ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿಗೆ ಭಾರಿ ಬೇಡಿಕೆ

By Nagaraja

2013 ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಗೊಂಡಿದ್ದ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವುದಾಗಿ ಕಂಪನಿ ತಿಳಿಸಿದೆ.

ಐ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಬಳಿಕ ಇದೇ ಸರಪಣಿಯಲ್ಲಿ ಗುರುತಿಸಿಕೊಂಡಿರುವ ಕಾರು ಬಿಎಂಡಬ್ಲ್ಯು ಐ8 ಆಗಿದೆ. ಅಲ್ಲದೆ ಈ ಅವಧಿಯಲ್ಲಷ್ಟೇ ಒಂದು ವರ್ಷಕ್ಕೆ ಬೇಕಾದಷ್ಟು ಆರ್ಡರ್‌ಗಳನ್ನು ಗಿಟ್ಟಿಸಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಫ್ರಂಟ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜತೆಗೆ 1.5 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೂಡಾ ಹೊಂದಿರಲಿದೆ. ಇದು ಗಂಟೆಗೆ ಕೇವಲ 4.7 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಕ್ಷಮತೆ ಹೊಂದಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಹಾಗಿದ್ದರೂ ವಾರ್ಷಿಕವಾಗಿ ಎಷ್ಟು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರುಗಳನ್ನು ಉತ್ಪಾದಿಸಲಿದೆ ಎಂಬುದಕ್ಕೆ ಕಂಪನಿಯಿಂದ ನಿಖರ ಮಾಹಿತಿ ಬಂದಿಲ್ಲ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

1990ರ ದಶಕದ ಮಧ್ಯಂತರ ಅವಧಿಯಲ್ಲಿ ಮಾರಾಟವಾಗುತ್ತಿದ್ದ 8 ಸಿರೀಸ್ ಸೆಡಾನ್ ಕಾರಿಗೆ ಉತ್ತರಾಧಿಕಾರಿಯಾಗಿ ಬಿಎಂಡಬ್ಲ್ಯು ಐ8 ಕಾಣಿಸಿಕೊಂಡಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಇದು ಬಿಎಂಡಬ್ಲ್ಯು‌ನಿಂದ ಆಗಮನವಾಗಿರುವ ಮೊದಲ ಆಧುನಿಕ ಹೈಬ್ರಿಡ್ ಸ್ಪೋರ್ಟ್ಸ್ ಕಾರಾಗಿದೆ. ಮುಂದಿನ ವರ್ಷಗಳಲ್ಲಿ ಈ ಸರಪಣಿಯಲ್ಲಿ ಇನ್ನಷ್ಟು ಕಾರುಗಳು ಕಾಣಸಿಗಲಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಎರಡು ಸೀಟಿನ ಈ ಕೂಪೆ ಕಾರನ್ನು ಕಾರ್ಬನ್ ಫೈಬರ್‌ನಿಂದ ನಿರ್ಮಿಸುತ್ತಿರುವುದು ಭಾರ ಕಡಿಮೆ ಮಾಡಲು ನೆರವಾಗಲಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಈ ನಡುವೆ ಯುರೋಪ್ ಮಾರುಕಟ್ಟೆ ಪ್ರವೇಶಿಸಿರುವ ಐ3 ಹ್ಯಾಚ್‌ಬ್ಯಾಕ್ ಕಾರಿಗೆ 10,000ದಷ್ಟು ಬುಕ್ಕಿಂಗ್ಸ್ ಕಂಡುಬಂದಿತ್ತು.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಬಿಎಂಡಬ್ಲ್ಯು ಪೈಕಿ ಅತಿ ಸಣ್ಣ ಕಾರಾಗಿರುವ ಐ3 ಕಾರಿನಲ್ಲಿ ನಾಲ್ಕು ಜನರಿಗೆ ಕುಳಿತುಕೊಳ್ಳಬಹುದಾದ ವ್ಯವಸ್ಥೆಯಿದೆ.

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಜತೆಗೆ ಹೈಬ್ರಿಡ್ ವರ್ಷನ್ ಕೂಡಾ ಕೆಲಸ ಮಾಡಲಿದೆ.

Most Read Articles

Kannada
English summary
BMW has announced that it has already got a year’s worth of orders for its new i8 sports car just two months after its official unveiling at the 2013 Frankfurt Motor Show.
Story first published: Tuesday, November 26, 2013, 11:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X