ಟಾಟಾ ಮ್ಯಾಜಿಕ್ 10 ಸೀಟರ್ ಇವಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ: 140 ಕಿಮೀ ರೇಂಜ್ ನೀಡುತ್ತೆ!

ದೇಶದಲ್ಲಿ ಪ್ರತಿಯೊಬ್ಬರು ಟಾಟಾ ಕಂಪನಿ ವಾಹನಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇದೀಗ ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟ ವಿಭಾಗದಲ್ಲೂ ಟಾಟಾ ಮೋಟಾರ್ಸ್ ಮುಂದಿದ್ದು, ಆಟೋ ಎಕ್ಸ್‌ಪೋದಲ್ಲಿ ಹೊಸ ಮ್ಯಾಜಿಕ್ ಇವಿಯನ್ನು ಪರಿಚಯಿಸಿದೆ. ಇದು ಕಳೆದ ವರ್ಷ ಅನಾವರಣಗೊಂಡ ಏಸ್ (Ace) ಇವಿಗೆ ಹೋಲುತ್ತದೆ.

'ಟಾಟಾ ಮ್ಯಾಜಿಕ್' ಹಲವು ವರ್ಷಗಳಿಂದ ಪ್ಯಾಸೆಂಜರ್ ಮಾರುಕಟ್ಟೆ ವಿಭಾಗದಲ್ಲಿ ಯಶಸ್ವಿಯಾಗಿರುವ ಕಮರ್ಷಿಯಲ್ ವಾಹನವಾಗಿದೆ. ಶೂನ್ಯ ಹೊರಸೂಸುವಿಕೆ (zero emission) ಮ್ಯಾಜಿಕ್ ಇವಿಯ ಅನಾವರಣದೊಂದಿಗೆ ಟಾಟಾ ಮೋಟಾರ್ಸ್, 2045ರ ವೇಳೆಗೆ ತನ್ನ ಕಮರ್ಷಿಯಲ್ ವೆಹಿಕಲ್ ವ್ಯಾಪಾರ - ವಹಿವಾಟಿನಲ್ಲಿ ಸಂಪೂರ್ಣ ಇವಿಗಳನ್ನೂ ಹೊಂದಿರಲು ಯೋಜಿಸಿದೆ. ಈ ಹೊಸ ಮ್ಯಾಜಿಕ್ ಇವಿಯನ್ನು ಶಾಲಾ ವಾಹನ ಹಾಗೂ ಆಂಬ್ಯುಲೆನ್ಸ್ ಆಗಿಯೂ ಬಳಕೆ ಮಾಡಬಹುದಾಗಿದೆ. ಇದು ಗ್ರಾಹಕರನ್ನು ಆಕರ್ಷಿಸಲಿದ್ದು, ಖರೀದಿಯನ್ನು ಮಾಡಬಹುದು.

ಟಾಟಾ ಮ್ಯಾಜಿಕ್ 10 ಸೀಟರ್ ಇವಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ: 140 ಕಿಮೀ ರೇಂಜ್ ನೀಡುತ್ತೆ!

ಮ್ಯಾಜಿಕ್ ಇವಿ ಡ್ರೈವರ್ + 10 ಸೀಟರ್ ಪ್ಯಾಸೆಂಜರ್ ವೆಹಿಕಲ್ ಆಗಿದೆ. ಇದು 3,790 ಎಂಎಂ ಉದ್ದ, 1,500 ಎಂಎಂ ಅಗಲ, 2,100 ಎಂಎಂ ಉದ್ದದ ವೀಲ್‌ಬೇಸ್‌ ಹಾಗೂ 160 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಜೀರೋ ಎಮಿಷನ್ ಮಾನದಂಡ ಹೊಂದಿರುವ ಟಾಟಾ ಮ್ಯಾಜಿಕ್ ಇವಿ ಸುಧಾರಿತ ಬ್ಯಾಟರಿ ಕೂಲಿಂಗ್ ಸಿಸ್ಟಮ್ ಮತ್ತು ಐಪಿ 67 ರೇಟೆಡ್ ವಾಟರ್ ಮತ್ತು ಡಸ್ಟ್ ಪ್ರೂಫ್ ಡ್ರೈವಿಂಗ್ ಅನ್ನು ಹೊಂದಿರಲಿದೆ.

ಇದು 14-20 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸುಮಾರು 90-115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಿಂಗಲ್ ಸ್ಪೀಡ್ ಟ್ರಾನ್ಸ್‌ಮಿಷನ್‌ ಆಯ್ಕೆ ಪಡೆದಿದ್ದು, ಫ್ರಂಟ್ ಮತ್ತು ರೇರ್ ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಸಿಸ್ಟಮ್ ಪಡೆದಿದ್ದು, ಇದು ಸ್ಲೋ, ಫಾಸ್ಟ್ ಮತ್ತು ಹೋಮ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಮನೆಯ ವಿದ್ಯುತ್ ಬಳಸಿ, 6 - 6.5 ಗಂಟೆಗಳಲ್ಲಿ ಇದರ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಬಹುದು.

ಟಾಟಾ ಮ್ಯಾಜಿಕ್ 10 ಸೀಟರ್ ಇವಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ: 140 ಕಿಮೀ ರೇಂಜ್ ನೀಡುತ್ತೆ!

ವೇಗದ ಚಾರ್ಜಿಂಗ್ ಆಯ್ಕೆಯಲ್ಲಿ 1.1 - 1.7 ಗಂಟೆಗಳಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗಲಿದೆ. ಇದು 140 ಕಿ.ಮೀ. ವರೆಗೆ ರೇಂಜ್ ನೀಡಲಿದೆ. ಈ ಮ್ಯಾಜಿಕ್ ಇವಿ 7 ಇಂಚಿನ TFT ಇನ್ಫೋಟೈನ್‌ಮೆಂಟ್ ಸಿಸ್ಟಂ, ವಾಯ್ಸ್ ಅಸಿಸ್ಟ್ ಮತ್ತು ರಿವರ್ಸ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ನೂತನ ಟಾಟಾ ಮ್ಯಾಜಿಕ್ ಇವಿ, ಯಾವಾಗ ಮಾರುಕಟ್ಟೆಗೆ ಬರಲಿದೆ. ಬೆಲೆ ಎಷ್ಟಿರಲಿದೆ ಎಂಬ ವಿವರಗಳನ್ನು ಟಾಟಾ ಮೋಟಾರ್ಸ್ ಈವರೆಗೆ ಪ್ರಕಟಿಸಿಲ್ಲ. ಅದು ಶೀಘ್ರದಲ್ಲೇ ತಿಳಿಯಲಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಾಟಾ ಮ್ಯಾಜಿಕ್ ಎಕ್ಸ್‌ಪ್ರೆಸ್, 10 ಸೀಟರ್ ರೂ.7.27 - 7.77 ಲಕ್ಷ (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ. ಇಂದೊದು ಡೀಸೆಲ್ ಚಾಲಿತ ವಾಹನವಾಗಿದೆ. ಇದು SCR ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ 800 ಸಿಸಿ, BS6, 33 kW (44 HP) ಎಂಜಿನ್ ಹೊಂದಿದ್ದು, 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 21.84 km/l ಮೈಲೇಜ್ ನೀಡುತ್ತದೆ.

ಟಾಟಾ ಮ್ಯಾಜಿಕ್ 10 ಸೀಟರ್ ಇವಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ: 140 ಕಿಮೀ ರೇಂಜ್ ನೀಡುತ್ತೆ!

ಟಾಟಾ ಮ್ಯಾಜಿಕ್ ಎಕ್ಸ್‌ಪ್ರೆಸ್ 80 ಕಿಮೀ/ಗಂಟೆ ಟಾಪ್ ಸ್ವೀಡ್ ಹೊಂದಿದ್ದು, ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಫ್ಯುಯೆಲ್ ಸೇವಿಂಗ್ ECO ಸ್ವಿಚ್, USB ಚಾರ್ಜರ್, ಗೇರ್ ಶಿಫ್ಟ್ ಅಡ್ವೈಸರ್, ನ್ಯೂ ಇನ್ಸ್ರುಮೆಂಟ್ ಕ್ಲಸ್ಟರ್, ರೇರ್ ಪಾರ್ಕ್ ಅಸಿಸ್ಟ್, ಟ್ಯೂಬ್‌ಲೆಸ್ ಟೈರ್ ಅನ್ನು ಹೊಂದಿದೆ ಎಂದು ಹೇಳಬಹುದು. ಒಟ್ಟಾರೆಯಾಗಿ, ಮ್ಯಾಜಿಕ್ ಎಕ್ಸ್‌ಪ್ರೆಸ್ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 2 ವರ್ಷ/72,000 ಕಿಮೀಗಳ ವಾರಂಟಿಯನ್ನು ಹೊಂದಿದೆ.

ಇನ್ನು, ಟಾಟಾ ಮೋಟಾರ್ಸ್ ನಗರಗಳಲ್ಲಿ ಬಳಸಬಹುದಾದ ಕಾರ್ಗೋ ವಾಹನವಾಗಿರುವ ಏಸ್ ಇವಿ ವಿತರಣೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಇದರ ಬೆಲೆ ಗ್ರಾಹಕರ ಕೈಗೆಟುಕಲಿದ್ದು, ಬರೋಬ್ಬರಿ ರೂ.9.99 ಲಕ್ಷದಿಂದ ಆರಂಭವಾಗಲಿದೆ (ಎಕ್ಸ್ ಶೋರೂಂ, ದೆಹಲಿ). ಏಸ್ ಇವಿಯು EVOGEN ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಒಂದೇ ಚಾರ್ಜಿನಲ್ಲಿ ಗರಿಷ್ಠ 154 ಕಿ.ಮೀ ರೇಂಜ್ ನೀಡಲಿದೆ. ಗರಿಷ್ಠ 36 hp ಗರಿಷ್ಠ ಪವರ್ ಮತ್ತು 130 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Tata magic electric 10 Seater showcased auto expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X