ಮುಂಗಾರು ಮಳೆ ಕಾರು ಖರೀದಿಗೆ ಸೂಕ್ತ ಕಾಲ
'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಎಂಬಂತಾಗಿದೆ ಸದ್ಯ ಕಾರು ಮಾರುಕಟ್ಟೆಯ ಬೆಳವಣಿಗೆಗಳು. ಹಾಗೊಂದು ವೇಳೆ ನೀವು ಕಾರು ಖರೀದಿಗೆ ಯೋಚಿಸುತ್ತಿದ್ದರೆ ಇನ್ನು ತಡ ಮಾಡಬೇಡಿರಿ. ಇದೇ ಸೂಕ್ತ ಕಾಲ. ಯಾಕೆಂದರೆ ಆಟೊ ಜಗತ್ತಿನ ಬಹುತೇಕ ಕಂಪನಿಗಳು ಮಾರಾಟ ಕುಸಿತವನ್ನು ತಡೆಗಟ್ಟಲು ಭಾರಿ ರಿಯಾಯಿತಿ ದರಗಳನ್ನು ಘೋಷಿಸಿವೆ.
ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಎಂಟ್ರಿ ಲೆವೆಲ್ ಆಲ್ಟೊ ಕಾರಿಗೆ 43,000 ರು. ವರೆಗೂ ರಿಯಾಯಿತಿ ದರ ಘೋಷಿಸಿವೆ. ಇನ್ನು ಮಿಡ್ ಸೈಜ್ ಎಸ್‌ಎಕ್ಸ್4 ಸೆಡಾನ್ ಕಾರಿಗೂ 83,000 ರು.ವರೆಗೂ ಡಿಸ್ಕೌಂಟ್ ಜಾರಿಯಲ್ಲಿದೆ.
ದೇಶದ ಕಾರು ಮಾರುಕಟ್ಟೆ ಇತಿಹಾಸದಲ್ಲೇ ಕಂಪನಿಗಳು ಇಷ್ಟು ದೊಡ್ಡ ಮೊತ್ತದ ಡಿಸ್ಕೌಂಟ್‌ಗಳನ್ನು ಘೋಷಿಸಿರುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಡ್ರೈವ್ ಸ್ಪಾರ್ಕ್ ಗ್ರಾಹಕರಲ್ಲಿ ವಿನಂತಿಸಿಕೊಳ್ಳುತ್ತಿದೆ.
ಯಾವ ಯಾವ ಕಾರು ಸಂಸ್ಥೆಗಳು ಎಷ್ಟೆಷ್ಟು ಡಿಸ್ಕೌಂಟ್ ದರಗಳನ್ನು ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ತಿರುವಿರಿ...ಮುಂದಿನ ಎರಡು ತಿಂಗಳ ವರೆಗೂ ಡಿಸ್ಕೌಂಟ್ ಮುಂದುವರಿಯುವ ಸಾಧ್ಯತೆಗಳಿವೆ.

ಟಾಟಾ ಆರಿಯಾ
ದರ ಮಾಹಿತಿ: 10.17 - 14.95 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 1.42 ಲಕ್ಷ ರು.

ಹ್ಯುಂಡೈ ಸಾಂಟಾ ಫೆ
ದರ ಮಾಹಿತಿ: 22.39 - 26.48 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 1.15 ಲಕ್ಷ ರು.

ಹ್ಯುಂಡೈ ಸೊನಾಟಾ
ದರ ಮಾಹಿತಿ: 18.78 - 20.87 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 1.09 ಲಕ್ಷ ರು.

ಮಾರುತಿ ಎಕ್ಸ್x4
ದರ ಮಾಹಿತಿ: 7.38 - 9.8 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 83,000

ರೆನೊ ಪಲ್ಸ್
ದರ ಮಾಹಿತಿ: 4.44 - 6.81 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 60,000

ರೆನೊ ಸ್ಕಾಲಾ
ದರ ಮಾಹಿತಿ: 7.19 - 9.68 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 55,000

ಹ್ಯುಂಡೈ ಐ10
ದರ ಮಾಹಿತಿ: 3.75 - 5.51 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 53,500

ನಿಸ್ಸಾನ್ ಮೈಕ್ರಾ
ದರ ಮಾಹಿತಿ: 4.30 - 6.75 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 50,000

ಟಾಟಾ ಇಂಡಿಗೊ ಇಸಿಎಸ್
ದರ ಮಾಹಿತಿ: 4.98 - 6.03 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 48,000

ಮಾರುತಿ ವ್ಯಾಗನಾರ್
ದರ ಮಾಹಿತಿ: 3.61 - 4.48 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 46,000

ಹ್ಯುಂಡೈ ಎಲಂಟ್ರಾ
ದರ ಮಾಹಿತಿ: 12.71 - 16.04 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 45,000

ಟಾಟಾ ನ್ಯಾನೋ
ದರ ಮಾಹಿತಿ: 1.53 - 2.18 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 45,000 ರು.

ಮಾರುತಿ ಆಲ್ಟೊ 800
ದರ ಮಾಹಿತಿ: 2.77 - 3.17 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 43,000 ರು.

ಮಾರುತಿ ಆಲ್ಟೊ ಕೆ10
ದರ ಮಾಹಿತಿ: 3.25 - 3.38 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 43,000 ರು.

ಮಾರುತಿ ಎರ್ಟಿಗಾ ಡೀಸೆಲ್
ದರ ಮಾಹಿತಿ: 7.39 - 8.71 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 43,000 ರು.

ಷೆವರ್ಲೆ ಸೈಲ್ ಯುವಿಎ
ದರ ಮಾಹಿತಿ: 4.19 - 6.71 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 28,000 ರು.

ಹ್ಯುಂಡೈ ಸಾಂಟ್ರೊ
ದರ ಮಾಹಿತಿ: 3.00 - 3.94 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 26,300 ರು.

ಮಹೀಂದ್ರ ಕ್ವಾಂಟೊ
ದರ ಮಾಹಿತಿ: 5.99 - 7.75 ಲಕ್ಷ ರು.
ಗರಿಷ್ಠ ಡಿಸ್ಕೌಂಟ್: 26,000 ರು.


Click it and Unblock the Notifications








