ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟೆಡ್ 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ 2023ರ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 57.90 ಲಕ್ಷವಾಗಿದೆ.

ಈ 2023ರ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ (ಸೆಡಾನ್‌ನ ಲಾಂಗ್ ವೀಲ್‌ಬೇಸ್ ಆವೃತ್ತಿ) ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದೆ. ಇದು 330Li M ಸ್ಪೋರ್ಟ್ ಮತ್ತು 320Ld M ಸ್ಪೋರ್ಟ್ ಆಗಿದೆ. ಬಿಎಂಡಬ್ಲ್ಯು 330Li M ಸ್ಪೋರ್ಟ್ ರೂಪಾಂತರದ ಬೆಲೆಯು ರೂ. 57.90 ಲಕ್ಷವಾದರೆ, ಡೀಸೆಲ್ 320Ld M ಸ್ಪೋರ್ಟ್ ರೂಪಾಂತರದ ಬೆಲೆಯು ರೂ. 59.50 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಬಿಡುಗಡೆ

ಫೇಸ್‌ಲಿಫ್ಟೆಡ್ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಸೆಡಾನ್‌ನ ನವೀಕರಣಗಳು ಬಾಹ್ಯ ವಿನ್ಯಾಸಕ್ಕೆ ನವೀಕರಣಗಳನ್ನು ಒಳಗೊಂಡಿವೆ. ಇತರವುಗಳಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ಬಿಎಂಡಬ್ಲ್ಯುನ ಕರ್ವ್ ಡಿಸ್ ಪ್ಲೇ ಸೆಟಪ್‌ನ ಸೇರ್ಪಡೆಯಾಗಿದೆ. ಹೊರಗಿನಿಂದ ನೋಡಿದಾಗ, ಬಿಎಂಡಬ್ಲ್ಯು 3 ಸೀರಿಸ್ ಸೆಡಾನ್‌ನ ವಿಸ್ತೃತ ವೀಲ್‌ಬೇಸ್ ಆವೃತ್ತಿಯು ಗಮನಾರ್ಹವಾದ ಮೇಕ್‌ಓವರ್ ಅನ್ನು ನೀಡಲಾಗಿದೆ ಎಂದು ನಾವು ಗಮನಿಸುತ್ತೇವೆ. ಮುಂಭಾಗದಲ್ಲಿ, ಎಲ್ಇಡಿ ದೀಪಗಳು ಮೊದಲಿಗಿಂತಲೂ ನಯವಾಗಿರುತ್ತವೆ ಮತ್ತು ಸ್ಪಷ್ಟ ಬಾಹ್ಯರೇಖೆಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿವೆ.

ಇನ್ನು ಟರ್ನ್ ಇಂಡಿಕೇಟರ್ಸ್ ಗಳನ್ನು ಹೊಂದಿವೆ. ಕ್ರೋಮ್ ಡಬಲ್ ಕಿಡ್ನಿ ಗ್ರಿಲ್‌ಗಳನ್ನು ಸಹ ನವೀಕರಿಸಲಾಗಿದೆ ಮತ್ತು ಮುಂಭಾಗದ ಬಂಪರ್ ಅನ್ನು ಮರುಪ್ರೊಫೈಲ್ ಮಾಡಲಾಗಿದೆ ಮತ್ತು ಈಗ ದೊಡ್ಡ ಏರ್ ಇನ್‌ಟೇಕ್‌ಗಳನ್ನು ಹೊಂದಿದೆ. ಹಿಂಭಾಗದ ಬಂಪರ್ ಅನ್ನು ಸಹ ಟ್ವೀಕ್ ಮಾಡಲಾಗಿದೆ. ಇನ್ನು ಈ ಹೊಸ ಐಷಾರಾಮಿ 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಒಳಭಾಗದಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ಬಿಎಂಡಬ್ಲ್ಯುನ ಕರ್ವ್ ಡಿಸ್ ಪ್ಲೇಗ್ ಹೊಂದಿದೆ.

ಈ ಐಷಾರಾಮಿ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ದೊಡ್ಡದಾಗಿದೆ ಮತ್ತು BMW OS 8 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವೈರ್‌ಲೆಸ್ Apple CarPlay ಮತ್ತು Android Auto ಅನ್ನು ಬೆಂಬಲಿಸುತ್ತದೆ. ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯು 16 ಲೌಂಡ್ ಸ್ಪೀಕರ್ ಗಳೊಂದಿಗೆ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್‌ಗೆ ಸಂಪರ್ಕ ಹೊಂದಿದೆ. ಇದರೊಂದಿಗೆ 12.3-ಇಂಚಿನ ಡ್ರೈವರ್‌ನ ಡಿಸ್ ಪ್ಲೇ ಹೊಸ M ಸ್ಟೀರಿಂಗ್ ವ್ಹೀಲ್ ಹಿಂದೆ ಇರುತ್ತದೆ.

ಇನ್ನು ಗ್ರ್ಯಾನ್ ಲಿಮೋಸಿನ್ ಸೆಂಟ್ರಲ್ ಕನ್ಸೋಲ್‌ನಲ್ಲಿ ಕುಳಿತುಕೊಳ್ಳುವ ಹೊಸ (ಸಣ್ಣ) ಗೇರ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇದರೊಂದಿಗೆ M ಸ್ಪೋರ್ಟ್ ಪ್ಯಾಕೇಜ್ ಸ್ಟೀರಿಂಗ್ ವ್ಹೀಲ್ ಲೆದರ್ ನಿಂದ ಕೂಡಿದ್ದು, ಅಲ್ಯೂಮಿನಿಯಂ ರೋಂಬಿಕಲ್ ಆಂಥ್ರಾಸೈಟ್ ಫಿನಿಶ್‌ನಲ್ಲಿ ಆಂಥ್ರಾಸೈಟ್-ಬಣ್ಣದ ಹೆಡ್‌ಲೈನರ್, M- ನಿರ್ದಿಷ್ಟ ಸೀಟ್ ಅನ್ನು ಹೊಂದಿದೆ. ಹೊಸ 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಸಹ 3-ವಲಯ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಈ ಹೊಸ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ನಲ್ಲಿ 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ನೀಡಲಾಗಿದೆ. ಇವುಗಳು ಕಾರಿನ ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಇದರಲ್ಲಿ ಪೆಟ್ರೋಲ್ 330Li ಎಂಜಿನ್ 255 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದರ 320Ld ಡೀಸೆಲ್ ಎಂಜಿನ್ 188 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಲ್ಲಾ ಎಂಜಿನ್ ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.60 ಕೋಟಿ ಆಗಿದೆ. ಇದೀಗ ಬಿಎಂಡಬ್ಲ್ಯು ಕಂಪನಿಯು ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ವಿತರಣೆಯ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರು ವಿತರಣೆಯು ಈ ವರ್ಷದ ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ.

Most Read Articles

Kannada
English summary
New bmw 3 series gran limousine facelift launched features variants details
Story first published: Tuesday, January 10, 2023, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X