ಟಾಟಾ ಆಲ್ಟ್ರೋಜ್ ರೇಸರ್ Vs ಹುಂಡೈ i20 ಎನ್ ಲೈನ್: ಯಾವುದು ಬೆಸ್ಟ್?

ಭಾರತದ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬರು ಟಾಟಾ ಕಾರುಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಅವುಗಳ ಕೈಗೆಟುಕುವ ಬೆಲೆ, ಕಾರ್ಯವೈಖರಿ ಹಾಗೂ ವೈಶಿಷ್ಟ್ಯಗಳು ಎಲ್ಲರನ್ನು ಸೆಳೆಯುತ್ತದೆ. ಟಾಟಾ ಮೋಟಾರ್ಸ್ ಆಟೋ ಎಕ್ಸ್‌ಪೋದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ ರೇಸರ್‌ ಆವೃತ್ತಿಯನ್ನು ಪ್ರದರ್ಶಿಸಿದ್ದು, ಇದರ ಮೇಲೆ ಪ್ರತಿಯೊಬ್ಬರಿಗೂ ನಿರೀಕ್ಷೆಗಳು ಹೆಚ್ಚಾಗಿದೆ ಎಂದು ಹೇಳಬಹುದು.

ಟಾಟಾ ಮೋಟಾರ್ಸ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಕಾರುಗಳನ್ನು ಬಿಡುಗಡೆ ಮಾಡಿದರೂ ಅವು ಇತರೆ ಕಂಪನಿ ಕಾರುಗಳಿಗೆ ಭಾರೀ ಪೈಪೋಟಿ ನೀಡುತ್ತವೆ. ಅಲ್ಟ್ರೋಜ್ ರೇಸರ್ ಕೂಡ ಹ್ಯುಂಡೈ i20 N ಲೈನ್ ಹ್ಯಾಚ್‌ಬ್ಯಾಕ್‌ಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಲ್ಲಿ ಎರಡು ಹ್ಯಾಚ್‌ಬ್ಯಾಕ್‌ಗಳ ನಡುವೆ ಹೋಲಿಕೆ ಮಾಡಲಾಗಿದ್ದು, ಅವುಗಳ ಬೆಲೆ ಕಾರ್ಯವೈಖರಿ ಹಾಗೂ ಫೀಚರ್ಸ್ ವಿಚಾರದಲ್ಲಿ ಯಾವುದು ಬೆಸ್ಟ್ ಎಂದು ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಟಾಟಾ ಆಲ್ಟ್ರೊಜ್ ರೇಸರ್, ಹುಂಡೈ i20 ಎನ್ ಲೈನ್ ಎಂಜಿನ್:
ಟಾಟಾ ಆಲ್ಟ್ರೊಜ್ ರೇಸರ್ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್, 3 - ಸಿಲಿಂಡರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದು 5,500 rpm ನಲ್ಲಿ ಒಟ್ಟು 118.3 bhp ಗರಿಷ್ಠ ಪವರ್ ಮತ್ತು 1,750 rpm ನಲ್ಲಿ 170 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ ಎಂದು ಹೇಳಬಹುದು.

ಹ್ಯುಂಡೈ i20 N ಲೈನ್ ಎಂಜಿನ್ ಕಾರ್ಯವೈಖರಿ ಬಗ್ಗೆ ಮಾತನಾಡುವುದಾದರೆ, ಇದು ಚಿಕ್ಕದಾದ 1.0 - ಲೀಟರ್, 3 - ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಪಡೆದಿದ್ದು, 6,000 rpmನಲ್ಲಿ 118.3 bhp ಗರಿಷ್ಠ ಪವರ್ ಮತ್ತು 1,500 rpmನಲ್ಲಿ 172Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಲ್ಟ್ರೊಜ್ ರೇಸರ್‌ಗಿಂತ i20 N ಲೈನ್ 2 Nm ಅಧಿಕ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ.

ಗೇರ್‌ಬಾಕ್ಸ್ & ಬೆಲೆ:
ಗೇರ್‌ಬಾಕ್ಸ್ ಟ್ರಾನ್ಸ್‌ಮಿಷನ್ ಕುರಿತು ಹೇಳುವುದಾದರೆ, ಟಾಟಾ ಆಲ್ಟ್ರೊಜ್ ರೇಸರ್ ಕಾರು 6 - ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆದುಕೊಂಡಿದೆ. ಹುಂಡೈ i20 N ಲೈನ್ 7 - ಸ್ಪೀಡ್ DCT ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ iMT ಟ್ರಾನ್ಸ್‌ಮಿಷನ್‌ನೊಂದಿಗೆ ಖರೀದಿಗೆ ಲಭ್ಯವಾಗಲಿದೆ. ಬೆಲೆ ವಿಚಾರವಾಗಿ ಹ್ಯುಂಡೈ i20 N ಲೈನ್ ಸ್ಪೋರ್ಟಿಯರ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬೆಲೆ ರೂ.9.96 ಲಕ್ಷ ದಿಂದ ರೂ.12.02 ಲಕ್ಷ (ಎಕ್ಸ್ ಶೋರೂಂ ಇದೆ). ಟಾಟಾ ಆಲ್ಟ್ರೊಜ್ ರೇಸರ್ ರೂ.8.00 - ರೂ.12.00 ಲಕ್ಷ ಅಂದಾಜು ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಟಾಟಾ ಆಲ್ಟ್ರೊಜ್ ರೇಸರ್, ಹುಂಡೈ i20 ಎನ್ ಲೈನ್ ವೈಶಿಷ್ಟ್ಯಗಳು:
ಟಾಟಾದ ಆಲ್ಟ್ರೊಜ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಆಲ್ಟ್ರೊಜ್ ರೇಸರ್ ಪಡೆದುಕೊಂಡಿದೆ. ಇದು Apple CarPlay ಮತ್ತು Android Auto ಜೊತೆಗಿನ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಹುಂಡೈ i20 N ಲೈನ್‌ನಲ್ಲಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ದೊಡ್ಡ 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಬ್ಲೂ ಲಿಂಕ್ ಕನೆಕ್ಟ್ದ್ ಕಾರ್ ಟೆಕ್, ಸ್ಪೋರ್ಟಿ 3 - ಸ್ಪೋಕ್ ಸ್ಟೀರಿಂಗ್ ವೀಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಮತ್ತು ಗೋ,7 - ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ, ಕೂಲ್ಡ್ ಗ್ಲೋವ್‌ಬಾಕ್ಸ್, ಸನ್‌ರೂಫ್ ನಂತಹ ಇತರೆ ಫೀಚರ್ಸ್ ಅನ್ನು ಪಡೆದಿದೆ.

ಇನ್ನು, ಭಾರತದ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ರೇಸರ್, ಹ್ಯುಂಡೈ i20 N ಲೈನ್‌ಗೆ ಯೋಗ್ಯವಾದ ಪ್ರತಿಸ್ಪರ್ಧಿ ಎಂದು ಹೇಳಬಹುದು. ಈ ಮಾದರಿ ದೇಶೀಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. Altroz ರೇಸರ್ ಲಾಂಚ್ ಆದ ಮೇಲೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದು, ಇದು ಆಕರ್ಷಕ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಸಾಧ್ಯತೆಯಿದೆ.

Most Read Articles

Kannada
English summary
Tata altroz racer vs hyundai i20 n line which best
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X