ಸೆಪ್ಟೆಂಬರ್- ಯಾವ ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್?

Written By:

ಯಾವುದೇ ವಸ್ತು ಖರೀದಿಸುವಾಗ ಅದರಲ್ಲಿ ರಿಯಾಯಿತಿ ದರವೇನಾದರೂ ಇದೆಯಾ ಎಂಬುದನ್ನು ಮೊದಲು ಪರಿಶೀಲಿಸುವುದು ನಮ್ಮ ದೇಶದಲ್ಲಿ ಮಾತ್ರ ಕಂಡಬರುತ್ತಿರುವ ದೃಶ್ಯ. ಇದರಿಂದ ಕಾರು ಮಾರುಕಟ್ಟೆ ಕೂಡಾ ಹೊರತಾಗಿಲ್ಲ.

ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್‌ಗಳನ್ನು ಮುಂದಿರುಡುತ್ತಿರುವ ಕಾರು ತಯಾರಕ ಸಂಸ್ಥೆಗಳು ಈ ಮುಖಾಂತರ ಮಾರಾಟ ಕುದುರಿಸಿಕೊಳ್ಳುವ ಯೋಜನೆಯಲ್ಲಿದೆ. ಇದೀಗ ಈ ಲೇಖನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಲಭ್ಯವಿರುವ ದೇಶದ ಪ್ರಮುಖ ಕಾರು ಕಂಪನಿಗಳ ಆಫರುಗಳ ಬಗ್ಗೆ ವಿವರಿಸಲಿದ್ದೇವೆ. ಇದಕ್ಕಾಗಿ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದಕ್ಕೆ ಸಾಗಿರಿ...

ವಿ.ಸೂ: ಈ ಎಲ್ಲ ಆಫರುಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಸಾಧ್ಯತೆಗಳಿದ್ದು, ಹಾಗಾಗಿ ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಸ್ಥಳೀಯ ಡೀಲರುಶಿಪ್‌ಗಳನ್ನು ಸಂಪರ್ಕಿಸಬೇಕಾಗಿ ವಿನಂತಿಕೊಳ್ಳುತ್ತಿದ್ದೇವೆ.

ಆಡಿ

ಆಡಿ

ಆಡಿ4 ಸಲೂನ್- ಪೆಟ್ರೋಲ್, ಡೀಸೆಲ್ ವರ್ಷನ್‌ಗಳಿಗೆ 4ರಿಂದ 5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್,

ಆಡಿ ಎ6 ಸಲೂನ್- 5 ಲಕ್ಷದ ವರೆಗೆ ರಿಯಾಯಿತಿ ದರ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಬಿಎಂಡಬ್ಲ್ಯು 320ಐ- 4ರಿಂದ 5 ಲಕ್ಷ ರು.ಗಳ ವರೆಗೆ,

ಬಿಎಂಡಬ್ಲ್ಯು ಡಿ- 3 ರಿಂದ 4.5 ಲಕ್ಷ ರು.ಗಳ ವರೆಗೆ,

ಬಿಎಂಡಬ್ಲ್ಯು 520ಡಿ- 6 ಲಕ್ಷ ರು.ಗಳ ವರೆಗೆ,

ಎಕ್ಸ್1 ಎಸ್‌ಯುವಿ- 4.5 ಲಕ್ಷ ರು.ಗಳ ವರೆಗೆ

ಷೆವರ್ಲೆ

ಷೆವರ್ಲೆ

ಸೈಲ್ ಹ್ಯಾಚ್‌ಬ್ಯಾಕ್- ಒಟ್ಟು ರು. 33,000 ವರೆಗೆ ಉಳಿತಾಯ (ರು. 3,000 ನಗದು, 5,000 ರು. ಕಾರ್ಪೋರೇಟ್, ಎಕ್ಸ್‌ಚೇಂಜ್ ಬೋನಸ್ 15,000 ರು., ಲಾಯಲ್ಟಿ ಬೋನಸ್ ರು. 10,000),

ಸೈಲ್ ಸಲೂನ್- ಒಟ್ಟು ರು. 35,000 ವರೆಗೆ ಉಳಿತಾಯ (ರು. 5,000 ನಗದು, 5,000 ರು. ಕಾರ್ಪೋರೇಟ್, ಎಕ್ಸ್‌ಚೇಂಜ್ ಬೋನಸ್ 15,000 ರು., ಲಾಯಲ್ಟಿ ಬೋನಸ್ ರು. 10,000,)

ಫೋರ್ಡ್

ಫೋರ್ಡ್

ಫಿಗೊ ಹ್ಯಾಚ್‌ಬ್ಯಾಕ್- 37,000 ರು. ವರೆಗೆ (ಉಚಿಮ ವಿಮೆ ಹಾಗೂ ಇತರೆ ಡಿಸ್ಕೌಂಟ್),

ಫಿಯೆಸ್ಟಾ ಸಲೂನ್- 1.12 ಲಕ್ಷ ರು.ಗಳ ಡಿಸ್ಕೌಂಟ್,

ಎಂಡೋವರ್- ರು. 1 ಲಕ್ಷದ ವರೆಗೆ ಡಿಸ್ಕೌಂಟ್

ಹೋಂಡಾ

ಹೋಂಡಾ

ಹೋಂಡಾ ಸಿಟಿ- ಉಚಿತ ವಿಮೆ, ರು. 10,000 ವರೆಗೆ ಡಿಸ್ಕೌಂಟ್,

ಹೋಂಡಾ ಬ್ರಿಯೊ- ಉಚಿತ ವಿಮೆ, 10,000 ರು. ವರೆಗೆ ಡಿಸ್ಕೌಂಟ್

ಹ್ಯುಂಡೈ

ಹ್ಯುಂಡೈ

ಹ್ಯುಂಡೈ ಎಲಂಟ್ರಾ (ಪೆಟ್ರೋಲ್, ಡೀಸೆಲ್)- ಎಕ್ಸ್‌ಚೇಂಜ್ ಬೋನಸ್ ರು. 25,000, ಕಾರ್ಪೋರೇಟ್ ಡಿಸ್ಕೌಂಟ್ ರು. 20,000 ಹಾಗೂ ನಗದು ಡಿಸ್ಕೌಂಟ್ ರು. 20,000

ಮಾರುತಿ ಸುಜುಕಿ

ಮಾರುತಿ ಸುಜುಕಿ

ವ್ಯಾಗನಾರ್- ಒಟ್ಟು 68,000 ರು. ವರೆಗೆ ಡಿಸ್ಕೌಂಟ್ (ಎಕ್ಸ್‌ಚೇಂಜ್ ಬೋನಸ್ ರು. 30,000, ನಗದು ಡಿಸ್ಕೌಂಟ್ ರು. 35,000, ಕಾರ್ಪೋರೇಟ್ ಡಿಸ್ಕೌಂಟ್ ರು. 3,000)

ಮಾರುತಿ ಎಸ್ಟಿಲೊ- ಎಕ್ಸ್‌ಚೇಂಜ್ ಬೋನಸ್ ರು. 30,000, ನಗದು ರಿಯಾಯಿತಿ ದರ ರು. 35,000 ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ ರು. 3,000

ಮಹೀಂದ್ರ

ಮಹೀಂದ್ರ

ಬುಲೊರೊ- ರು. 20,000 ವರೆಗೆ

ಸ್ಕಾರ್ಪಿಯೊ- ರು. 40,000 ವರೆಗೆ

ಕ್ವಾಂಟೊ- ರು. 44,000 ವರೆಗೆ

ಟೊಯೊಟಾ

ಟೊಯೊಟಾ

ಇಟಿಯೋಸ್- 21,000 ರು. ವರೆಗೆ

ಇನ್ನೋವಾ- 15,000 ರು. ವರೆಗೆ, ಎಕ್ಸ್‌ಚೇಂಜ್ ಬೋನಸ್ ರು. 10,000 ವರೆಗೆ

English summary
Car Makers are offering massive discount on cars this September 2013. Step in, to know discounts on car this month.
Story first published: Monday, September 2, 2013, 8:00 [IST]
Please Wait while comments are loading...

Latest Photos