡ್ವೆಂಚರ್ ಸ್ಟ್ಯಾಟಿಸ್ಟಿಕ್ಸ್, 18-ಇಂಚಿನ ಅಲಾಯ್ ವೀಲ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್ಮೆಂಟ್ ಆಯ್ಕೆ, ರೂಫ್-ಮೌಂಟೆಡ್ ಸ್ಪೀಕರ್‌ಗಳು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಮಾರುತಿ ಜಿಮ್ನಿಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳು, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ಹೆಡ್‌ಲೈಟ್ ವಾಷರ್, ಆಟೋಮೆಟಿಕ್ ಎಲ್‌ಇಡಿ ಲೈಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುವ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಭಾರತದಲ್ಲಿ ಜಿಮ್ನಿ 5-ಡೋರ್ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಮಹೀಂದ್ರಾ ಥಾರ್ 3-ಡೋರ್, ಹಾರ್ಡ್ ಟಾಪ್ ಅಥವಾ ಸಾಫ್ಟ್ ಟಾಪ್ ಆಯ್ಕೆಯಲ್ಲಿ ಲಭ್ಯವಿದೆ. ಮಹೀಂದ್ರಾ ಕೂಡ ತನ್ನ ಥಾರ್ ಅನ್ನು 5-ಡೋರ್ ಎಸ್‌ಯುವಿಯಾಗಿ ಪರಿವರ್ತಿಸುತ್ತಿದೆ.

ಬೆಲೆ:

ಮಹೀಂದ್ರಾದ ಥಾರ್ ಎಸ್‌ಯುವಿ ಬೆಲೆ 9.99 ಲಕ್ಷ ರೂ. ಇದು ರೇರ್ ವೀಲ್ ಡ್ರೈವ್ ರೂಪಾಂತರದ ದರವಾಗಿದೆ. 4 ವೀಲ್ ಡ್ರೈವ್ ರೂಪಾಂತರಗಳ ಬೆಲೆ 13.59 ಲಕ್ಷ ದಿಂದ 16.29 ಲಕ್ಷ ರೂ. ಇದೆ. ಮಾರುತಿ ಸುಜುಕಿ ಜಿಮ್ನಿಯ ಬೆಲೆ ವಿವರಗಳನ್ನು ಈವರೆಗೆ ಬಹಿರಂಗಪಡಿಸಿಲ್ಲ. ಇದನ್ನು 11,000 ರೂ. ಪಾವತಿಸಿ ಬುಕಿಂಗ್ ಮಾಡಬಹುದು. ಈ ಎಸ್‌ಯುವಿ ಮಾರುಕಟ್ಟೆಗೆ ಬಂದಾಗ 10-12 ಲಕ್ಷ ರೂ. ಬೆಲೆ ಹೊಂದರಬಹುದು. ಇವುಗಳಲ್ಲಿ ಯಾವ ಎಸ್‌ಯುವಿ ನಿಮಗೆ ಇಷ್ಟ ಕಾಮೆಂಟ್ ಮಾಡಿ, ತಿಳಿಸಿರಿ.

Most Read Articles

Kannada
English summary
Maruti suzuki jimny vs mahindra thar which is better
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X